ಅನಯಾ ಬಂಗಾರ್ ಮತ್ತೆ ಕ್ರಿಕೆಟ್ ಗೆ 
ಕ್ರಿಕೆಟ್

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!

ಅನಯಾ ಈ ಹಿಂದೆ ಮುಂಬೈ ಪರ ವಯೋಮಿತಿ ಕ್ರಿಕೆಟ್ ಆಡಿದ್ದರು. ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಖಾನ್ ಅವರೊಂದಿಗೆ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ ಅನುಭವವೂ ಅವರಿಗೆ ಇದೆ.

ಮುಂಬೈ: ಮಾಜಿ ಭಾರತ ಕ್ರಿಕೆಟಿಗ ಸಂಜಯ್ ಬಂಗರ್ ಅವರ ಪುತ್ರಿ(ತ್ರ) ಅನಯಾ ಬಂಗರ್ ಅವರಿಗೆ ಆಸ್ಟ್ರೇಲಿಯಾದಲ್ಲಿ ಮಹಿಳಾ ಕಮ್ಯುನಿಟಿ ಕ್ರಿಕೆಟ್ ಆಡುವುದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದೆ.

ಇದರಿಂದ ಲಿಂಗ ಪರಿವರ್ತನೆ ಮಾಡಿಕೊಂಡಿದ್ದ ಅನಯಾ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವ ಅವಕಾಶ ದೊರೆತಿದೆ. ಈ ವರ್ಷದ ಮಾರ್ಚ್‌ನಲ್ಲಿ ಅನಯಾ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇದೀಗ ಕ್ರಿಕೆಟ್ ಆಡಲು ಅನುಮತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅನಯಾು, “ನಾನು ಮತ್ತೆ ಕ್ರಿಕೆಟ್ ಆಡಲು ಸಾಧ್ಯವಾಗುತ್ತದೆ ಎಂದು ತಿಳಿದುಕೊಂಡಿರುವುದು ನನಗೆ ಬಹಳ ಸಂತಸದ ದಿನ. ಒಂದು ಹಂತದಲ್ಲಿ ಇನ್ನು ಮುಂದೆ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಮತ್ತೊಂದು ಅವಕಾಶ ನೀಡಿದೆ” ಎಂದು ತಿಳಿಸಿದ್ದಾರೆ.

ಅನಯಾ ಈ ಹಿಂದೆ ಮುಂಬೈ ಪರ ವಯೋಮಿತಿ ಕ್ರಿಕೆಟ್ ಆಡಿದ್ದರು. ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಖಾನ್ ಅವರೊಂದಿಗೆ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ ಅನುಭವವೂ ಅವರಿಗೆ ಇದೆ. ಆದರೆ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಂತಹ ‘ಎಲೈಟ್ ಕ್ರಿಕೆಟ್’ನಲ್ಲಿ ಆಡಲು ಅನಯಾ ಕ್ರಿಕೆಟ್ ಆಸ್ಟ್ರೇಲಿಯಾದ ಟೆಸ್ಟೋಸ್ಟೆರಾನ್ ಸಂಬಂಧಿತ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.

2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪುರುಷರ ಪ್ರೌಢಾವಸ್ಥೆಯನ್ನು ಅನುಭವಿಸಿರುವ ಟ್ರಾನ್ಸ್‌ಜೆಂಡರ್ ಆಟಗಾರರಿಗೆ ಎಲೈಟ್ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ನಿರ್ಬಂಧಿಸಿತ್ತು.

ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದ್ದೇಕೆ?

ಕ್ರಿಕೆಟ್ ಆಸ್ಟ್ರೇಲಿಯಾದ ‘ಟ್ರಾನ್ಸ್‌ಜೆಂಡರ್ ಆ್ಯಂಡ್ ಜೆಂಡರ್ ಡೈವರ್ಸ್ ಪ್ಲೇಯರ್ಸ್ ಇನ್ ಎಲೈಟ್ ಕ್ರಿಕೆಟ್ ಪಾಲಿಸಿ’ ಪ್ರಕಾರ, ಎಲೈಟ್ ಕ್ರಿಕೆಟ್‌ನಲ್ಲಿ ಆಡಲು ಆಟಗಾರ್ತಿಯ ರಕ್ತದಲ್ಲಿನ ಸೀರಮ್ ಟೆಸ್ಟೋಸ್ಟೆರಾನ್ ಪ್ರಮಾಣ ಕನಿಷ್ಠ 12 ತಿಂಗಳ ಅವಧಿಗೆ ಪ್ರತಿ ಲೀಟರ್‌ಗೆ 10 ನ್ಯಾನೋಮೋಲ್‌ಗಿಂತ ಕಡಿಮೆ ಇರಬೇಕು.

ಕ್ರಿಕೆಟ್ ಆಸ್ಟ್ರೇಲಿಯಾದ ಇಂಟೆಗ್ರಿಟಿ ವಿಭಾಗದ ಮುಖ್ಯಸ್ಥೆ ಜಾಕಿ ಪಾರ್ಟ್ರಿಡ್ಜ್ ಅವರು ಅನಯಾಗೆ ಕಳುಹಿಸಿರುವ ಪತ್ರದಲ್ಲಿ, ಮಾರ್ಚ್ 2027ರಿಂದ ಎಲೈಟ್ ಕ್ರಿಕೆಟ್‌ನಲ್ಲಿ ಆಡುವ ಅರ್ಹತೆ ರಕ್ತ ಪರೀಕ್ಷೆಯಲ್ಲಿ ಟೆಸ್ಟೋಸ್ಟೆರಾನ್ ಮಟ್ಟ 10 nmol/Lಗಿಂತ ಕಡಿಮೆ ಇರುವುದನ್ನು ದೃಢಪಡಿಸುವುದರ ಜೊತೆಗೆ, ನೀತಿಯಲ್ಲಿನ ಇತರ ಅರ್ಹತಾ ಮಾನದಂಡಗಳನ್ನು ಮುಂದುವರಿಸಿಕೊಂಡು ಹೋಗುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದ್ದೇನು?

ಆದರೆ ಅನಯಾ ತಕ್ಷಣದಿಂದಲೇ ಕಮ್ಯುನಿಟಿ ಕ್ರಿಕೆಟ್‌ನಲ್ಲಿ ಆಡಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

“ಮಾರ್ಚ್ 2027ರವರೆಗೆ ಆಸ್ಟ್ರೇಲಿಯಾದ ಯಾವುದೇ ರಾಜ್ಯ ಅಥವಾ ಪ್ರಾಂತ್ಯದಲ್ಲಿ ನಡೆಯುವ ಪ್ರೀಮಿಯರ್ ಕ್ರಿಕೆಟ್ ಸ್ಪರ್ಧೆಗಳಲ್ಲಿ ನೀವು ಆಡಲು ಅರ್ಹರಾಗಿರುತ್ತೀರಿ.

ನೀತಿಯ ಪ್ರಕಾರ ಪ್ರೀಮಿಯರ್ ಕ್ರಿಕೆಟ್ ಅನ್ನು ಎಲೈಟ್ ಕ್ರಿಕೆಟ್ ಬದಲಿಗೆ ಕಮ್ಯುನಿಟಿ ಕ್ರಿಕೆಟ್ ಎಂದು ವರ್ಗೀಕರಿಸಲಾಗಿರುವುದರಿಂದ, ಈ ಸ್ಪರ್ಧೆಗಳಲ್ಲಿ ನಿಮ್ಮ ಭಾಗವಹಿಸುವಿಕೆಗೆ ಈ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಪಾರ್ಟ್ರಿಡ್ಜ್ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video