ರಿಷಭ್ ಪಂತ್ 
ಕ್ರಿಕೆಟ್

ತೆರಿಗೆ ಪಾವತಿಯಲ್ಲೂ ಅಗ್ರಸ್ಥಾನಕ್ಕೇರಿದ Rishabh Pant; ಈ ವರ್ಷ ರಿಷಭ್ ಪಂತ್ ಕಟ್ಟಿದ ಟ್ಯಾಕ್ಸ್ ಎಷ್ಟು ಗೊತ್ತಾ?

ರಿಷಭ್ ಪಂತ್ ಅವರು ದೆಹಲಿ ಪರ ಆಡುತ್ತಿದ್ದರೂ, ಅವರು ಉತ್ತರಾಖಂಡದ ನಿವಾಸಿಯಾಗಿದ್ದು, ಈಗ ಆ ರಾಜ್ಯದ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದಾರೆ.

ಪ್ರಸ್ತುತ ಭಾರತದ ಟೆಸ್ಟ್ ತಂಡದಲ್ಲಿ ಮಾತ್ರ ಆಡುತ್ತಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು, ಗಾಯದ ಸಮಸ್ಯೆ ಹಾಗೂ ಕಳಪೆ ಫಾರ್ಮ್​ನಿಂದಾಗಿ ಏಕದಿನ ಮತ್ತು ಟಿ20 ತಂಡದಲ್ಲಿ ಆಡಿದ್ದು ಬಹಳ ವಿರಳ. ಆದಾಗ್ಯೂ ಪಂತ್ ಅವರ ಆದಾಯದ ಹರಿವು ಕಡಿಮೆ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಅವರ ಆದಾಯ ಹೆಚ್ಚುತ್ತಲೇ ಇದೆ.

ರಿಷಭ್ ಪಂತ್ ಅವರು ದೆಹಲಿ ಪರ ಆಡುತ್ತಿದ್ದರೂ, ಅವರು ಉತ್ತರಾಖಂಡದ ನಿವಾಸಿಯಾಗಿದ್ದು, ಈಗ ಆ ರಾಜ್ಯದ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದಾರೆ. ಏಕೆಂದರೆ 2025-26ರ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 23.84 ಕೋಟಿ ತೆರಿಗೆ ಪಾವತಿಸುವ ಮೂಲಕ ಉತ್ತರಾಖಂಡದಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ರಿಷಭ್ ಪಂತ್ ಅವರು ಸತತ ಎರಡನೇ ಬಾರಿಗೆ ಉತ್ತರಾಖಂಡದ ಅತಿ ಹೆಚ್ಚು ತೆರಿಗೆದಾರರಾಗಿ ಹೊರಹೊಮ್ಮಿದ್ದಾರೆ.

ರಿಷಭ್ ಪಂತ್ ಅವರ ನಿವ್ವಳ ಮೌಲ್ಯ 150 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ಅವರ ಆದಾಯದ ಪ್ರಮುಖ ಮೂಲವಾಗಿದೆ. ಅವರು ಬಿಸಿಸಿಐ ಮತ್ತು ಐಪಿಎಲ್‌ನಿಂದ ಗಣನೀಯ ಸಂಬಳವನ್ನು ಗಳಿಸುತ್ತಾರೆ. ಪಂತ್ ಹಲವಾರು ಬ್ರಾಂಡ್‌ಗಳ ಅಂಬಾಸಿಡರ್ ಕೂಡ ಆಗಿದ್ದಾರೆ.

ಉತ್ತರಾಖಂಡ್ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರು ಈ ವಿವರಗಳನ್ನು ಬಹಿರಂಗಪಡಿಸಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪಂತ್ ಅತಿ ಹೆಚ್ಚು ತೆರಿಗೆ ಪಾವತಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ವಿಡಿಯೋ ವಿವಾದ, ಮಕ್ಕಳ ಅಶ್ಲೀಲ ಚಿತ್ರ: ಕೊನೆಗೂ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್

ಲೋಕಸಭೆಯಲ್ಲಿ 'ಬ್ಯಾಂಕರ್ ಬುಕ್ಸ್ ಎವಿಡೆನ್ಸ್ ಬಿಲ್', ರಾಜ್ಯಸಭೆಯಲ್ಲಿ 'ಸುಪ್ರೀಂ' ನ್ಯಾಯಾಧೀಶರ ಹೆಚ್ಚಳ ಮಸೂದೆ ಅಂಗೀಕಾರ!

ಬಂಕಿಪುರ, ದಾಟಿಯಾದಲ್ಲಿ ಬಿಜೆಪಿ ಸೋಲು ಉದ್ದೇಶಪೂರ್ವಕ: Akhilesh Yadav

ಮಾಧುರಿ ದೀಕ್ಷಿತ್​​ಗೆ ಜಾಕ್​ಪಾಟ್: ಕೇವಲ 52 ಲಕ್ಷ ರೂ. ಖರೀದಿಸಿದ್ದ ಕಚೇರಿಯನ್ನು ಬರೋಬ್ಬರಿ 4.85 ಕೋಟಿ ರೂ.ಗೆ ಮಾರಾಟ!

ವೈಜ್ಞಾನಿಕ ತರಬೇತಿ; ಅಪಘಾತ ಸಾವುಗಳ ತಡೆಗೆ Nitin Gadkari ಮಾಸ್ಟರ್ ಪ್ಲಾನ್!