ವೈಭವ್ ಸೂರ್ಯವಂಶಿ ಜೊತೆಗೆ ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

IPL 2026: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಸೋಲು; ಆದರೂ, ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ!

'ಅವರು ಬ್ಯಾಟಿಂಗ್ ಮಾಡುವ ರೀತಿ, ಅವರ ನಿರ್ಭಯತೆ, ಅವರ ಹೊಡೆತಗಳನ್ನು ನೋಡಲು ಅದ್ಭುತವಾಗಿದೆ. ಭವಿಷ್ಯದಲ್ಲಿ ಅವರಿಗೆ ಶುಭವಾಗಲಿ ಎಂದು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.

ಮಂಗಳವಾರ ನಡೆದ ಐಪಿಎಲ್ 2026ರ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಡುವಿನ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ವೇಗಿ ಜಸ್ಪ್ರೀತ್ ಬುಮ್ರಾ ಅವರ ಎಸೆತದಲ್ಲಿ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಮಳೆಯಿಂದಾಗಿ 11 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ ಗಳಿಸಿದರು. ಇದರಿಂದಾಗಿ ಆರ್‌ಆರ್ ಕೇವಲ 2.4 ಓವರ್‌ಗಳಲ್ಲಿಯೇ 50 ರನ್‌ಗಳ ಗಡಿ ತಲುಪಿತು. ಸೂರ್ಯವಂಶಿಯಿಂದ ಪ್ರಭಾವಿತರಾದ ಅನೇಕರಲ್ಲಿ ಎಂಐ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಆಟದ ನಂತರ ಅವರು ಸೂರ್ಯವಂಶಿಯನ್ನು ಅಭಿನಂದಿಸಿದರು.

'17 ಅಥವಾ 16 ವರ್ಷದ ಹುಡುಗನೊಬ್ಬ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ನೋಡುವುದು ತುಂಬಾ ಆಕರ್ಷಕವಾಗಿದೆ. ಅದೇ ಸಮಯದಲ್ಲಿ, ಪಂದ್ಯಕ್ಕೆ ಮುನ್ನ ತಯಾರಿ ನಡೆಸುವಾಗ ನಾವು ಆತನ ಬಗ್ಗೆ ತುಂಬಾ ಚರ್ಚಿಸಿದೆವು' ಎಂದು ಪಂದ್ಯದ ನಂತರ ಪಾಂಡ್ಯ ಹೇಳಿದರು.

'ಹೌದು, ಅವರು ಬ್ಯಾಟಿಂಗ್ ಮಾಡುವ ರೀತಿ, ಅವರ ನಿರ್ಭಯತೆ, ಅವರ ಹೊಡೆತಗಳನ್ನು ನೋಡಲು ಅದ್ಭುತವಾಗಿದೆ. ಭವಿಷ್ಯದಲ್ಲಿ ಅವರಿಗೆ ಶುಭವಾಗಲಿ ಎಂದು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.

ಮಳೆಯಿಂದ ಕಡಿತಗೊಂಡ ಐಪಿಎಲ್ ಪಂದ್ಯವನ್ನು ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಪಟಾಕಿ ಪ್ರದರ್ಶನವನ್ನಾಗಿ ಪರಿವರ್ತಿಸಿದರು. ರಾಜಸ್ಥಾನ್ ರಾಯಲ್ಸ್ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಜೈಸ್ವಾಲ್ ಅವರ ಅಜೇಯ 77 ರನ್ (32 ಎಸೆತಗಳಲ್ಲಿ) ಮತ್ತು ಸೂರ್ಯವಂಶಿ ಅವರ ಸ್ಫೋಟಕ 39 ರನ್‌ಗಳ ನೆರವಿನಿಂದ ರಾಜಸ್ಥಾನ 11 ಓವರ್‌ಗಳಲ್ಲಿ 3 ವಿಕೆಟ್‌ ಗಳಿಗೆ ನಷ್ಟಕ್ಕೆ 150 ರನ್ ಗಳಿಸಿತು.

ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವನ್ನು ಕಟ್ಟಿಹಾಕಲು ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 9 ವಿಕೆಟ್‌ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಸಾಧ್ಯವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದಿಂದ ಹಿಂದೆ ಸರಿದ ಅಮೆರಿಕಾ-ಇರಾನ್: ಪಾಕ್ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ, ಹಾರ್ಮುಜ್ ಮಾರ್ಗ ಮತ್ತೆ ರೀಓಪನ್..!

West-Asia war: 2 ವಾರಗಳ ಕದನ ವಿರಾಮಕ್ಕೆ ಅಮೆರಿಕಾ-ಇರಾನ್ ಒಪ್ಪಿಗೆ, ಟೆಹ್ರಾನ್ ಮುಂದಿಟ್ಟಿರುವ ಡಿಮ್ಯಾಂಡ್ ಗಳು ಇವೇ ನೋಡಿ..!

ಇರಾನ್ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ: ಲೆಬನಾನ್ ಹೊರಗುಳಿಸಿದ ಬೆಂಜಮಿನ್ ನೆತನ್ಯಾಹು; ಇಸ್ರೇಲ್ ದ್ವಂದ್ವ ನಿಲುವು..!

West Asia conflict: ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ಭಾರೀ ಕುಸಿತ..!

ಅಮೆರಿಕ- ಇರಾನ್ ನಡುವೆ ಯಶಸ್ವಿ ಸಂಧಾನ: ಏ.10ಕ್ಕೆ ಇಸ್ಲಾಮಾಬಾದ್ ನಲ್ಲಿ ಮಹತ್ವದ ಮಾತುಕತೆ, ಪಾಕಿಸ್ತಾನದಿಂದ ಅಧಿಕೃತ ಆಹ್ವಾನ!

SCROLL FOR NEXT