ಕ್ರಿಸ್ ಶ್ರೀಕಾಂತ್ 
ಕ್ರಿಕೆಟ್

'ಶ್ರೀಲಂಕಾದಲ್ಲಿ ಗೌತಮ್ ಗಂಭೀರ್‌ಗೆ ಬೇರೇನೂ ಕೆಲಸವಿಲ್ಲ': 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಮುಂದುವರಿಸಲು ಕ್ರಿಸ್ ಶ್ರೀಕಾಂತ್ ಒತ್ತಾಯ

ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 167 ರನ್ ಗಳಿಸಿ ತಂಡದ ಜಯಕ್ಕೆ ಕಾರಣವಾಗಿದ್ದ ಪಡಿಕ್ಕಲ್, ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸುತ್ತಾ 193 ಎಸೆತಗಳಲ್ಲಿ 117 ರನ್ ಗಳಿಸಿದರು.

ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ, ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ ಆತ್ಮವಿಶ್ವಾಸದ ಆರಂಭ ಪಡೆಯಿತು. ದೇವದತ್ ಪಡಿಕ್ಕಲ್ ಮತ್ತೊಮ್ಮೆ ಅತ್ಯುತ್ತಮ ಫಾರ್ಮ್‌ನಲ್ಲಿ ಕಂಡುಬಂದರು. ಮೊದಲ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಈ ಮೂರನೇ ಕ್ರಮಾಂಕದ ಬ್ಯಾಟರ್, ಎರಡನೇ ಟೆಸ್ಟ್‌ನಲ್ಲೂ 117 ರನ್ ಗಳಿಸಿದರು. ಸಾಯಿ ಸುದರ್ಶನ್ ಗಾಯಗೊಂಡಿರುವ ಕಾರಣ ಪಡಿಕ್ಕಲ್ ತಂಡದ ಪ್ಲೇಯಿಂಗ್ ಇಲೆವೆನ್‌‌‌ನಲ್ಲಿ ಸ್ಥಾನ ಪಡೆದಿದ್ದು, ಕರ್ನಾಟಕದ ಈ ಬ್ಯಾಟರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಭಾರತದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಂತಹ ತಂಡಗಳ ವಿರುದ್ಧದ ಗೆಲುವು ಗಂಭೀರ್‌ಗೆ ಹೆಚ್ಚಿನ ಉತ್ಸಾಹ ನೀಡಲಿದೆ ಎಂದು ಹೇಳಿದರು.

'ಗಂಭೀರ್‌ಗೆ ಬೇರೆ ಕೆಲಸವೇನೂ ಇಲ್ಲ. ಮೊದಲ ಟೆಸ್ಟ್‌ನಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿರುವ ಪಡಿಕ್ಕಲ್ ಅವರನ್ನು ಮುಂದಿನ ಪಂದ್ಯಗಳಲ್ಲಿ ಹೇಗೆ ಬದಲಾಯಿಸಲು ಸಾಧ್ಯ? ಗಂಭೀರ್ ಸುಮ್ಮನೆ ಏನಾದರೂ ಮಾತನಾಡುತ್ತಾರೆ; ಹೇಗೂ ಶ್ರೀಲಂಕಾ ಸರಣಿಯಲ್ಲಿ ಅವರಿಗೆ ಹೆಚ್ಚಿನ ಕೆಲಸವೇನೂ ಇರುವುದಿಲ್ಲ, ಏಕೆಂದರೆ ಶ್ರೀಲಂಕಾ ತಂಡವು ದುರ್ಬಲವಾಗಿದೆ ಮತ್ತು ಭಾರತ ಖಂಡಿತವಾಗಿಯೂ ಗೆಲ್ಲುತ್ತದೆ. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಂತಹ ತಂಡಗಳ ವಿರುದ್ಧ ಗೆದ್ದಾಗ ಅವರು ಸಂಭ್ರಮಿಸುತ್ತಾರೆ' ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾಗಿ 'ಸ್ಪೋರ್ಟ್ಸ್‌ಕೀಡಾ' ವರದಿ ಮಾಡಿದೆ.

'ನಾನು ಗಂಭೀರ್ ಅವರ ಬಗ್ಗೆ ಕಠಿಣವಾಗಿ ಮಾತನಾಡಲು ಪ್ರಯತ್ನಿಸುತ್ತಿಲ್ಲ. ಅವರು ಉತ್ತಮ ಆಟಗಾರರಾಗಿದ್ದರು ಮತ್ತು ಆಟದ ಸೂಕ್ಷ್ಮಗಳನ್ನು ಚೆನ್ನಾಗಿ ಅರಿತಿದ್ದಾರೆ. ಆದರೆ, ಅವರು ಇನ್ನಷ್ಟು ಮುಕ್ತವಾಗಿ ಸಂವಹನ ನಡೆಸಬಹುದು. ಆದಾಗ್ಯೂ, ಆಟಗಾರನಾಗಿ ಅವರು ಅತ್ಯಂತ ಪರಿಣಾಮಕಾರಿಯಾಗಿದ್ದರು' ಎಂದರು.

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾನುವಾರ, ದೇವದತ್ ಪಡಿಕ್ಕಲ್ ತಮ್ಮ ಎರಡನೇ ಟೆಸ್ಟ್ ಶತಕ ಬಾರಿಸಿದರು ಮತ್ತು ಎರಡು ನಿರ್ಣಾಯಕ ಜೊತೆಯಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ದಿನದಾಟದ ಅಂತ್ಯಕ್ಕೆ ಭಾರತದ ಮೊತ್ತವನ್ನು 300/5 ಕ್ಕೆ ತಲುಪಿಸಲು ನೆರವಾದರು.

ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 167 ರನ್ ಗಳಿಸಿ ತಂಡದ ಜಯಕ್ಕೆ ಕಾರಣವಾಗಿದ್ದ ಪಡಿಕ್ಕಲ್, ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸುತ್ತಾ 193 ಎಸೆತಗಳಲ್ಲಿ 117 ರನ್ ಗಳಿಸಿದರು. ಅವರು ಸುಮಾರು ಐದು ಗಂಟೆಗಳ ಕಾಲ ಕ್ರೀಸ್‌ನಲ್ಲಿ ನಿಂತು 12 ಬೌಂಡರಿಗಳನ್ನು ಬಾರಿಸಿದರು.

ಬ್ಯಾಟಿಂಗ್‌ಗೆ ಇಳಿದ ತಕ್ಷಣವೇ ಅವರಿಗೆ ಅದೃಷ್ಟದ ಸಾಥ್ ಸಿಕ್ಕಿತು; 'ಕವರ್' ಸ್ಥಾನದಲ್ಲಿದ್ದ ಸೋನಲ್ ದಿನುಷಾ ಮತ್ತು 'ಸ್ಲಿಪ್'ನಲ್ಲಿದ್ದ ನಾಯಕ ಧನಂಜಯ ಡಿ ಸಿಲ್ವಾ ಅವರು ತಲಾ ಒಂದು ಕ್ಯಾಚ್ ಕೈಬಿಟ್ಟರು. ಆ ನಂತರ ಏಕಾಗ್ರತೆಯಿಂದ ಬ್ಯಾಟಿಂಗ್ ಮಾಡಿದ ಅವರು, ನಾಯಕ ಶುಭಮನ್ ಗಿಲ್ ಅವರೊಂದಿಗೆ ಮೂರನೇ ವಿಕೆಟ್‌ಗೆ 120 ರನ್ ಹಾಗೂ ರವೀಂದ್ರ ಜಡೇಜಾ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 74 ರನ್ ಜೊತೆಯಾಟವಾಡಿದರು. ಅಂತಿಮವಾಗಿ ಆಫ್-ಸ್ಪಿನ್ನರ್ ಕೇಶರ ನುವಂತಾ ಅವರ ಬೌಲಿಂಗ್‌ನಲ್ಲಿ ಅವರು ಬೌಲ್ಡ್ ಆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!