ಮಾಡೆಲ್ ಲಿಜ್‌ಲಾಜ್ - ವಿರಾಟ್ ಕೊಹ್ಲಿ Photo | Instagram | AFP
ಕ್ರಿಕೆಟ್

ಇನ್‌ಸ್ಟಾಗ್ರಾಂನಲ್ಲಿ ದಕ್ಷಿಣ ಆಫ್ರಿಕಾದ ಮಾಡೆಲ್ ಫೋಟೊ 'ಲೈಕ್' ಮಾಡಿದ ವಿರಾಟ್ ಕೊಹ್ಲಿ?; 'ಅಲ್ಗಾರಿದಮ್' ಮೀಮ್ಸ್ ಹಾವಳಿ!

'ಲೈಕ್' ಕಂಡುಬಂದ ನಂತರ, ಈ ಸ್ಕ್ರೀನ್‌ಶಾಟ್‌ಗಳು ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದವು.

ಭಾರತೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರನ್ನು ಮತ್ತೊಮ್ಮೆ 'ಲೈಕ್' ವಿವಾದ ಹಿಂಬಾಲಿಸುತ್ತಿದೆ. 2025ರಲ್ಲಿ, ಕೊಹ್ಲಿ ಭಾರತೀಯ ಮಾಡೆಲ್/ಇನ್‌ಫ್ಲೂಯನ್ಸರ್ ಅವನೀತ್ ಕೌರ್ ಅವರ ಫೋಟೊವನ್ನು ತಪ್ಪಾಗಿ ಲೈಕ್ ಮಾಡಿದ್ದರು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಇದೀಗ ದಕ್ಷಿಣ ಆಫ್ರಿಕಾದ ಮಾಡೆಲ್ ಲಿಜ್‌ಲಾಜ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಅವರ ಪ್ರೊಫೈಲ್‌ನಿಂದ ಲೈಕ್ ಮಾಡಲಾಗಿದೆ ಎಂದು ಹೇಳಲಾದ ನಂತರ, ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

'ಲೈಕ್' ಕಂಡುಬಂದ ನಂತರ, ಈ ಸ್ಕ್ರೀನ್‌ಶಾಟ್‌ಗಳು ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿದವು. ಈ ಪರಿಸ್ಥಿತಿ ಮತ್ತು ಈ ವಿಷಯದ ಸುತ್ತಲಿನ ಸಂಚಲನವನ್ನು ಇಂಟರ್ನೆಟ್‌ನಲ್ಲಿ ಹಲವರು ಅಪಹಾಸ್ಯ ಮಾಡುತ್ತಿದ್ದಾರೆ.

'ಚೈನ್ ಸೆ ಲೈಕ್ ಭಿ ನಿ ಕರ್ನೇ ದೇತಾ ಯೇ ಸಮಜ್' ಎಂದು ಒಬ್ಬರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. 'ರಿಲ್ಯಾಕ್ಸ್ ಗಯ್ಸ್, ಇದು ಅಲ್ಗಾರಿದಮ್' ಎಂದು ಮತ್ತೊಬ್ಬರು ಬರೆದಿದ್ದಾರೆ.

ಅವನೀತ್ ಕೌರ್ ಅವರ ಫೋಟೊಗೆ ಲೈಕ್ ಮಾಡಿದ ಸಂದರ್ಭದಲ್ಲಿ ಕೊಹ್ಲಿ, 'ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ಲೈಕ್ ಮಾಡಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ವದಂತಿಗಳನ್ನು ಹಬ್ಬಿಸಬಾರುದು ಎಂದು ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು' ಎಂದು ಹೇಳಿದ್ದರು.

ಇದೀಗ ಕೊಹ್ಲಿ ಮತ್ತೊಂದು ಅಂತಹದ್ದೇ ಹೇಳಿಕೆಯನ್ನು ನೀಡಬೇಕು, ಇದು ಅವರು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸವಲ್ಲ ಮತ್ತು ಇದು ಮತ್ತೊಂದು 'ಅಲ್ಗಾರಿದಮ್ ತಪ್ಪು' ಎಂದು ಹೇಳಬೇಕೆಂದು ಕೆಲವು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಕೊಹ್ಲಿ ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ, ಆರಂಭಿಕ ಬ್ಯಾಟ್ಸ್‌ಮನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದರು. ಅರ್ಧಶತಕಕ್ಕೆ ಕೇವಲ 1 ರನ್ ಬಾಕಿ ಇರುವಾಗ ಔಟಾದರು. ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಸುಲಭ ಗೆಲುವು ಸಾಧಿಸಲು ಅವರ ಕೊಡುಗೆ ಪ್ರಮುಖವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮನ್ನು Blackmail ಮಾಡಲು ಸಾಧ್ಯವಿಲ್ಲ; Strait Of Hormuz ನಿರ್ಬಂಧ ಬೆನ್ನಲ್ಲೇ Iran ವಿರುದ್ಧ Donald Trump ಕೆಂಡಾಮಂಡಲ!

Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್‌ ಆಡಿಯೋ ವೈರಲ್!

"ಕಡಲೆಕಾಯಿ"ಯಷ್ಟು ಬೆಂಬಲ: ಕರ್ನಾಟಕ ಸರ್ಕಾರದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರವಿಂದ್ ಕುಮಾರ್ ಬೇಸರ

ಮಮತಾ ಬ್ಯಾನರ್ಜಿ ಸಿಎಂ ಹುದ್ದೆಯಲ್ಲಿ ಮುಂದುವರೆದರೆ ಬಂಗಾಳ ಬಾಂಗ್ಲಾದೇಶಿ ಮುಸ್ಲಿಮರ ಪಾಲು- ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

IPL 2026: CSK ವಿರುದ್ಧ SRH 10 ರನ್ ಗಳ ರೋಚಕ ಜಯ, ಮಿಂಚಿದ Ayush Mhatre

SCROLL FOR NEXT