ಪಂಜಾಬ್ ಭರ್ಜರಿ ಬ್ಯಾಟಿಂಗ್ 
ಕ್ರಿಕೆಟ್

IPL 2026: ಸಿಕ್ಸರ್ ಗಳ ಸುರಿಮಳೆ, ಶ್ರೇಯಸ್ ಅಯ್ಯರ್ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಹಲವು ದಾಖಲೆಗಳು ಪತನ!

ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಅಕ್ಷರಶಃ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಈ ಋತುವಿನಲ್ಲಿ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಕೇಳಲಾಯಿತು.

ಚಂಡೀಗಢ: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡದ ಬ್ಯಾಟಿಂಗ್ ಆರ್ಭಟಕ್ಕೆ ಹಲವು ದಾಖಲೆಗಳು ಪತನವಾಗಿದೆ.

ಹೌದು.. ನ್ಯೂ ಚಂಡಿಗಢದ ಮುಲ್ಲನ್ ಪುರ್ ಕ್ರೀಡಾಂಗಣದಲ್ಲಿ ಇಂದು ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ರಿಷಬ್ ಪಂತ್ ನೇತಡತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 54 ರನ್ ಗಳ ಅಂತರದಲ್ಲಿ ಮಣಿಸಿದ್ದು, ಆ ಮೂಲಕ ಹಾಲಿ ಐಪಿಎಲ್ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಅಕ್ಷರಶಃ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಈ ಋತುವಿನಲ್ಲಿ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಕೇಳಲಾಯಿತು. ಇದು ವಿಭಿನ್ನ ಸವಾಲಾಗಿತ್ತಾದರೂ, ಆದರೆ ಶ್ರೇಯಸ್ ಅಯ್ಯರ್ ಪಡೆ ಅದನ್ನು ದೃಢವಾಗಿ ನಿಭಾಯಿಸಿದರು.

ಪಂಜಾಬ್ ಭರ್ಜರಿ ಬ್ಯಾಟಿಂಗ್

ಹಾಲಿ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಪಂಜಾಬ್ ತಂಡ ಇಂದೂ ಕೂಡ ತನ್ನ ಜೈತ್ರಯಾತ್ರೆ ಮುಂದುವರೆಸಿದೆ. ಇಂದಿನ ಪಂದ್ಯದಲ್ಲಿ ಪಂಜಾಬ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಗೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಪ್ರಭ್ ಸಿಮ್ರನ್ ಸಿಂಗ್ ಶೂನ್ಯಕ್ಕೆ ಔಟಾದರು. ಆದರೆ ಆರಂಭಿಕ ಆಘಾತದ ಹೊರತಾಗಿಯೂ ಪಂಜಾಬ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು.

ದಾಖಲೆಯ ಜೊತೆಯಾಟ

ಇನ್ನು ಆರಂಭಿಕ ಆಘಾತದ ಹೊರತಾಗಿಯೂ ಪಂಜಾಬ್ ಗೆ ಪ್ರಿಯಾಂಶ್ ಆರ್ಯ ಮತ್ತು ಕನೋಲಿ ಅಕ್ಷರಶಃ ಆಸರೆಯಾದರು. 2ನೇ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 182 ರನ್ ಗಳ ಜೊತೆಯಾಟವಾಡಿತು. ಆದೂ ಕೂಡ ಕೇವಲ 80 ಎಸೆತಗಳಲ್ಲಿ ಎನ್ನುವುದು ವಿಶೇಷ.

ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಕೇವಲ 37 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 93 ರನ್ ಪೇರಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕೂಪರ್ ಕನೋಲಿ 46 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿ ಸಹಿತ 87 ರನ್ ಕಲೆಹಾಕಿದರು.

ಗರಿಷ್ಟ ಮೊತ್ತ

ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ 254 ರನ್ ಕಲೆಹಾಕಿ ಲಕ್ನೋಗೆ 255 ರನ್ ಗಳ ಬೃಹತ್ ಗುರಿ ನೀಡಿತು. ಅಂತೆಯೇ ಇದು ಹಾಲಿ ಸೀಸನ್ ನಲ್ಲಿ ಪಂಜಾಬ್ ತಂಡದ ಅತ್ಯಧಿಕ ಮೊತ್ತ ಕೂಡ ಆಗಿದೆ. ಈ ಹಿಂದೆ 2024ರಲ್ಲಿ ಕೋಲ್ಕತಾದಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ 262ರನ್ ಪೇರಿಸಿತ್ತು. ಇದು ಆ ತಂಡದ ಐಪಿಎಲ್ ಟೂರ್ನಿಯ ಗರಿಷ್ಠ ಮೊತ್ತವಾಗಿದೆ. ಇಂದು ಲಕ್ನೋ ವಿರುದ್ಧ ಗಳಿಸಿದ 254 ರನ್ ಗಳು 2ನೇ ಸ್ಥಾನದಲ್ಲಿದೆ.

Highest innings total for PBKS

  • 262/2 vs KKR, Kolkata, 2024

  • 254/6 vs LSG, Mullanpur, 2026

  • 245/6 vs SRH, Hyderabad, 2025

  • 243/5 vs GT, Ahmedabad, 2025

  • 236/5 vs LSG, Dharamsala, 2025 (previous highest for any team vs LSG)

(The first was in a record successful chase, the other four came while batting first)

ಗರಿಷ್ಛ ಸಿಕ್ಸರ್ ಗಳು

ಇನ್ನು ಇಂದಿನ ಪಂದ್ಯದಲ್ಲಿ ಎರಡೂ ತಂಡಗಳು ಭರ್ಜರಿ ಬ್ಯಾಟಿಂಗ್ ನಡೆಸಿದವು. ಪರಿಣಾಮ ಇಂದಿನ ಪಂದ್ಯದಲ್ಲಿ ಬರೊಬ್ಬರಿ 454 ರನ್ ಗಳು ಹರಿದುಬಂದಿವೆ. ಈ ಪೈಕಿ ಪಂಜಾಬ್ 254 ರನ್ ಗಳಿಸಿದ್ದರೆ, ಇದನ್ನು ಚೇಸ್ ಮಾಡಿದ ಲಕ್ನೋ 200 ರನ್ ಗಳನ್ನು ಕಲೆಹಾಕಿತು.

ಅಂತೆಯೇ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಒಟ್ಟಾರೆ 21 ಸಿಕ್ಸರ್ ಗಳು ಹರಿದು ಬಂದಿದ್ದು ಇದೂ ಕೂಡ ದಾಖಲೆಯಾಗಿದೆ. ಇದು ಐಪಿಎಲ್ ಟೂರ್ನಿ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಬಂದ ಜಂಟಿ 4ನೇ ಗರಿಷ್ಠ ಸಿಕ್ಸರ್ ಗಳಾಗಿವೆ.2024ರಲ್ಲಿ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಮತ್ತು ಕೋಲ್ಕತಾ ತಂಡಗಳು ಒಟ್ಟು 24 ಸಿಕ್ಸರ್ ಗಳನ್ನು ಸಿಡಿಸಿದ್ದವು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

Most sixes in an IPL innings

  • 24 - PBKS vs KKR, Kolkata, 2024

  • 22 - SRH vs RCB, Bengaluru, 2024

  • 22 - SRH vs DC, Delhi, 2024

  • 21 - RCB vs PWI, Bengaluru, 2013

  • 21 - PBKS vs LSG, Mullanpur, 2026

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಶ್ಮೀರದಲ್ಲಿ ಅಮೆರಿಕಾದ ಪ್ರಜೆ ಬಂಧನ: ಅಲ್ಲಿ ಆತ ಮಾಡ್ತಿದಿದ್ದೇನು?

ದೀದಿಗೆ ಶಾಕ್: ಬಾಂಗ್ಲಾದ ನೂತನ ರಾಯಭಾರಿಯಾಗಿ TMC ಮಾಜಿ ನಾಯಕ ದಿನೇಶ್ ತ್ರಿವೇದಿ ನೇಮಕ?

IPL 2026: ಮುಂದುವರೆದ PBKS ಜೈತ್ರ ಯಾತ್ರೆ, LSG ವಿರುದ್ಧ 54 ರನ್ ಗಳ ಭರ್ಜರಿ ಜಯ

ಬೆಚ್ಚಿ ಬಿದ್ದ ಅಮೆರಿಕ ತನ್ನದೇ ಪ್ರಜೆಯಿಂದ ಇರಾನ್ ಗೆ ಲಕ್ಷಾಂತರ ಮೌಲ್ಯದ ಶಸ್ತ್ರಾಸ್ತ್ರಗಳ ಸಾಗಣೆ!

IPL 2026: 'ಭಾನಾಮತಿ'ಯೋ ಅಥವಾ ಕಾಕತಾಳೀಯವೋ? SRH ಅಭಿಮಾನಿಯ 'ನಿಂಬೆ' ಮಂತ್ರಕ್ಕೆ CSK ವಿಕೆಟ್ ಪತನ, Video viral

SCROLL FOR NEXT