ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ 
ಕ್ರಿಕೆಟ್

IPL 2026: ಪಂದ್ಯದ ಮಧ್ಯೆ ತಿಲಕ್ ವರ್ಮಾ ವಿರುದ್ಧ ಹಾರ್ದಿಕ್ ಪಾಂಡ್ಯ ಸಿಟ್ಟಾದರೆ ಅಥವಾ ಹುರಿದುಂಬಿಸಿದ್ರಾ?Video ನೋಡಿ....

ಟೂರ್ನಿ ಆರಂಭವಾದಾಗಿನಿಂದಲೂ 20, 0, 14, 1 ಮತ್ತು 8 ನಂತಹ ಕಡಿಮೆ ಸ್ಕೋರ್ ಗಳಿಸಿದ್ದ ತಿಲಕ್ ವರ್ಮಾ ಸೋಮವಾರ ವಿನಾಶಕಾರಿ ರೀತಿಯ ಫಾರ್ಮ್ ಗೆ ಮರಳಿದರು.

ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ ತಿಲಕ್ ವರ್ಮಾ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೇವಲ 45 ಎಸೆತಗಳನ್ನು ಎದುರಿಸಿದ 7 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಿತ ಅಜೇಯ 101 ರನ್ ಕಲೆಹಾಕಿದರು.

ಟೂರ್ನಿ ಆರಂಭವಾದಾಗಿನಿಂದಲೂ 20, 0, 14, 1 ಮತ್ತು 8 ನಂತಹ ಕಡಿಮೆ ಸ್ಕೋರ್ ಗಳಿಸಿದ್ದ ತಿಲಕ್ ವರ್ಮಾ ಸೋಮವಾರ ವಿನಾಶಕಾರಿ ರೀತಿಯ ಫಾರ್ಮ್ ಗೆ ಮರಳಿದರು. ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಅವರು ಮುಂಬೈ ಫ್ರಾಂಚೈಸಿ ಪರ ಜಂಟಿ ಅತಿವೇಗದ ಶತಕ ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಾಂಡ್ಯ ಹುರಿದುಂಬಿಸಿದ್ದು ಹೇಗೆ? ಈ ಇನ್ನಿಂಗ್ಸ್ ವಿಶೇಷವಾದದ್ದು, ಏಕೆಂದರೆ ಮೊದಲ 19 ಎಸತೆಗಳಲ್ಲಿ ಕೇವಲ 22 ರನ್ ಗಳಿಸಿದ್ದ ತಿಲಕ್ ವರ್ಮಾ ತದನಂತರ 23 ಎಸೆತಗಳಲ್ಲಿ 82 ರನ್ ಗಳಿಸಿದರು. ಅವರು ಏಳು ಸಿಕ್ಸರ್ ಮತ್ತು ಎಂಟು ಬೌಂಡರಿಗಳ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು.

ಇದಕ್ಕೆ ಫಿಚ್ ನಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಸಂದೇಶವೇ ಪ್ರಮುಖ ಕಾರಣವಾಗಿದೆ. ಪಾಂಡ್ಯ ಏನು ಹೇಳಿದರು ಎಂಬುದು ತಿಳಿದಿಲ್ಲವಾದರೂ, ವರ್ಮಾ ತನ್ನ ವಿನಾಶಕಾರಿ ಆಟ ಪ್ರದರ್ಶಿಸುವಂತೆ ಹುರಿದುಂಬಿಸಿದರು.

ಇದಕ್ಕೂ ಮುನ್ನಾ ಆಡಿದ ಪಂದ್ಯಗಳಲ್ಲಿ ತಿಲಕ್ ವರ್ಮಾ ಕೇವಲ 43 ರನ್ ಗಳಿಸಿದ್ದರಿಂದ ಕಳಪೆ ಫಾರ್ಮ್ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆದರೆ. ಸೋಮವಾರದ ಪಂದ್ಯದಲ್ಲಿ ಒಂದೇ ದಿನದಲ್ಲಿ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್ ಗಳೊಂದಿಗೆ ಚರಿತ್ರೆ ಸೃಷ್ಟಿಸಿದರು.

45 - Sanath Jayasuriya vs CSK, Wankhede, 2008

45 - Tilak Varma vs GT, Ahmedabad, 2026

47 - Cameron Green vs SRH, Wankhede, 2023

49 - Suryakumar vs GT, Wankhede, 2023

15ನೇ ಒವರ್ ಗೂ ಮುನ್ನಾ ಒಂದೇ ಒಂದು ಬೌಂಡರಿ ಬಾರಿಸಿದ ತಿಲಕ್ ವರ್ಮಾ, ಪ್ರಸಿದ್ಧ ಕೃಷ್ಣ ಅವರ ಬೌಲಿಂಗ್ ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಮೂಲಕ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೇವಲ 36 ಎಸೆತಗಳಲ್ಲಿ 81 ರನ್ ಗಳಿಸಿದ ತಿಲಕ್ ವರ್ಮಾ ಕೊನೆಯ ಆರು ಓವರ್ ಗಳಲ್ಲಿ 96 ರನ್ ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಡೊನಾಲ್ಡ್ ಟ್ರಂಪ್

Delhi liquor policy: 'ನಿಮ್ಮ ಭ್ರಮೆಗಳಿಗಾಗಿ ಹಿಂದೆ ಸರಿಯಲ್ಲ, ನಾನೇ ವಿಚಾರಣೆ ಮಾಡುತ್ತೇನೆ': ಕೇಜ್ರಿವಾಲ್ ಗೆ ಭಾರಿ ಶಾಕ್

'ದುರುದ್ದೇಶಪೂರಿತ' ಪೋಸ್ಟ್‌: ರಾಹುಲ್ ಗಾಂಧಿ ದ್ವಿಪೌರತ್ವ ಪ್ರಕರಣದಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಾಧೀಶ!

Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ

IPL 2026: GT ವಿರುದ್ಧ ಸ್ಫೋಟಕ ಬ್ಯಾಟಿಂಗ್, ಇತಿಹಾಸ ನಿರ್ಮಿಸಿದ MI ನ ತಿಲಕ್ ವರ್ಮಾ!

SCROLL FOR NEXT