ಶೇನ್ ವಾರ್ನ್ ಮತ್ತು ಪುತ್ರ ಜಾಕ್ಸನ್ ವಾರ್ನ್ 
ಕ್ರಿಕೆಟ್

COVID ಲಸಿಕೆ, ಸರ್ಕಾರವೇ ಆಸಿಸ್ ಸ್ಪಿನ್ ದಿಗ್ಗಜನ ಸಾವಿಗೆ ಕಾರಣ: Shane Warne ಪುತ್ರನ ಸ್ಫೋಟಕ ಹೇಳಿಕೆ!

ಶೇನ್ ವಾರ್ನ್ ಅವರ ಹಠಾತ್ ನಿಧನದ ನಾಲ್ಕು ವರ್ಷಗಳ ನಂತರ, ಅವರ ಮಗ ಜಾಕ್ಸನ್ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆಯ ಸಾವು ಬಹುಶಃ ಬಲವಂತದ ಕೋವಿಡ್ ಲಸಿಕೆಗಳಿಂದಾಗಿರಬಹುದು ಎಂದು ಹೇಳಿದ್ದಾರೆ.

ಸಿಡ್ನಿ: ಕ್ರಿಕೆಟ್ ಜಗತ್ತನ್ನು ಆಘಾತಕ್ಕೀಡುಮಾಡಿದ್ದ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಮೃತಪಟ್ಟು ನಾಲ್ಕು ವರ್ಷಗಳೇ ಕಳೆದಿದ್ದು, ಇಂದಿಗೂ ಅವರ ಸಾವು ನಿಗೂಢವಾಗಿಯೇ ಇದೆ. ಇದೇ ಸಂರ್ಭದಲ್ಲಿ ಅವರ ಪುತ್ರ ಜಾಕ್ಸನ್ ವಾರ್ನ್ ತಮ್ಮ ತಂದೆಯೇ ಸಾವಿನ ಕುರಿತು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಶೇನ್ ವಾರ್ನ್ ಅವರ ಹಠಾತ್ ನಿಧನದ ನಾಲ್ಕು ವರ್ಷಗಳ ನಂತರ, ಅವರ ಮಗ ಜಾಕ್ಸನ್ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆಯ ಸಾವು ಬಹುಶಃ ಬಲವಂತದ ಕೋವಿಡ್ ಲಸಿಕೆಗಳಿಂದಾಗಿರಬಹುದು ಎಂದು ಹೇಳಿದ್ದಾರೆ.

'2 ವರ್ಲ್ಡ್ಸ್ ಕೊಲೈಡ್ ಪಾಡ್‌ಕ್ಯಾಸ್ಟ್' ನಲ್ಲಿ ಮಾತನಾಡಿದ ಜಾಕ್ಸನ್, 'ನಮ್ಮ ತಂದೆ ಕೆಲ ಆರೋಗ್ಯ ಸಮಸ್ಯೆಗಳಿದಿದ್ದು ನಿಜ. ಆದರೆ ಅವರ ಸಾವಿನಲ್ಲಿ COVID ಲಸಿಕೆ ಕಾರಣವಿತ್ತು ಎಂದು ನಾನು ಖಂಡಿತವಾಗಿಯೂ ಭಾವಿಸುತ್ತೇನೆ. ಅದು ಇನ್ನು ಮುಂದೆ ವಿವಾದಾತ್ಮಕವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

ವಾರ್ನ್ ಸಾವಿನ ಸುದ್ದಿಯನ್ನು ಸ್ವೀಕರಿಸಿದ ನಂತರ ‘ಅಪ್ಪ ತೀರಿಹೋದ ಸುದ್ದಿ ಕೇಳಿ ಫೋನ್ ಕೆಳಗಿಟ್ಟ ಕೂಡಲೇ, ನನ್ನ ಮೊದಲ ಆಲೋಚನೆ ಸರ್ಕಾರವನ್ನು ದೂಷಿಸುವುದಾಗಿತ್ತು. ನಾನು ತಕ್ಷಣವೇ ಕೋವಿಡ್ ಮತ್ತು ಲಸಿಕೆಯನ್ನು ದೂಷಿಸಿದ್ದೆ.

ತಂದೆಯವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡದಂತೆ ತಮ್ಮನ್ನು ತಾವು ತಡೆದುಕೊಂಡಿದ್ದ ಕುರಿತು ಮಾತನಾಡಿದ ಜಾಕ್ಸನ್ ವಾರ್ನ್, ‘ಅಂದು ಹಾಗೆ ಮಾಡದಿರುವುದು ಒಳ್ಳೆಯದಾಯಿತು, ಒಂದು ವೇಳೆ ಮಾತನಾಡಿದ್ದರೆ ಇಂದು ನಾನು ಬೇರೆಯೇ ಪರಿಸ್ಥಿತಿಯಲ್ಲಿರುತ್ತಿದ್ದೆ. ಆದರೆ, ನನ್ನ ಮನಸ್ಸಿನ ಭಾವನೆ ಮಾತ್ರ ಅದೇ ಆಗಿತ್ತು’ ಎಂದು ಹೇಳಿದ್ದಾರೆ.

‘ಈ ಹಿಂದೆಯೂ ಅನೇಕರು ಹೃದಯಾಘಾತದಿಂದ ಸಾಯುತ್ತಿದ್ದರು. ಆದರೆ, ಅಪ್ಪ ಚೆನ್ನಾಗಿದ್ದರು. ಅವರು ಮೂರು ಅಥವಾ ನಾಲ್ಕನೇ ಡೋಸ್ ಕೋವಿಡ್‌ ಲಸಿಕೆ ಪಡೆದಿದ್ದರು. ಅವರಿಗೆ ಲಸಿಕೆ ಪಡೆಯುವುದು ಇಷ್ಟವಿರಲಿಲ್ಲ, ಆದರೆ, ಕೆಲಸದ ಕಾರಣಕ್ಕಾಗಿ ಎಲ್ಲರಂತೆ ಅವರು ಕೂಡ ಒತ್ತಾಯಪೂರ್ವಕವಾಗಿ ಲಸಿಕೆ ಪಡೆದಿದ್ದರು’ ಎಂದು ಜಾಕ್ಸನ್ ಹೇಳಿದ್ದಾರೆ.

80 ಮತ್ತು 90ರ ವಯಸ್ಸಿನ ಅನೇಕ ಜನರು ಈಗಲೂ ಬದುಕಿದ್ದಾರೆ

ಶೇನ್ ವಾರ್ನ್ ಜೀವನಶೈಲಿಯ ಬಗ್ಗೆ ಮಾತನಾಡಿದ ಜಾಕ್ಸನ್, ತಂದೆಯವರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೂ ಸಹ, ಆರೋಗ್ಯ ಸ್ಥಿತಿ ಉತ್ತಮವಾಗಿತ್ತು. ‘ಅಪ್ಪ ಕೋವಿಡ್‌ ಸಂದರ್ಭದಲ್ಲಿ ಆರೋಗ್ಯವಾಗಿದ್ದರು ಮತ್ತು ಸಂತೋಷವಾಗಿದ್ದರು. ಆದರೆ, 80 ಮತ್ತು 90ರ ವಯಸ್ಸಿನ ಅನೇಕ ಜನರು ಅಪ್ಪನಿಗಿಂತ ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾ ಇಂದಿಗೂ ಬದುಕಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಅಂದಹಾಗೆ 2022ರ ಮಾರ್ಚ್‌ನಲ್ಲಿ ಥೈಲ್ಯಾಂಡ್‌ನ ಕೊ ಸಮುಯಿ ದ್ವೀಪದಲ್ಲಿ ವಿಹರಿಸುತ್ತಿದ್ದ ವೇಳೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದರು. 2021ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ‘ದಿ ಹಂಡ್ರೆಡ್’ ಟೂರ್ನಿಯ ತರಬೇತಿಯ ವೇಳೆ ವಾರ್ನ್ ಅವರಿಗೆ ಕೋವಿಡ್ ತಗುಲಿತ್ತು. ಆದರೆ, ಅವರು ಹಠಾತ್ ನಿಧನವಾದ ಸಂದರ್ಭದಲ್ಲಿ ಅವರಿಗೆ ಯಾವುದೇ ದೊಡ್ಡ ಕಾಯಿಲೆಗಳಿರಲಿಲ್ಲ.

1991ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶೇನ್ ವಾರ್ನ್, ಲೆಗ್-ಸ್ಪಿನ್ ಕಲೆಯನ್ನು ಉತ್ತುಂಗಕ್ಕೇರಿಸಿದ ಕೀರ್ತಿಗೆ ಪಾತ್ರರಾದವರು. ಆಸ್ಟ್ರೇಲಿಯಾ ಕ್ರಿಕೆಟ್‌ನ ಸುವರ್ಣ ಯುಗದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದ ಅವರು, ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

ನವದೆಹಲಿ: ಸಂಪುಟ ಪುನರ್ ರಚನೆಗೆ ಪಟ್ಟು, ಹಿರಿಯ ನಾಯಕರೊಂದಿಗೆ ಚರ್ಚಿಸದೆ ಬೆಂಗಳೂರಿಗೆ ವಾಪಸ್ ಆಗಲ್ಲ: ಅಶೋಕ್ ಪಟ್ಟಣ್

ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ: ಜಮೀರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ; ಶೀಘ್ರದಲ್ಲೇ ತಲೆದಂಡ ಸಾಧ್ಯತೆ

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ನಮ್ಮ ಬೆಕ್ಕು ಪ್ರೆಗ್ನೆಂಟ್ ಆಗಲು ನಿಮ್ಮ ಗಂಡು ಬೆಕ್ಕೇ ಕಾರಣ; ಮಾರಾಮಾರಿ! Video ನೋಡಿ

SCROLL FOR NEXT