ಮಿಚೆಲ್ ಸ್ಟಾರ್ಕ್- ಮೆಹಿದಿ ಹಸನ್ ಮಿರಾಜ್ ನಡುವೆ ಮಾತಿನ ಚಕಮಕಿ 
ಕ್ರಿಕೆಟ್

Darwin Test: 'ಈಗ ನೀವು ಬಾಂಗ್ಲಾದೇಶದಲ್ಲಿ ಇಲ್ಲ'; ಮಿಚೆಲ್ ಸ್ಟಾರ್ಕ್-ಮೆಹಿದಿ ಹಸನ್ ಮಿರಾಜ್ ನಡುವೆ ತೀವ್ರ ಮಾತಿನ ಚಕಮಕಿ; ರಣಾಂಗಣವಾದ ಕ್ರೀಡಾಂಗಣ! Video

ಮರ್ರಾರಾ ಕ್ರಿಕೆಟ್ ಮೈದಾನದಲ್ಲಿ ಬಾಂಗ್ಲಾದೇಶದ ಮೊದಲ ಇನ್ಸಿಂಗ್ಸ್ ನಲ್ಲಿ ಸ್ಟಾರ್ಕ್ ತಮ್ಮ 21ನೇ ಓವರ್ ಬೌಲ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಡಾರ್ವಿನ್: ಡಾರ್ವಿನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ಮಿಚೆಲ್ ಸ್ಟಾರ್ಕ್ ಮತ್ತು ಬಾಂಗ್ಲಾದೇಶದ ಮೆಹಿದಿ ಹಸನ್ ಮಿರಾಜ್ ನಡುವೆ ಕ್ರೀಡಾಂಗಣದಲ್ಲಿಯೇ ತೀವ್ರ ಮಾತಿನ ಚಕಮಕಿ ನಡೆದಿದೆ.

ಮರ್ರಾರಾ ಕ್ರಿಕೆಟ್ ಮೈದಾನದಲ್ಲಿ ಬಾಂಗ್ಲಾದೇಶದ ಮೊದಲ ಇನ್ಸಿಂಗ್ಸ್ ನಲ್ಲಿ ಸ್ಟಾರ್ಕ್ ತಮ್ಮ 21ನೇ ಓವರ್ ಬೌಲ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಮಿರಾಜ್ ಅವರು ಸ್ಟಾರ್ಕ್ ಅವರ ಎಸೆತವನ್ನು 'ಪಾಯಿಂಟ್' ದಿಕ್ಕಿಗೆ ಬಡಿದು ತಕ್ಷಣವೇ ಒಂದು ರನ್ (ಸಿಂಗಲ್) ಪಡೆಯಲು ಓಡಲು ಪ್ರಾರಂಭಿಸಿದಾಗ ವಾಕ್ಸಮರ ನಡೆದಿದೆ. ಸಿಂಗಲ್ ರನ್ ಪಡೆಯಲು ಮಿರಾಜ್ ಪಿಚ್‌ ಮೇಲೆಯೇ ಓಡಿದ್ದರಿಂದ, ಸಿಟ್ಟಾದ ಸ್ಟಾರ್ಕ್, ಬಾಂಗ್ಲಾದೇಶದ ಆಲ್‌ರೌಂಡರ್ ಅನ್ನು ಪ್ರಶ್ನಿಸಿದ್ದಾರೆ.

ಮಿರಾಜ್ ಅವರತ್ತ ಬೆರಳು ತೋರಿಸುತ್ತಾ, "ಇದು ನನ್ನ ಫಾಲೋ-ಥ್ರೂ (ಬೌಲಿಂಗ್ ನಂತರದ ಓಡುವ ಹಾದಿ), ನಿಮ್ಮದಲ್ಲ. ಈಗ ನಿಮ್ಮ ಫಾಲೋ-ಥ್ರೂ. ವಿಕೆಟ್‌ನಿಂದ ಹೊರಗೆ ಓಡಿ! ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೆಹಿದಿ ಹಸನ್ ಮಿರಾಜ್; ನನಗೆ ಕಾಣಿಸಲಿಲ್ಲ, ನಾನು ಅದನ್ನು ನೋಡಲಿಲ್ಲ ಎಂದಿದ್ದಾರೆ. ಬಳಿಕ ಮಿಚೆಲ್ ಸ್ಟಾರ್ಕ್; ನೀವು ಈಗ ಬಾಂಗ್ಲಾದೇಶದಲ್ಲೇನೂ ಇಲ್ಲ, ಅರ್ಥವಾಯಿತೇ? ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮಾತಿನ ಚಕಮಕಿ ಮೈದಾನದಲ್ಲಿ ಕಾವೇರಿದ ವಾತಾವರಣಕ್ಕೆ ಕಾರಣವಾಯಿತು.

ಡಾರ್ವಿನ್ ಟೆಸ್ಟ್‌ನಲ್ಲಿ ಬಾಂಗ್ಲಾದೇಶ 150ಕ್ಕೂ ಹೆಚ್ಚು ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದರಿಂದ ಮತ್ತು ಆಸ್ಟ್ರೇಲಿಯಾವು ವಿಕೆಟ್ ಪಡೆಯಲು ಪರದಾಡುತ್ತಿದ್ದ ಸಂದರ್ಭದಲ್ಲಿ ಈ ಮಾತಿನ ಚಕಮಕಿ ನಡೆದಿದ್ದು, ಮಧ್ಯಪ್ರವೇಶಿಸಿದ ಅಂಪೈರ್ ಕುಮಾರ್ ಧರ್ಮಸೇನಾ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

Flydubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್, 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!