ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2026 ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗರಿಷ್ಠ ಮೊತ್ತ ಪೇರಿಸಿದ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಆರ್ ಸಿಬಿಯ ಫಿಲ್ ಸಾಲ್ಟ್ (78 ರನ್)ಸ ವಿರಾಟ್ ಕೊಹ್ಲಿ (50 ರನ್), ನಾಯಕ ರಜತ್ ಪಾಟಿದಾರ್ (53 ರನ್) ಮತ್ತು ಟಿಮ್ ಡೇವಿಡ್ (ಅಜೇಯ 34) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಪರಿಣಾಮ ಆರ್ ಸಿಬಿ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿ ಮುಂಬೈಗೆ ಗೆಲ್ಲಲು 241 ರನ್ ಗಳ ಬೃಹತ್ ಗುರಿ ನೀಡಿದೆ.
ವಾಂಖೆಡೆಯಲ್ಲಿ ಅತ್ಯಧಿಕ ಮೊತ್ತ!
ಇನ್ನು ಆರ್ ಸಿಬಿಯ ಈ ಮೊತ್ತ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯಲ್ಲಿ ದಾಖಲಾದ ತಂಡವೊಂದರ ಅತ್ಯಧಿಕ ಮೊತ್ತ ಎಂಬ ದಾಖಲೆಗೆ ಪಾತ್ರವಾಗಿದೆ.
ಈ ಹಿಂದೆ ಅಂದರೆ 2015ರಲ್ಲಿ ಇದೇ ಮೈದಾನದಲ್ಲಿ ಆರ್ ಸಿಬಿ ತಂಡ 235 ರನ್ ಪೇರಿಸಿತ್ತು. ಇದು ಈವರೆಗೆ ಈ ಮೈದಾನದಲ್ಲಿ ದಾಖಲಾಗಿದ್ದ ಗರಿಷ್ಠ ಮೊತ್ತವಾಗಿತ್ತು.
ಇದೀಗ ಈ ದಾಖಲೆಯನ್ನು 240 ರನ್ ಪೇರಿಸುವ ಮೂಲಕ ಆರ್ ಸಿಬಿ ತನ್ನದೇ ದಾಖಲೆಯನ್ನುತಾನೇ ಮುರಿದಿದೆ.
ಐಪಿಎಲ್ ಇತಿಹಾಸದ ಆರ್ ಸಿಬಿಯ 6ನೇ ಗರಿಷ್ಠ ಮೊತ್ತ
ಅಂತೆಯೇ ಇದು ಐಪಿಎಲ್ ಇತಿಹಾಸದ ಆರ್ ಸಿಬಿ ತಂಡದ 6ನೇ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 2013ರಲ್ಲಿ ಪಂಜಾಬ್ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 263 ರನ್ ಕಲೆಹಾಕಿತ್ತು. ಇಂದು ವಾಂಖೆಡೆಯಲ್ಲಿ ಮುಂಬೈ ವಿರುದ್ಧ 240 ರನ್ ಕಲೆಹಾಕಿದೆ.
Highest totals for RCB in IPL
263/5 vs PWI, Bengaluru, 2013
262/7 vs SRH, Bengaluru, 2024
250/3 vs CSK, Bengaluru, 2026
248/3 vs GL, Bengaluru, 2016
241/7 vs PBKS, Dharamsala, 2024
240/4 vs MI, Wankhede, 2026*
ಗರಿಷ್ಠ ಬಾರಿ 200+ ಸ್ಕೋರ್, 2ನೇ ಬಾರಿ ಆರ್ ಸಿಬಿ ಸಾಧನೆ
ಇನ್ನು ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ 200+ ಸ್ಕೋರ್ ಮಾಡಿದ ತಂಡಗಳ ಪೈಕಿ ಆರ್ ಸಿಬಿ ಒಟ್ಟು 4 ಬಾರಿ ಈ ಸಾಧನೆ ಮಾಡಿದ ತಂಡವಾಗಿದೆ. ಹಾಲಿ ಟೂರ್ನಿಯಲ್ಲಿ ಆರ್ ಸಿಬಿ ಒಟ್ಟು 4 ಬಾರಿ 200ಕ್ಕೂ ಅಧಿಕ ಮೊತ್ತವನ್ನು ಕಲೆಹಾಕಿದ ಸಾಧನೆ ಮಾಡಿದೆ. ಈ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಒಟ್ಟು 5 ಬಾರಿ ಈ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದೆ.
Most successive 200-plus totals in IPL
5 - SRH (2025-26)
4 - PBKS (2023)
4 - RCB (2024)
4 - RCB (2026-ongoing)*
ಜಿತೇಶ್ ಶರ್ಮಾ ಸಾವಿರ ರನ್ ಪೂರೈಕೆ
ಇನ್ನು ಇದೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕೂಡ ಸಾವಿರ ರನ್ ಸಾಧನೆಗೆ ಪಾತ್ರರಾದರು. ಜಿತೇಶ್ ಇಂದು 9ಎಸೆತಗಳಲ್ಲಿ 1 ಬೌಂಡರಿ ಸಹಿತ 10 ರನ್ ಕಲೆಹಾಕಿದ್ದರು. ಆ ಮೂಲಕ ಐಪಿಎಲ್ ನಲ್ಲಿ ಅವರು 1 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಜಿತೇಶ್ ಶರ್ಮಾ ಅಂತಿಮ ಓವರ್ ನಲ್ಲಿ ಟ್ರೆಂಟ್ ಬೌಲ್ಟ್ ರ ಎಲ್ ಬಿ ಬಲೆಗೆ ಬಿದ್ದರು.