ವಿರಾಟ್ ಕೊಹ್ಲಿ, ಶುಭ್ ಮನ್ ಗಿಲ್ 
ಕ್ರಿಕೆಟ್

IPL 2026, RCB vs GT: ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ; ಶುಭ್ ಮನ್ ಗಿಲ್ ಮಹತ್ವದ ಹೇಳಿಕೆ!

ಇನ್ನೂ ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ ಕುರಿತು ಮಾತನಾಡಿದ ಶುಭ್ ಮನ್ ಗಿಲ್, ಅದರಿಂದಲೇ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಾಯಿತು ಎಂದು ಶುಭ್ ಮನ್ ಗಿಲ್ ಹೇಳಿದರು.

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (2026) ನ 34 ನೇ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಐದು ವಿಕೆಟ್‌ಗಳ ಸೋಲಿನ ನಂತರ ಗುಜರಾತ್ ಟೈಟಾನ್ಸ್ ಮುಗ್ಗರಿಸಲು ಕಾರಣವೇನು ಎಂಬುದನ್ನು ಹೇಳುವುದರಲ್ಲಿ ಶುಭ್ ಮನ್ ಗಿಲ್ ಹಿಂಜರಿಯಲಿಲ್ಲ.

ಪಂದ್ಯದ ನಂತರ ಮಾತನಾಡಿದ ಶುಭ್ ಮನ್ ಗಿಲ್, 16 ರಿಂದ 19 ನೇ ಓವರ್‌ಗಳವರೆಗೆ, ಆ ಮೂರು ಓವರ್‌ಗಳಲ್ಲಿ ನಮಗೆ ಯಾವುದೇ ಬೌಂಡರಿ ಪಡೆಯಲು ಸಾಧ್ಯವಾಗಲಿಲ್ಲ. ಆ ಓವರ್‌ಗಳು ನಮಗೆ ನಿರ್ಣಾಯಕವಾಗಿದ್ದವು. ಪವರ್‌ಪ್ಲೇ ಕೊನೆಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೆವು. ಆಗ ವಿಕೆಟ್‌ಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದರು.

ಒಬ್ಬ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಓಟಾದಾಗ ಅದು ಯಾವಾಗಲೂ ಫೀಲ್ಡರ್‌ಗೆ ಕಠಿಣವಾಗಿರುತ್ತದೆ. ಅದು ನೀವು ಆಟಕ್ಕೆ ಹೇಗೆ ಹಿಂತಿರುಗುತ್ತೀರಿ ಎಂಬುದಾಗಿರುತ್ತದೆ. ನಮಗೆ ನಮ್ಮದೇ ಆದ ಕ್ಷಣಗಳು ಇದ್ದವು. ಆದರೆ ನಾವು ಸ್ಥಿರವಾಗಿ ಸರಿಯಾಗಿ ರನ್ ಹೊಡೆಯಲು ಸಾಧ್ಯವಾಗಲಿಲ್ಲ, ಅದು ಮುಖ್ಯವಾಗಿತ್ತು. ಆದರೆ ಅವರು ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರು ಎಂದು ತಿಳಿಸಿದರು.

ಇನ್ನೂ ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ ಕುರಿತು ಮಾತನಾಡಿದ ಶುಭ್ ಮನ್ ಗಿಲ್, ಅದರಿಂದಲೇ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಾಯಿತು. ಅನುಭವಿ ಆಟಗಾರ 44 ಎಸೆತಗಳಲ್ಲಿ 81 ರನ್ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ಸೋಲಿಗೆ ಕಾರಣವಾದರು.

ಅವರೊಂದಿಗೆ ದೇವದತ್ತ್ ಪಡಿಕ್ಕಲ್ 27 ಎಸೆತಗಳಲ್ಲಿ 55 ರನ್ ಸಿಡಿಸುವ ಮೂಲಕ ಮಧ್ಯಮ ಓವರ್ ಗಳಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಗುಜರಾತ್ ಬೌಲರ್ ಗಳು ನಿಯಂತ್ರಣ ಮಾಡಲು ಯತ್ನಿಸಿದರಾದರೂ ಅವರಿಬ್ಬರ ಶತಕದ ಜೊತೆಯಾಟ ಆರ್ ಸಿಬಿ ಗೆಲ್ಲುವಂತೆ ಮಾಡಿತು ಎಂದು ಹೇಳಿದರು.

ಪಿಚ್ ಕೂಡಾ ಆರ್ ಸಿಬಿ ಗೆಲ್ಲುವಲ್ಲಿ ನೆರವಾಗಿದೆ. ನಿರ್ದಿಷ್ಟವಾಗಿ ಕೃಣಾಲ್ ಪಾಂಡ್ಯ ಬೌಲಿಂಗ್ ಮಾಡುವಾಗ ಅದು ಸ್ವಲ್ಪ ಹಿಡಿತ ಸಾಧಿಸುತ್ತಿತ್ತು. ಕೆಲವು ವಿಕೆಟ್ ಪಡೆದಿದ್ದರೆ ಗೆಲುವು ನಮ್ಮದಾಗಿರುತಿತ್ತು ಎಂದು ಶುಭ್ ಮನ್ ಗಿಲ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ

'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್