ಕೆಎಲ್ ರಾಹುಲ್ 
ಕ್ರಿಕೆಟ್

IPL 2026: ಅರ್ಧಶತಕ ಗಳಿಸುತ್ತಿದ್ದಂತೆ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಕೆ.ಎಲ್ ರಾಹುಲ್! Video

ಅರ್ಧ ಶತಕವನ್ನು ಹೃದಯಸ್ಪರ್ಶಿ ಸನ್ನೆಯೊಂದಿಗೆ ತನ್ನ ಮಗಳಿಗೆ ಅರ್ಪಿಸಿದರು. ರಾಹುಲ್ ಅರ್ಧ ಶತಕ ಗಳಿಸುತ್ತಿದ್ದಂತೆಯೇ ತನ್ನ ಕೈಯನ್ನು ಎತ್ತಿ ವಿಶಿಷ್ಟ ಸನ್ಹೆಯ ಮೂಲಕ ತನ್ನ ಮಗಳಿಗೆ ಅರ್ಪಿಸಿದರು.

ನವದೆಹಲಿ: ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಕೆಎಲ್ ರಾಹುಲ್ 51 ಎಸತೆಗಳಲ್ಲಿ 92 ರನ್ ಗಳಿಸುವ ಮೂಲಕ ಮೂರನೇ ಬಾರಿಗೆ ಶತಕದಿಂದ ವಂಚಿತರಾದರು.

ಆದರೆ ಅರ್ಧ ಶತಕವನ್ನು ಹೃದಯಸ್ಪರ್ಶಿ ಸನ್ನೆಯೊಂದಿಗೆ ತನ್ನ ಮಗಳಿಗೆ ಅರ್ಪಿಸಿದರು. ರಾಹುಲ್ ಅರ್ಧ ಶತಕ ಗಳಿಸುತ್ತಿದ್ದಂತೆಯೇ ತನ್ನ ಕೈಯನ್ನು ಎತ್ತಿ ವಿಶಿಷ್ಟ ಸನ್ಹೆಯ ಮೂಲಕ ತನ್ನ ಮಗಳಿಗೆ ಅರ್ಪಿಸಿದರು. ಬಳಿಕ ಪ್ರೇಕ್ಷಕರತ್ತ ಬ್ಯಾಟ್ ಎತ್ತಿ ಸಂಭ್ರಮಿಸಿದರು. ಸ್ವೀಟ್ ಟ್ರಿಬ್ಯೂಟ್ ನೊಂದಿಗೆ ಅಭಿಮಾನಿಗಳ ಹೃದಯ ಕದ್ದರು.

ಇದಕ್ಕೂ ಮುನ್ನಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 210 ರನ್ ಕಲೆ ಹಾಕಿತ್ತು.

ಈ ಬೃಹತ್ ಗುರಿ ಬೆನ್ನಟ್ಟುವಾಗ ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕ್ರೀಸ್ ಗೆ ಅಂಟಿಕೊಂಡು ಆಟವಾಡಿದ ಕೆ. ಎಲ್ ರಾಹುಲ್ ಕೇವಲ 52 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ನೆರೆವಿನಿಂದ 92 ರನ್ ಗಳಿಸಿ ಶತಕದಿಂದ ವಂಚಿತರಾದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿ 90 ರ ಅಂಕಿಗೆ ಔಟ್ ಆಗುವ ಶತಕದಿಂದ ವಂಚಿತರಾದರು. ಆದರೆ, ಈ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ 1 ರನ್ ಗಳಿಂದ ರೋಚಕ ಸೋಲು ಅನುಭವಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel