ನುವಾನ್ ತುಷಾರ 
ಕ್ರಿಕೆಟ್

IPL 2026: ಶ್ರೀಲಂಕಾ ಕ್ರಿಕೆಟ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ RCB ಆಟಗಾರ; ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ?

ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಲಾಗಿದ್ದು, ಗುರುವಾರ ಕೊಲಂಬೊ ಜಿಲ್ಲಾ ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಶ್ರೀಲಂಕಾದ ವೇಗಿ ನುವಾನ್ ತುಷಾರ ಐಪಿಎಲ್ 2026ರಲ್ಲಿ ಭಾಗವಹಿಸಲು ಎನ್‌ಒಸಿ ನೀಡದ ಕಾರಣ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ನ ಉನ್ನತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ನಿಗದಿತ ಫಿಟ್‌ನೆಸ್ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ತುಷಾರ ಅವರಿಗೆ ಎನ್‌ಒಸಿ ನೀಡಲಾಗಿಲ್ಲ. ಆದರೆ ಈಗ, ಐಪಿಎಲ್ ಆಡಲು ಅವಕಾಶ ನೀಡುವಂತೆ ಎಸ್‌ಎಲ್‌ಸಿಗೆ ನಿರ್ದೇಶನ ನೀಡುವಂತೆ ಕೋರಿ ವೇಗಿ ಪ್ರಕರಣ ದಾಖಲಿಸಿದ್ದಾರೆ. ವರದಿ ಪ್ರಕಾರ, ತುಷಾರ ಅವರು ತಮ್ಮ ಕೇಂದ್ರ ಒಪ್ಪಂದವನ್ನು ನವೀಕರಿಸದಿರಲು ಎಸ್‌ಎಲ್‌ಸಿಗೆ ತಿಳಿಸಿದ್ದಾರೆ.

ಶ್ರೀಲಂಕಾ ಮೂಲದ ಮಾಧ್ಯಮ ಸಂಸ್ಥೆ ನ್ಯೂಸ್‌ವೈರ್ ವರದಿ ಪ್ರಕಾರ, ತುಷಾರ ಅವರು ತಮ್ಮ ದೂರಿನಲ್ಲಿ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ, ಕಾರ್ಯದರ್ಶಿ ಬಂಡುಲಾ ದಿಸಾನಾಯಕೆ, ಖಜಾಂಚಿ ಸುಜೀವ ಗೋಡಾಲಿಯಡ್ಡ ಮತ್ತು ಸಿಇಒ ಆಶ್ಲೇ ಡಿ ಸಿಲ್ವಾ ಅವರನ್ನು ಪ್ರತಿವಾದಿಗಳೆಂದು ಹೆಸರಿಸಿದ್ದಾರೆ.

ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಲಾಗಿದ್ದು, ಗುರುವಾರ ಕೊಲಂಬೊ ಜಿಲ್ಲಾ ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ವರದಿ ಪ್ರಕಾರ, ತುಷಾರ ಅವರು SLC ಜೊತೆಗಿನ ತಮ್ಮ ಒಪ್ಪಂದವು ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಈ ಒಪ್ಪಂದವನ್ನು ನವೀಕರಿಸದಿರಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ತಮ್ಮ ಇಚ್ಛೆಯನ್ನು ಮಂಡಳಿಗೆ ತಿಳಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ತಮ್ಮ ವೃತ್ತಿಜೀವನದ ಬಹುಪಾಲು ಫಿಟ್ನೆಸ್ ಮಟ್ಟವು ಹಾಗೆಯೇ ಇದೆ ಎಂದು ತುಷಾರ ವಾದಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಹಿಂದೆ ಇದು ಅವರಿಗೆ NOC ಪಡೆಯುವ ಸಾಧ್ಯತೆಗಳಿಗೆ ಅಡ್ಡಿಯಾಗಲಿಲ್ಲ.

ಈ ಷರತ್ತುಗಳ ಪರಿಣಾಮವಾಗಿ, ತಮಗೆ NOC ನೀಡದಿರುವ ನಿರ್ಧಾರ ನ್ಯಾಯಸಮ್ಮತವಲ್ಲ ಎಂದು ತುಷಾರಾ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.

2025ರಲ್ಲಿ ಆರ್‌ಸಿಬಿ ಈ ಶ್ರೀಲಂಕಾ ಆಟಗಾರನನ್ನು ₹1.6 ಕೋಟಿಗೆ ಖರೀದಿಸಿತು. ಇದೀಗ ಎನ್‌ಒಸಿ ಪಡೆಯಲು ವಿಫಲವಾದರೆ ಅವರಿಗೆ ಗಮನಾರ್ಹ ಆರ್ಥಿಕ ಮತ್ತು ಅವಕಾಶ ನಷ್ಟವಾಗುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈಮಧ್ಯೆ, ಆರ್‌ಸಿಬಿ ಐಪಿಎಲ್ 2026ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ತಮ್ಮ ಮೊದಲ ಪಂದ್ಯದಲ್ಲಿ ಸೋಲಿಸಿ ಶುಭಾರಂಭ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ