ಪಾಕಿಸ್ತಾನದ ದಾಖಲೆ ಪತನ ಮಾಡಿದ ಬಾಂಗ್ಲಾದೇಶ 
ಕ್ರಿಕೆಟ್

Cricket: ಆಡಿದ್ದು ಆಸ್ಟ್ರೇಲಿಯಾದಲ್ಲಿ.. ಗೆದ್ದಿದ್ದು ಬಾಂಗ್ಲಾದೇಶ: ಪತನವಾಗಿದ್ದು ಮಾತ್ರ ಪಾಕಿಸ್ತಾನದ ದಾಖಲೆ!

ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಬಾಂಗ್ಲಾದೇಶಕ್ಕೆ ಗೆಲುವಿಗಾಗಿ 57 ರನ್‌ಗಳ ಗುರಿ ಎದುರಾಯಿತು.

ಡಾರ್ವಿನ್: ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಟೆಸ್ಟ್ ಗೆಲುವು ದಾಖಲಿಸುವ ಮೂಲಕ ಬಾಂಗ್ಲಾದೇಶದ ಪುರುಷರ ಕ್ರಿಕೆಟ್ ತಂಡ ಭಾನುವಾರ ಇತಿಹಾಸ ನಿರ್ಮಿಸಿದ್ದು, ಪ್ರಬಲ ಆಸಿಸ್ ತಂಡವನ್ನು ಮುಜುಗರಕ್ಕೀಡು ಮಾಡಿದ್ದು ಮಾತ್ರವಲ್ಲದೇ ಪಾಕಿಸ್ತಾನಕ್ಕೂ ಬರೆ ಎಳೆದಿದೆ.

ಹೌದು..ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಬಾಂಗ್ಲಾದೇಶಕ್ಕೆ ಗೆಲುವಿಗಾಗಿ 57 ರನ್‌ಗಳ ಗುರಿ ಎದುರಾಯಿತು.

ಮೊಮಿನುಲ್ ಹಕ್, ಬ್ಯೂ ವೆಬ್‌ಸ್ಟರ್ ಎಸೆತವನ್ನು ಬ್ಯಾಕ್‌ವರ್ಡ್ ಪಾಯಿಂಟ್ ಮೂಲಕ ಬೌಂಡರಿಗೆ ಅಟ್ಟುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಈ ಪಂದ್ಯದಲ್ಲಿ ಅಂಡರ್‌ಡಾಗ್ ಆಗಿ ಕಣಕ್ಕಿಳಿದಿದ್ದ ಬಾಂಗ್ಲಾದೇಶ, ಸಂಪೂರ್ಣ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿತು. ಗೆಲುವಿನ ಅಂತರ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಿಸುವಂತಿದೆ.

ಆಸ್ಟ್ರೇಲಿಯಾವನ್ನು ಸೋಲಿಸಿದ ಬಾಂಗ್ಲಾದೇಶ, ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಈ ಮಾದರಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ಇದಕ್ಕೂ ಮೊದಲು ಬಾಂಗ್ಲಾದೇಶ ಆಸ್ಟ್ರೇಲಿಯಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋತಿತ್ತು. ಆದರೆ ಡಾರ್ವಿನ್‌ನ ಗೆಲುವಿನೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಗೆದ್ದ ಅತಿ ವೇಗದ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೆ ಬಾಂಗ್ಲಾದೇಶ ಪಾತ್ರವಾಗಿದೆ.

ಅತಿ ವೇಗದ ದಾಖಲೆ

ಈ ಗೆಲುವಿನ ಮೂಲಕ ಬಾಂಗ್ಲಾದೇಶ ಆಸ್ಟ್ರೇಲಿಯಾ ನೆಲದಲ್ಲಿ ತನ್ನ ಮೊದಲ ಟೆಸ್ಟ್ ಗೆಲುವು ದಾಖಲಿಸಿದ ಅತಿ ವೇಗದ ಏಷ್ಯಾ ತಂಡವಾಗಿದೆ. ಕೇವಲ 3 ಟೆಸ್ಟ್ ಪಂದ್ಯಗಳಲ್ಲೇ ಬಾಂಗ್ಲಾದೇಶ ಈ ಸಾಧನೆ ಮಾಡಿದೆ. ಪಾಕಿಸ್ತಾನ ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ಗೆಲುವಿಗಾಗಿ ಏಳು ಪಂದ್ಯಗಳವರೆಗೆ ಕಾಯಬೇಕಾಗಿತ್ತು. ಭಾರತಕ್ಕೆ ಮೊದಲ ಗೆಲುವು 12ನೇ ಟೆಸ್ಟ್‌ ಗಳ ಬಳಿಕ ಒಲಿದಿತ್ತು.

ಟೆಸ್ಟ್ ಆಡುವ ಇತರ ಏಷ್ಯಾ ರಾಷ್ಟ್ರಗಳ ಪೈಕಿ ಶ್ರೀಲಂಕಾ ಮಾತ್ರ ಆಸ್ಟ್ರೇಲಿಯಾ ನೆಲದಲ್ಲಿ ಇನ್ನೂ ಆತಿಥೇಯರನ್ನು ಮಣಿಸಲು ಸಾಧ್ಯವಾಗದ ತಂಡವಾಗಿದೆ. ಶ್ರೀಲಂಕಾ ಅಲ್ಲಿ ಈವರೆಗೂ 15 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ ಇನ್ನೂ ಒಂದೂ ಗೆಲುವು ಸಾಧಿಸಿಲ್ಲ.

ಹಲವು ದಾಖಲೆಗಳ ನಿರ್ಮಾಣ

  • ಬಾಂಗ್ಲಾದೇಶದ 9 ವಿಕೆಟ್‌ಗಳ ಗೆಲುವು, ವಿಕೆಟ್‌ಗಳ ಅಂತರದಲ್ಲಿ ಅವರ ಎರಡನೇ ಅತಿದೊಡ್ಡ ಟೆಸ್ಟ್ ಗೆಲುವಾಗಿದೆ. 2024ರಲ್ಲಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ವಿರುದ್ಧ ದಾಖಲಿಸಿದ 10 ವಿಕೆಟ್‌ಗಳ ಗೆಲುವು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

  • ಆಸ್ಟ್ರೇಲಿಯಾ 1995ರ ಬಳಿಕ ಇದೇ ಮೊದಲ ಬಾರಿಗೆ ಭಾರತವನ್ನು ಹೊರತುಪಡಿಸಿ ಮತ್ತೊಂದು ಏಷ್ಯಾ ತಂಡದ ವಿರುದ್ಧ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿದೆ. ಅಂದರೆ ಬರೋಬ್ಬರಿ 31 ವರ್ಷಗಳ ಬಳಿಕ ಆಸ್ಟ್ರೇಲಿಯಾ ಮತ್ತೊಂದು ಏಷ್ಯಾ ತಂಡದ ವಿರುದ್ಧ ತವರಿನಲ್ಲಿ ಸೋಲು ಕಂಡಿದೆ.

  • 2022ರಲ್ಲಿ ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಿಸಿದ್ದ ಐತಿಹಾಸಿಕ ಗೆಲುವಿನ ಬಳಿಕ, SENA ರಾಷ್ಟ್ರಗಳಲ್ಲಿ ಬಾಂಗ್ಲಾದೇಶ ದಾಖಲಿಸಿದ ಎರಡನೇ ಟೆಸ್ಟ್ ಗೆಲುವು ಇದಾಗಿದೆ.

  • ಮೂರು ಟೆಸ್ಟ್ ಪಂದ್ಯಗಳ ಬಳಿಕ ಬಾಂಗ್ಲಾದೇಶ ಆಸ್ಟ್ರೇಲಿಯಾ ನೆಲದಲ್ಲಿ ತನ್ನ ಮೊದಲ ಟೆಸ್ಟ್ ಗೆಲುವು ದಾಖಲಿಸಿದೆ. ಅಲ್ಲದೆ, 2017ರಲ್ಲಿ ಮಿರ್‌ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಿಸಿದ್ದ ಗೆಲುವಿನ ಬಳಿಕ, ಏಳು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ದಾಖಲಿಸಿದ ಎರಡನೇ ಗೆಲುವು ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

Flydubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್, 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!