ಯುವರಾಜ್ ಸಿಂಗ್ ಮತ್ತು ಜಸ್ ಪ್ರೀತ್ ಬುಮ್ರಾ 
ಕ್ರಿಕೆಟ್

ನೀನ್ ಯಾರೇ ಆಗಿದ್ರೂ ಸರಿ.. ನಿಲ್ಸು: ಯಂಗ್ Jasprit Bumrah ಗೆ ಯುವರಾಜ್ ಸಿಂಗ್ ಹೀಗೆ ಹೇಳಿದ್ದು ಯಾಕೆ?

ಕ್ಯಾನ್ಸರ್ ಅನ್ನು ಸೋಲಿಸಿ ಭಾರತ ತಂಡಕ್ಕೆ ಮರಳಿದ ಮತ್ತು ಮಾರಕ ಕಾಯಿಲೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮಾತನಾಡಿದ್ದರು.

ನವದೆಹಲಿ: ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಮ್ಯಾಚ್ ವಿನ್ನರ್ ಮತ್ತು ಸ್ಫೋಟಕ ಬ್ಯಾಟರ್ ಗಳಲ್ಲಿ ಗುರುತಿಸಿಕೊಂಡಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಜಸ್ ಪ್ರೀತ್ ಬುಮ್ರಾ ಗೆ ಬೆದರಿದ್ದ ಕ್ಷಣವನ್ನು ಮೆಲುಕು ಹಾಕಿದ್ದಾರೆ.

ಹೌದು.. ಭಾರತೀಯ ಕ್ರಿಕೆಟ್ ತಂಡ ಫಿಯರ್ಲೆಸ್ ಕ್ರಿಕೆಟಿಗರಲ್ಲಿ ಅಗ್ರಗಣ್ಯರಾಗಿ ಕಾಣುವ ಯುವರಾಜ್ ಸಿಂಗ್ ಓರ್ವ 16 ವರ್ಷದ ಯುವ ಬೌಲರ್ ಗೆ ಬೆದರಿದ್ದರು ಎಂದರೆ ನೀವು ನಂಬಲೇಬೇಕು..

ಅಚ್ಚರಿ ಎಂದರೆ ಅಂದು ಯುವಿಯನ್ನು ಬೆದರಿಸಿದ್ದ ಅದೇ ಬೌಲರ್ ಇಂದು ಅಂತಾರಾಷ್ಟ್ರೀಯ ಶ್ರೇಷ್ಠ ಬೌಲರಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಮೆರೆಯುತ್ತಿದ್ದಾರೆ. ಇಷ್ಟಕ್ಕೂ ಯಾರು ಆ ಬೌಲರ್? ಬೇರಾರು ಅಲ್ಲ ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬುಮ್ರಾ..

ಯೂಟ್ಯೂಬ್‌ನಲ್ಲಿ ದಿ ಓವರ್‌ಲ್ಯಾಪ್ ಪಾಡ್‌ಕ್ಯಾಸ್ಟ್‌ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾಘನ್ ಅವರೊಂದಿಗಿನ ಸಂಭಾಷಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಯುವರಾಜ್, ಕ್ಯಾನ್ಸರ್ ಅನ್ನು ಸೋಲಿಸಿ ಭಾರತ ತಂಡಕ್ಕೆ ಮರಳಿದ ಮತ್ತು ಮಾರಕ ಕಾಯಿಲೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮಾತನಾಡಿದ್ದರು.

ಅದರ ಮುಂದುವರೆದ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಬಳಿಕ ತಂಡ ಸೇರಿಕೊಳ್ಳಲು ಹವಣಿಸುತ್ತಿದ್ದ ಯುವಿ ನೆಟ್ಸ್ ನಲ್ಲಿ ಬೆವರು ಸುರಿಸಿದ್ದರು. ಅದೇ ಸಮಯದಲ್ಲಿ 16 ವರ್ಷದ ಯಂಗ್ ಜಸ್ ಪ್ರೀತ್ ಬುಮ್ರಾ ಅವರನ್ನು ಯುವರಾಜ್ ನೋಡಿದ್ದರು. ಯುವಿ ಬ್ಯಾಟ್ ಮಾಡುತ್ತಿದ್ದಾಗ ಬುಮ್ರಾ ಅವರಿಗೆ ಬೌಲಿಂಗ್ ಮಾಡುತ್ತಿದ್ದರು.

ಕ್ಯಾನ್ಸರ್ ನಿಂದ ಚೇತರಿಸಿಕೊಂಡ ನಂತರ ಉನ್ನತ ಮಟ್ಟದ ಕ್ರಿಕೆಟ್ ಗೆ ಮರಳಲು ಪ್ರಯತ್ನಿಸುತ್ತಿದ್ದಾಗ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಿದ್ದನ್ನು ಮಾಜಿ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ನೆನಪಿಸಿಕೊಂಡಿದ್ದಾರೆ. 16 ವರ್ಷದ ಬುಮ್ರಾ ನೆಟ್ ಸೆಷನ್ ನಲ್ಲಿ ರಾಕೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ತಮ್ಮನ್ನು ಹೇಗೆ ಕೆರಳಿಸಿದರು ಎಂಬುದನ್ನು ಮಾಜಿ ಎಡಗೈ ಬ್ಯಾಟ್ಸ್ ಮನ್ ಬಹಿರಂಗಪಡಿಸಿದ್ದಾರೆ.

“ನಾನು ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾಗ, ಅವನಿಗೆ ಸುಮಾರು 16 ವರ್ಷ ವಯಸ್ಸಾಗಿತ್ತು ಮತ್ತು ನೆಟ್ಸ್‌ನಲ್ಲಿ ವೇಗದ ಬೌಲಿಂಗ್ ಮೂಲಕ ಎಲ್ಲರನ್ನೂ ಬೆದರಿಸುತ್ತಿದ್ದನು. ನಾನು ಒಂದು ಹಂತದಲ್ಲಿ ನಾನು ಆತನನ್ನು ನೆಟ್ಸ್ ನಿಂದ ಹೊರಗಿಡಬೇಕು ಎಂದು ಅಂದುಕೊಂಡಿದ್ದೆ.

ನಾನು ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿದ್ದೆ. ಆದರೆ ಈ ವ್ಯಕ್ತಿ ಮಾರಕ ಎಸೆತಗಳನ್ನು ಬೌಲಿಂಗ್ ಮಾಡುತ್ತಿದ್ದ. ಹೀಗಾಗಿ ನಾನು, ‘ಮಗು, ನಿಲ್ಲಿಸು - ನೀನು ಯಾರೇ ಆಗಿರಲಿ. ಮೊದಲು ಬೌಲಿಂಗ್ ಮಾಡುವುದನ್ನು ನಿಲ್ಲಿಸು ಎಂದು ಹೇಳಿದ್ದೆ ಎಂದು ಯುವಿ ಹೇಳಿದ್ದಾರೆ.

ಅಂತೆಯೇ ನಾನು ಅವನಿಗೆ, ‘ನೀನು ತುಂಬಾ ವೇಗವಾಗಿ ಬೌಲಿಂಗ್ ಮಾಡುತ್ತಿದ್ದಿಯಾ.. ನಾನು ಈಗಷ್ಟೇ ಚೇತರಿಸಿಕೊಂಡು ನನ್ನ ವಲಯಕ್ಕೆ ಬರಲು ಪ್ರಯತ್ನಿಸುತ್ತಿದ್ದೇನೆ’ ಎಂದು ಹೇಳಿದೆ ಎಂದು ಯುವಿ ಹೇಳಿದರು.

ಅಂತೆಯೇ ಬುಮ್ರಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಯುವಿ, 'ಅವನು ಖಂಡಿತವಾಗಿಯೂ ದೀರ್ಘ ರನ್-ಅಪ್ ಹೊಂದಿದ್ದನು. ಆಗ ಅವನಿಗೆ ಅಷ್ಟು ಕೌಶಲ್ಯವಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಅವನು ಚುರುಕಾಗಿದ್ದ. ಅವನ ಆಕ್ಷನ್‌ನಿಂದ, ಅವನಿಗೆ ಆ ಮೋಸಗೊಳಿಸುವ ಬೌನ್ಸ್ ಇದೆ, ಅವನು ಯಾವಾಗಲೂ ನಿಮ್ಮ ಪಕ್ಕೆಲುಬುಗಳಿಗೆ ತಲುಪುತ್ತಲೇ ಇರುತ್ತಾನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

2013ರಲ್ಲಿ ಬುಮ್ರಾ

ಇನ್ನು ಜಸ್ಪ್ರೀತ್ ಬುಮ್ರಾ 2013 ರಲ್ಲಿ ಯಾವುದೇ ಸ್ವರೂಪದಲ್ಲಿ ಪಾದಾರ್ಪಣೆ ಮಾಡಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಯುವಿ, 2013 ರಲ್ಲಿ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 2013 ರಲ್ಲಿ ಬುಮ್ರಾ ಐಪಿಎಲ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು, ವಿರಾಟ್ ಕೊಹ್ಲಿ ಅವರ ಮೊದಲ ವಿಕೆಟ್ ಆಗಿತ್ತು ಎಂದು ಯುವರಾಜ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

ಹಾವನ್ನಾದ್ರೂ ನಂಬಬಹುದು ಆದ್ರೆ.. ಬಿಜೆಪಿ ಮಾತ್ರ ಬೇಡ: ಅಸ್ಸಾಂ ಎಲೆಕ್ಷನ್ ಗೆ 50,000 ಹೊರಗಿನ ಜನರು! ಇದೇನಿದು ಮಮತಾ ಆರೋಪ?

Zombie Drug: ದಾರಿತಪ್ಪಿಸುವ ವಿಡಿಯೋ ಶೇರ್ ಮಾಡಿದ್ದ ವ್ಯಕ್ತಿಯ ಬಂಧನ; ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಪಶ್ಚಿಮ ಬಂಗಾಳ: ಮಹಿಳೆಯರಿಗೆ 3,000 ರೂ. ಆರ್ಥಿಕ ನೆರವು: 1 ಕೋಟಿ ಉದ್ಯೋಗ, ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

IPL 2026, RR vs RCB: ಗುವಾಹಟಿಯಲ್ಲಿ ಭಾರೀ ಮಳೆಯಿಂದ ಟಾಸ್ ವಿಳಂಬ

SCROLL FOR NEXT