ಸೂರ್ಯ ಕುಮಾರ್ ಯಾದವ್- ವಿರಾಟ್ ಕೊಹ್ಲಿ 
ಕ್ರಿಕೆಟ್

T20 ವಿಶ್ವಕಪ್ 2026: ಕೊನೆಗೂ Virat Kohli ದಾಖಲೆ ಮುರಿದ ಸೂರ್ಯ ಕುಮಾರ್ ಯಾದವ್!

ಅಮೆರಿಕ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯ ಕುಮಾರ್ ಯಾದವ್ ಕೇವಲ 49 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ ಬರೊಬ್ಬರಿ 84 ರನ್ ಪೇರಿಸಿದರು.

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯ ಕುಮಾರ್ ಯಾದವ್ ಕೇವಲ 49 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ ಬರೊಬ್ಬರಿ 84 ರನ್ ಪೇರಿಸಿದರು.

ಆ ಮೂಲಕ ಭಾರತದ ಸವಾಲಿನ ಗುರಿಗೆ ಕಾರಣರಾದರು. ಈ ಪಂದ್ಯವನ್ನು ಭಾರತ 29ರನ್ ಗಳ ಅಂತರದಲ್ಲಿ ಗೆದ್ದುಕೊಂಡಿತು.

ಬ್ಯಾಟಿಂಗ್ ನಲ್ಲಿ ಸ್ಫೋಟಕ ಪ್ರದರ್ಶನ ತೋರಿದ ಸೂರ್ಯ ಕುಮಾರ್ ಯಾದವ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂತೆಯೇ ಈ ಪಂದ್ಯದ ಮೂಲಕ ಸೂರ್ಯ ಕುಮಾರ್ ಯಾದವ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ ಪತನ

ಇನ್ನು ಈ ಪಂದ್ಯದಲ್ಲಿ ಅಜೇಯ 84 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಸೂರ್ಯ ಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಸೂರ್ಯ ಕುಮಾರ್ ಯಾದವ್ ಭಾರತದ ಪರ ಅತೀ ಹೆಚ್ಚು ಟಿ20ಐ ಪಂದ್ಯಶ್ರೇಷ್ಛ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಈ ಪಂದ್ಯದ ಪಂದ್ಯಶ್ರೇಷ್ಛ ಪ್ರಶಸ್ತಿ ಸೇರಿದಂತೆ ಸೂರ್ಯ ಈ ವರೆಗೂ 17 ಬಾರಿ ಪಂದ್ಯಶ್ರೇಷ್ಛ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ 16 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಂದ್ಯಶ್ರೇಷ್ಛ ಪ್ರಶಸ್ತಿಗೆ ಭಾಜನರಾಗಿ ಇಷ್ಟು ದಿನ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರು. ಇದೀಗ ಸೂರ್ಯ ಈ ದಾಖಲೆ ಮುರಿದಿದ್ದಾರೆ.

Most POTM awards in T20Is (India)

  • 17 Suryakumar Yadav (105 T20Is)

  • 16 Virat Kohli (125)

  • 14 Rohit Sharma (159)

  • 8 Axar Patel (88)

ಕೊಹ್ಲಿ ಮೊದಲು, 2ನೇ ಸ್ಥಾನಕ್ಕೇರಿದ ಸೂರ್ಯ

ಅಂತೆಯೇ ಐಸಿಸಿ ಟಿ20 ನವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ಪರ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಸೂರ್ಯ ಕುಮಾರ್ ಯಾದವ್ 2ನೇ ಸ್ಥಾನಕ್ಕೇರಿದ್ದಾರೆ.

8 ಬಾರಿ ಈ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, 3 ಬಾರಿ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದ ಯುವರಾಜ್ ಸಿಂಗ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. 4 ಬಾರಿ ಈ ಸಾಧನೆ ಮಾಡಿದ ಸೂರ್ಯ ಇದೀಗ 2ನೇ ಸ್ಥಾನಕ್ಕೇರಿದ್ದಾರೆ.

Most POTM awards in T20 World Cups (India)

  • 8 Virat Kohli (35 T20Is)

  • 4 Suryakumar Yadav (19) *

  • 3 Yuvraj Singh (31)

  • 3 R Ashwin (24)

  • 3 Rohit Sharma (47)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್; ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

T20 ವಿಶ್ವಕಪ್ 2026: USA ವಿರುದ್ಧ ಸೂರ್ಯ ಭರ್ಜರಿ ಬ್ಯಾಟಿಂಗ್; Babar Azam ದಾಖಲೆ ಧ್ವಂಸ

T20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್; ಕಳಪೆ ದಾಖಲೆ ಬರೆದ Abhishek Sharma!

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

ಭಾರತ-ಅಮೆರಿಕ ಒಪ್ಪಂದ ನಮ್ಮ ರೈತರ ಹಿತಾಸಕ್ತಿ ರಕ್ಷಿಸುತ್ತದೆ; ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ: ಗೋಯಲ್

SCROLL FOR NEXT