ಚೆನ್ನೈಗೆ ಭರ್ಜರಿ ಜಯ 
ಕ್ರಿಕೆಟ್

IPL 2026: ಮತ್ತೆ ಮುಗ್ಗರಿಸಿದ ಮುಂಬೈ; CSK ಗೆ 103 ರನ್ ಗೆಲುವು!

ಚೆನ್ನೈ ನೀಡಿದ್ದ 208 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮುಂಬೈ ತಂಡ 19 ಓವರ್ ನಲ್ಲಿ ಕೇವಲ 104 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ 103 ರನ್ ಗಳ ಹೀನಾಯ ಸೋಲುಕಂಡಿತು.

ಮುಂಬೈ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲು ಕಂಡಿದೆ.

ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ್ದ 208 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮುಂಬೈ ತಂಡ 19 ಓವರ್ ನಲ್ಲಿ ಕೇವಲ 104 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ 103 ರನ್ ಗಳ ಹೀನಾಯ ಸೋಲುಕಂಡಿತು.

ಮುಂಬೈ ಪರ ಸೂರ್ಯ ಕುಮಾರ್ ಯಾದವ್ 36 ಮತ್ತು ತಿಲಕ್ ವರ್ಮಾ 37 ರನ್ ಗಳಿಸಿದ್ದು ಬಿಟ್ಟರ್ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲೇ ಇಲ್ಲ. ಮೂವರು ಬ್ಯಾಟರ್ ಗಳು (ಮಲೆವಾರ್, ನಮನ್ ಧೀರ್, ರುಥರ್ ಪೋರ್ಡ್) ಶೂನ್ಯ ಸುತ್ತಿದರೆ, ಡಿಕಾಕ್ (7), ಹಾರ್ದಿಕ್ ಪಾಂಡ್ಯಾ 1, ಶಾರ್ದೂಲ್ ಠಾಕೂರ್ 6, ಕ್ರಿಶ್ ಭಗತ್ 7 ಮತ್ತು ಬುಮ್ರಾ 2 ರನ್ ಗಳಿಸಿ ಔಟಾದರು.

ಇತ್ತ ಚೆನ್ನೈ ಪರ ಅಕೀಲ್ ಹೊಸೇನ್ 4 ಪಡೆದರೆ, ನೂರ್ ಅಹ್ಮದ್ 2, ಮುಖೇಶ್ ಚೌದರಿ, ಅನ್ಶುಲ್ ಕಂಬೋಜ್, ಓವರ್ಟನ್ ಮತ್ತು ಗುರ್ಜನ್ಪ್ನೀತ್ ಸಿಂಗ್ ತಲಾ 1 ವಿಕೆಟ್ ಪಡೆದರು.

ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಂಜು ಸಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

18 ಎಸೆತ, 38 ರನ್: ಜೂನಿಯರ್ Dravid ಅಬ್ಬರಕ್ಕೆ ಆಸಿಸ್ ತತ್ತರ; 7 ರನ್‌ಗಳಿಂದ ಗೆದ್ದ ಭಾರತ U-19 ತಂಡ

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!

ChatGPT ತಂದ ಸಾವು: "ಏನಾಗಲ್ಲ, ಈ ಮಿಶ್ರಣ ಸೇವಿಸು" ಎಂದಿದ್ದ OpenAI; ಮಾತು ನಂಬಿದ 19 ವರ್ಷದ ಯುವಕ ಸಾವು; ತಾಯಿಯ ರೋಧನೆ!