ಮೊಹಮ್ಮದ್ ಸಿರಾಜ್ 
ಕ್ರಿಕೆಟ್

T20 World Cup 2026: 'ತಮಾಷೆ ಮಾಡಬೇಡಿ ಭಾಯ್'; ಭಾರತ ತಂಡಕ್ಕೆ ಆಯ್ಕೆಯಾದ ಕುರಿತು ಮೊಹಮ್ಮದ್ ಸಿರಾಜ್ ಹೇಳಿದ್ದೇನು?

ಟಿ20 ಸ್ವರೂಪದಲ್ಲಿ ಸಿರಾಜ್ ಅವರ ಅಂಕಿಅಂಶಗಳು ಅಷ್ಟೇನು ಉತ್ತಮವಾಗಿಲ್ಲದ ಕಾರಣ ಬಿಸಿಸಿಐ ಅವರನ್ನು ಈ ಸ್ವರೂಪದಿಂದ ಕೈಬಿಟ್ಟಿತ್ತು.

T20 ವಿಶ್ವಕಪ್ 2026ರ ಆರಂಭಕ್ಕೂ 48 ಗಂಟೆಗಳ ಮೊದಲು, ಮೊಹಮ್ಮದ್ ಸಿರಾಜ್ ಕೇವಲ ಭಾರತ ತಂಡದ ಬೆಂಬಲಿಗರಾಗಿದ್ದರು. T20 ವಿಶ್ವಕಪ್ 2024 ವಿಜೇತ ತಂಡದಲ್ಲಿದ್ದ ಸಿರಾಜ್ ಬಳಿಕ ಭಾರತೀಯ T20 ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ ಮತ್ತು ಅವರು ಕೇವಲ ODIಗಳು ಮತ್ತು ಟೆಸ್ಟ್‌ಗಳ ಭಾಗವಾಗಿದ್ದರು. 2024ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ T20I ಸರಣಿಯ ಸಮಯದಲ್ಲಿ ಸಿರಾಜ್ ಭಾರತಕ್ಕಾಗಿ ಕೊನೆಯ ಬಾರಿಗೆ T20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದು ಗೌತಮ್ ಗಂಭೀರ್ ಅವರು ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರದ ಮೊದಲ ಸರಣಿಯಾಗಿದ್ದು, ಸಿರಾಜ್ ಮೂರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದರು.

ಸಿರಾಜ್‌ ಅವರು ಫೆಬ್ರುವರಿ ತಿಂಗಳಿನಲ್ಲಿ ಯಾವುದೇ ಟಿ20 ಕ್ರಿಕೆಟ್ ಇಲ್ಲದೆ, ಇತರ ಪಂದ್ಯಗಳೂ ಇಲ್ಲದೆ ಇರಬೇಕಿತ್ತು. ಈ ನಡುವೆ ದೇಶೀಯ ಆಟಗಳ ನಂತರ ಸ್ವಲ್ಪ ವಿಶ್ರಾಂತಿ ಮತ್ತು ಮನೆಯಲ್ಲೇ ಇರಬೇಕಾಗಿತ್ತು. ಫೆಬ್ರುವರಿ 14 ರಂದು ರಿಯಲ್ ಸೊಸಿಡಾಡ್ ವಿರುದ್ಧ ತನ್ನ ನೆಚ್ಚಿನ ಕ್ಲಬ್, ರಿಯಲ್ ಮ್ಯಾಡ್ರಿಡ್ ಅನ್ನು ವೀಕ್ಷಿಸಲು ಯೋಜಿಸಿದ್ದರು. ಭಾರತವು T20ಗಳಲ್ಲಿ ಮುಂದುವರೆದಿದೆ ಮತ್ತು ಆ ವಾಸ್ತವದೊಂದಿಗೆ ಸಿರಾಜ್ ಸಮಾಧಾನ ಮಾಡಿಕೊಂಡಿದ್ದರು.

ಆಗ ಅವರಿಗೆ ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ಫೋನ್ ಬಂತು. ಕೂಡಲೇ ಲಗೇಜ್ ಪ್ಯಾಕ್ ಮಾಡಿಕೊಂಡು ಬರುವಂತೆ ಸೂಚನೆ ನೀಡಲಾಯಿತು. ಆಗ ಸಿರಾಜ್ ಇದು ತಮಾಷೆ ಎಂದುಕೊಂಡರು. ಅದಕ್ಕೆ ನಕ್ಕ ಸಿರಾಜ್, ತಮಾಷೆ ಮಾಡಬೇಡಿ ಎಂದು ಹೇಳಿದ್ದರು. ಬಳಿಕ ಮತ್ತೊಂದು ಕರೆ ಬಂತು. ಈ ಬಾರಿ ಬಿಸಿಸಿಐನ ಆಯ್ಕೆ ಸಮಿತಿಯ ಭಾಗವಾಗಿರುವ ಪ್ರಗ್ಯಾನ್ ಓಜಾ ಕರೆ ಮಾಡಿದ್ದರು.

'ಮಿಯಾ ಬ್ಯಾಗ್ ಪ್ಯಾಕ್ ಕರ್ಲೇ ಅಂಡ್ ಕಮ್' (ಬ್ಯಾಗ್ ಪ್ಯಾಕ್ ಮಾಡಿಕೊಂಡು ಬನ್ನಿ) ಎಂದಾಗ ನಾನು, ‘ಸೂರ್ಯ ಭಾಯ್, ಮಜಾಕ್ ಮತ್ ಕರೋ’ (ತಮಾಷೆ ಮಾಡಬೇಡಿ, ಏಕೆಂದರೆ ಇದು ಆಗುವುದಿಲ್ಲ) ಎಂದು ಹೇಳಿದೆ. ಆಗ ಅವರು, ನಾನು ನಿಮಗೆ ನಿಜ ಹೇಳುತ್ತಿದ್ದೇನೆ. ತಯಾರಾಗಿರಿ ಎಂದರು. ಅವರ ಫೋನ್ ಕಾಲ್ ಕಟ್ ಆದ ಕೂಡಲೇ, ನನಗೆ (ಪ್ರಜ್ಞಾನ್) ಓಜಾ ಅವರಿಂದ ಕರೆ ಬಂದಿತು. ಆಗ ಕೂಡಲೇ ನನಗೆ ಶಾಕಿಂಗ್ ಸುದ್ದಿ ಂದಿತು. ದೇವರ ಯೋಜನೆಯನ್ನು ಯಾರೊಬ್ಬರೂ ಬದಲಿಸಲು ಸಾಧ್ಯವಿಲ್ಲ. ಬಳಿಕ ನಾನು ಪಂದ್ಯವನ್ನು ಆಡಿದೆ. ಎಲ್ಲವೂ ಬರೆದಂತೆಯೇ ನಡೆಯಿತು' ಎಂದು ಸಿರಾಜ್ ತಿಳಿಸಿದರು.

ಅದರ ನಂತರ ಎಲ್ಲವೂ ವೇಗವಾಗಿ ನಡೆಯಿತು. ನಾನು ಪ್ಯಾಕ್ ಮಾಡುವಾಗಲೂ, ಮನೆಯಿಂದ ಹೊರಡುವಾಗಲೂ ಅಪನಂಬಿಕೆ ನನ್ನೊಂದಿಗೆ ಉಳಿದಿತ್ತು. ಫೆಬ್ರುವರಿ 6 ರಂದು ಮುಂಬೈಗೆ ವಿಮಾನ ಹತ್ತಿದಾಗ ಮಾತ್ರವೇ ಅದು ನಿಜವಾಗಲು ಪ್ರಾರಂಭಿಸಿತು. 'ನೇರವಾಗಿ ವಿಶ್ವಕಪ್ ತಂಡದ ಭಾಗವಾಗುತ್ತೇನೆಂದು ನಾನು ನಿರೀಕ್ಷಿಸಿರಲಿಲ್ಲ. ಇದೊಂದು ಕನಸಂತೆ ಭಾಸವಾಯಿತು' ಎಂದರು.

ಟಿ20 ಸ್ವರೂಪದಲ್ಲಿ ಸಿರಾಜ್ ಅವರ ಅಂಕಿಅಂಶಗಳು ಅಷ್ಟೇನು ಉತ್ತಮವಾಗಿಲ್ಲದ ಕಾರಣ ಬಿಸಿಸಿಐ ಅವರನ್ನು ಈ ಸ್ವರೂಪದಿಂದ ಕೈಬಿಟ್ಟಿತ್ತು. ಸಿರಾಜ್ ಅವರ ಮೊದಲ 16 T20I ಗಳಲ್ಲಿ 32.28 ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ತಂಡದ ಯೋಜನೆಗಳು ಬದಲಾದ ಕಾರಣದಿಂದಾಗಿ ಅವರಿಗೆ ಅವಕಾಶ ಸಿಕ್ಕಿದೆ. ಹರ್ಷಿತ್ ರಾಣಾ ಅವರಿಗೆ ಗಾಯವಾಗಿದ್ದರಿಂದ ಆಯ್ಕೆದಾರರು ಬಲಗೈ ವೇಗಿಯನ್ನು ಹುಡುಕಬೇಕಾಯಿತು. ಗಾಯದಿಂದಾಗಿ ಹರ್ಷಿತ್ ರಾಣಾ ಪಂದ್ಯಾವಳಿಯಿಂದ ಹೊರಗುಳಿದ ಕಾರಮ ಸಿರಾಜ್ ಅವರಿಗೆ ಅವಕಾಶ ಸಿಕ್ಕಿತು.

ಅಲ್ಲದೆ, ಜಸ್ಪ್ರೀತ್ ಬುಮ್ರಾ ಕೂಡ ವೈರಲ್ ಜ್ವರದಿಂದ ಬಳಲುತ್ತಿದ್ದರಿಂದ ಸಿರಾಜ್ ಅವರಿಗೆ ನೇರವಾಗಿ ತಂಡದ ಪ್ಲೇಯಿಂಗ್ ಇಲೆವೆನ್ ಭಾಗವಾಗುವ ಅವಕಾಶ ಸಿಕ್ಕಿತು. ವಾಂಖೆಡೆಯಲ್ಲಿ ನಡೆದ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಮೂರು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ನೆರವಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟಿ20 ವಿಶ್ವಕಪ್ 2026: ICC ಮುಂದೆ ಮಂಡಿಯೂರಿದ PCB, ವಿಶ್ವದ ಅತ್ಯಂತ ದುಬಾರಿ ಪಂದ್ಯಕ್ಕೆ ಪಾಕ್ ಸರ್ಕಾರ ಅಸ್ತು! ನಿಗದಿಯಂತೆ India vs Pak ಮ್ಯಾಚ್

BCCI ಆಟಗಾರರ ಒಪ್ಪಂದ: ಇಶಾನ್ ಕಿಶನ್, ಮಹಮದ್ ಶಮಿ, ಶ್ರೇಯಾಂಕ ಪಾಟೀಲ್ ಸೇರಿ 8 ಮಂದಿಗೆ ಗೇಟ್ ಪಾಸ್!

ಮೋದಿ ನಡೆ 'ಹೇಡಿತನದ ಪರಮಾವಧಿ'; ನರವಾಣೆ ಪುಸ್ತಕ 56 ಇಂಚಿನ ಎದೆಯೊಳಗಿನ ಪುಕ್ಕಲುತನ ಬಯಲು ಮಾಡಿದೆ!

ರಕ್ಷಣಾ ಕೈಗಾರಿಕಾ ಸಹಕಾರವನ್ನು ಹೆಚ್ಚಿಸುವ ಜಂಟಿ ಘೋಷಣೆಗೆ ಭಾರತ ಮತ್ತು ಗ್ರೀಸ್ ಸಹಿ!

ಟಿ20 ವಿಶ್ವಕಪ್ 2026: ಭರ್ಜರಿ ಬ್ಯಾಟಿಂಗ್, ಕೆನಡಾ ವಿರುದ್ಧ ದಕ್ಷಿಣ ಆಫ್ರಿಕಾಗೆ 57 ರನ್ ಜಯ

SCROLL FOR NEXT