ರಿಯಾನ್ ಪರಾಗ 
ಕ್ರಿಕೆಟ್

IPL 2026: PBKS vs RR ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಂನಲ್ಲಿ ನಿಷೇಧಿತ ಇ-ಸಿಗರೇಟ್ ಸೇದಿ ಸಿಕ್ಕಿಬಿದ್ದ ರಿಯಾನ್ ಪರಾಗ್!

ಮುಲ್ಲನ್‌ಪುರದಲ್ಲಿ ನಡೆದ ಪಿಬಿಕೆಎಸ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್‌ನ ರನ್-ಚೇಸ್‌ನ 15ನೇ ಓವರ್‌ ವೇಳೆ ಈ ಘಟನೆ ಸಂಭವಿಸಿದೆ.

ಮಂಗಳವಾರ ನಡೆದ ಐಪಿಎಲ್ 2026 ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್ ಒಳಗೆ ವೇಪಿಂಗ್ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (ಪಿಇಸಿಎ) 2019ರ ಅಡಿಯಲ್ಲಿ ಭಾರತದಲ್ಲಿ ಇ-ಸಿಗರೇಟ್ ಅಥವಾ ವೇಪಿಂಗ್ ಸಾಧನದ ಬಳಕೆಯನ್ನು ನಿಷೇಧಿಸಲಾಗಿದೆ. ಪಂದ್ಯದ ಸ್ವಲ್ಪ ಸಮಯದ ನಂತರ ಆರ್‌ಆರ್‌ನ ರಿಯಾನ್ ಪರಾಗ್ ವೇಪ್/ಇ-ಸಿಗರೇಟ್ ಬಳಸುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆಟಗಾರ ಮತ್ತು ತಂಡದ ನಿರ್ವಹಣೆ ಕುರಿತು ಅಭಿಮಾನಿಗಳು ಟೀಕಿಸಿದ್ದಾರೆ.

ಮುಲ್ಲನ್‌ಪುರದಲ್ಲಿ ನಡೆದ ಪಿಬಿಕೆಎಸ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್‌ನ ರನ್-ಚೇಸ್‌ನ 15ನೇ ಓವರ್‌ ವೇಳೆ ಈ ಘಟನೆ ಸಂಭವಿಸಿದೆ. ವೈರಲ್ ಆಗಿರುವ ಘಟನೆಯ ದೃಶ್ಯಗಳಲ್ಲಿ, ಪರಾಗ್ ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತು ವೇಪ್ ಸಾಧನವನ್ನು ಬಳಸುತ್ತಿರುವುದು ಮತ್ತು ಅವರ ತಂಡದ ಸದಸ್ಯರು ಕೂಡ ಅವರು ಸುತ್ತಲೂ ಕುಳಿತಿರುವುದನ್ನು ಕಾಣಬಹುದಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ನಿಟ್ಟಿನಲ್ಲಿ ಆರ್‌ಆರ್ ಆಡಳಿತ ಮಂಡಳಿ ಮತ್ತು ರಿಯಾನ್ ಪರಾಗ್ ವೇಪ್ ಬಳಕೆ ಬಗ್ಗೆ ಉತ್ತರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಾಗುತ್ತದೆ. ಇದನ್ನು ನಿಷೇಧಿಸಲಾಗಿದೆ ಎಂದು ಮೂಲವೊಂದು ಹೇಳಿದೆ. ಡ್ರೆಸ್ಸಿಂಗ್ ಕೊಠಡಿ ಮತ್ತು ಕ್ರೀಡಾಂಗಣದ ಆವರಣದಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಮತ್ತು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಇದನ್ನು ಅನುಮತಿಸಲಾಗಿದೆ.

'ಸಿಗರೇಟ್ ಸೇದುವುದಕ್ಕಿಂತ ಭಿನ್ನವಾಗಿ, ವೇಪಿಂಗ್ ಮಾಡುವಾಗ ನೀವು ಏನು ಉಸಿರಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ದೇಶದಲ್ಲಿ ಇದನ್ನು ನಿಷೇಧಿಸಲು ಒಂದು ಕಾರಣವಿದೆ ಮತ್ತು ಅದರೊಳಗಿನ ಪದಾರ್ಥಗಳ ಬಗ್ಗೆ ಮತ್ತು ಅದು ಸುರಕ್ಷತಾ ಮಾರ್ಗಸೂಚಿಗಳನ್ನು ಪೂರೈಸುತ್ತದೆಯೇ ಎಂಬುದರ ಬಗ್ಗೆ ಯಾರಿಗೂ ಯಾವುದೇ ಸುಳಿವು ಇರುವುದಿಲ್ಲ. ವಿಶೇಷವಾಗಿ ಯಾವುದೇ ಕ್ರೀಡಾಪಟು ಇದನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಈ ರೀತಿಯ ಘಟನೆಯ ಬಗ್ಗೆ ಬಿಸಿಸಿಐ ಮೃದು ಧೋರಣೆ ತಾಳದಿರುವುದರಿಂದ ಫ್ರಾಂಚೈಸಿ ಮತ್ತು ನಾಯಕ ಸಿದ್ಧವಾಗಿರಬೇಕಾಗುತ್ತದೆ' ಎಂದು ಮೂಲಗಳು ತಿಳಿಸಿವೆ.

2026ರ ಐಪಿಎಲ್‌ ಆವೃತ್ತಿಯಲ್ಲಿ ಆರ್‌ಆರ್ ಮತ್ತು ಅವರ ತಂಡದ ಆಡಳಿತ ಮಂಡಳಿ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ, ಆರ್‌ಆರ್ ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ತಂಡದ ಡಗೌಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿತ್ತು. ಈ ವೇಳೆ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಅವರ ಪಕ್ಕದಲ್ಲಿ ಕುಳಿತು ಫೋನ್ ನೋಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು. ಬಳಿಕ ಬಿಸಿಸಿಐ ಭಿಂದರ್ ಅವರಿಗೆ ನಾಮಮಾತ್ರ ದಂಡ ವಿಧಿಸಿದೆ. ಆದರೆ, ಆರ್‌ಆರ್ ಮೂಲಗಳು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಅವರು ಫೋನ್ ಬಳಸುತ್ತಿದ್ದರು ಎಂದು ಹೇಳಿಕೊಂಡಿವೆ.

ಪಿಬಿಕೆಎಸ್ vs ಆರ್‌ಆರ್ ಪಂದ್ಯದ ಬಗ್ಗೆ ಹೇಳುವುದಾದರೆ, ರಾಯಲ್ಸ್ ತಂಡವು ಐಪಿಎಲ್ 2026ರಲ್ಲಿ ಕಿಂಗ್ಸ್ ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Assembly elections: ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಮತದಾನ: ಸಿಎಂ ಮಮತಾ ಬ್ಯಾನರ್ಜಿ ಸೇರಿ ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರ

‘ನಾವಿಲ್ಲದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು’: ಹಾಸ್ಯ ಮೂಲಕವೇ ಟ್ರಂಪ್‌ಗೆ ಕಿಂಗ್ ಚಾರ್ಲ್ಸ್ III ಫುಲ್ ರೋಸ್ಟ್..!

ಅಮೆರಿಕಾ ಪಾಸ್‌ಪೋರ್ಟ್‌ನಲ್ಲಿ ಟ್ರಂಪ್ ಫೋಟೋ: 'ಫಾದರ್ ಆಫ್ ನೇಷನ್' ಪಟ್ಟಕ್ಕೇರುವ ತಂತ್ರವೇ..?

ಎಸ್‌ಸಿ ಒಳ ಮೀಸಲಾತಿ ಅಧಿಕೃತ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

'ಇರಾನ್ ಸಂಪೂರ್ಣ ಕುಸಿಯುತ್ತಿದೆ': ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

SCROLL FOR NEXT