ಸಂಜೀವ್ ಗೋಯೆಂಕಾ-ರಿಷಬ್ ಪಂತ್ 
ಕ್ರಿಕೆಟ್

IPL 2026: ಕೊನೆಗೂ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ ಲಖನೌ; ಕಣ್ಣೀರು ಹಾಕಿದ ಸಂಜೀವ್ ಗೋಯೆಂಕಾ, Video!

ಇಂಡಿಯನ್ ಪ್ರಿಮಿಯರ್ ಲೀಗ್ (IPL ) 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ.

ಇಂಡಿಯನ್ ಪ್ರಿಮಿಯರ್ ಲೀಗ್ (IPL ) 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 156 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂತ್ ಅವರ ಅಜೇಯ 68 ರನ್‌ಗಳ ನೆರವಿನಿಂದ ಲಖನೌ 19.5 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 160 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಇನ್ನು ಇದು ಸನ್‌ರೈಸರ್ಸ್‌ನ ಮೂರು ಪಂದ್ಯಗಳಲ್ಲಿ ಎರಡನೇ ಸೋಲು. ಪಂತ್ ಜೊತೆಗೆ, ಲಕ್ನೋ ಪರ ಮಿಚೆಲ್ ಮಾರ್ಷ್ 45 ರನ್ ಗಳಿಸಿದರು.

ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರೇ ಟ್ರಾವಿಸ್ ಹೆಡ್ ಅವರ ಆಟ ಕೇವಲ 7 ರನ್‌ಗಳಿಗೆ ಔಟಾಗಿ ಪೆವಿಲಿಯನ್ ಸೇರಿದರು. ಇಶಾನ್ ಕಿಶನ್ 1 ರನ್ ಗಳಿಸಿ ಔಟಾದರೇ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಕೇವಲ 14 ರನ್ ಗಳಿಸಲು ಸಾಧ್ಯವಾಯಿತು. ತಂಡ ಸಂಕಷ್ಟದಲ್ಲಿದ್ದಾಗ ಹೆನ್ರಿಕ್ ಕ್ಲಾಸೆನ್ 62 ರನ್ ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 56 ರನ್ ಗಳಿಸಿದರು. ಹೀಗಾಗಿ ತಂಡದ 156 ರನ್ ಕಲೆಹಾಕಲು ಸಾಧ್ಯವಾಯಿತು. ಲಖನೌ ಪರ ಮೊಹಮ್ಮದ್ ಶಮಿ 2, ಪ್ರಿನ್ಸ್ ಯಾದವ್ 2, ಆವೇಶ್ ಖಾನ್ 2, ದಿಗ್ವೇಶ್ ಸಿಂಗ್ ರಥಿ 1 ಮತ್ತು ಮಣಿಮಾರನ್ ಸಿದ್ಧಾರ್ಥ್ 1 ವಿಕೆಟ್ ಪಡೆದರು.

ಲಕ್ನೋ ಸೂಪರ್ ಜೈಂಟ್ಸ್ ಪರ ಏಡನ್ ಮಾರ್ಕ್ರಾಮ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 45 ರನ್ ಕಲೆಹಾಕಿದರು. ಮತ್ತೊಂದೆಡೆ ರಿಷಬ್ ಪಂತ್ ಏಕಾಂಗಿ ಹೋರಾಟ ನಡೆಸಿದ್ದು 68 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಚಿನ್ನಸ್ವಾಮಿ ಮೈದಾನದಲ್ಲಿ CSK ಮಣಿಸಿದ RCB, ಚೆನ್ನೈಗೆ ಸತತ 3ನೇ ಸೋಲು!

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

48 ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!

Operation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

SCROLL FOR NEXT