ಭಾರತ ಪಾಕ್ ಪಂದ್ಯಕ್ಕೆ ಪಾಕಿಸ್ತಾನ ಸರ್ಕಾರ ಅಸ್ತು 
ಕ್ರಿಕೆಟ್

T20 ವಿಶ್ವಕಪ್ 2026: ಮಂಡಿಯೂರಿದ PCB; ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮೇಲಿನ ನಿರ್ಬಂಧ ತಳ್ಳಿಹಾಕಿದ ICC; ನಿಗದಿಯಂತೆ India vs Pak ಮ್ಯಾಚ್

ಭಾರತದ ವಿರುದ್ಧ ಮೈದಾನಕ್ಕಿಳಿಯಲು ತನ್ನ ಕ್ರಿಕೆಟ್ ತಂಡಕ್ಕೆ ಅವಕಾಶ ನೀಡಿದ್ದು ಅದರಂತೆ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಹೇಳಲಾಗಿದೆ.

ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಬಹುದೊಡ್ಡ ಗೊಂದಲ ಕೊನೆಗೂ ನಿವಾರಣೆಯಾಗಿದ್ದು, ಭಾರತ-ಪಾಕಿಸ್ತಾನ ಪಂದ್ಯಕ್ಕೆ ಪಾಕಿಸ್ತಾನ ಸರ್ಕಾರ ಅಸ್ತು ಎಂದಿದೆ.

ಸೋಮವಾರ ತಡರಾತ್ರಿ ಹೊರಡಿಸಲಾದ ಅಧಿಸೂಚನೆಯಲ್ಲಿ, ಪಾಕಿಸ್ತಾನ ಸರ್ಕಾರ ಫೆಬ್ರವರಿ 15 ರಂದು ನಡೆಯಬೇಕಿದ್ದ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯವನ್ನಾಡಲು ಅನುಮೋದನೆ ನೀಡಿದೆ.

ಭಾರತದ ವಿರುದ್ಧ ಮೈದಾನಕ್ಕಿಳಿಯಲು ತನ್ನ ಕ್ರಿಕೆಟ್ ತಂಡಕ್ಕೆ ಅವಕಾಶ ನೀಡಿದ್ದು ಅದರಂತೆ ನಿಗಧಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಹೇಳಲಾಗಿದೆ.

ಪಿಸಿಬಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡೆಯುತ್ತಿರುವ ಮಾತುಕತೆಗಳ ಭಾಗವಾಗಿ ಲಾಹೋರ್‌ನಲ್ಲಿ ಸಭೆ ಸೇರಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಅಗ್ರಗಣ್ಯವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇದ್ದ ವಿಘ್ನಗಳು ಕೊನೆಗೂ ನಿವಾರಣೆಯಾಗಿದೆ.

ತನ್ನ ಹಠಮಾರಿತನದಿಂದ ಭಾರತದ ವಿರುದ್ಧ ಪಂದ್ಯ ನಿಷೇಧಿಸಿದ್ದ ಪಾಕಿಸ್ತಾನಕ್ಕೆ ಐಸಿಸಿ ನಡೆ ಬಿಸಿ ಮುಟ್ಟಿಸಿದ್ದು ಕೊನೆಗೂ ತನ್ನ ಸರ್ಕಾರದ ಮನವೊಲಿಸುವಲ್ಲಿ ಪಿಸಿಬಿ ಯಶಸ್ವಿಯಾಗಿದೆ. ಆ ಮೂಲಕ ಕಳೆದೊಂದು ವಾರದಿಂದ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ.

ಪಾಕ್ ಸರ್ಕಾರ ಹೇಳಿಕೆ

"ಬಹುಪಕ್ಷೀಯ ಚರ್ಚೆಗಳಲ್ಲಿ ಸಾಧಿಸಿದ ಫಲಿತಾಂಶಗಳು ಹಾಗೂ ಸ್ನೇಹಪರ ರಾಷ್ಟ್ರಗಳ ವಿನಂತಿಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ಸರ್ಕಾರವು ಫೆಬ್ರವರಿ 15, 2026 ರಂದು ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ತನ್ನ ನಿಗದಿತ ಪಂದ್ಯಕ್ಕಾಗಿ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಮೈದಾನಕ್ಕೆ ಇಳಿಸಲು ಈ ಮೂಲಕ ನಿರ್ದೇಶಿಸುತ್ತದೆ.

ಇದಲ್ಲದೆ, ಕ್ರಿಕೆಟ್‌ನ ಉತ್ಸಾಹವನ್ನು ರಕ್ಷಿಸುವ ಮತ್ತು ಭಾಗವಹಿಸುವ ಎಲ್ಲಾ ರಾಷ್ಟ್ರಗಳಲ್ಲಿ ಈ ಜಾಗತಿಕ ಕ್ರೀಡೆಯ ನಿರಂತರತೆಯನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವದ ಅತ್ಯಂತ ದುಬಾರಿ ಪಂದ್ಯ!

ಇನ್ನು ಈ ಪಂದ್ಯವನ್ನು ಟೂರ್ನಿಯ ಮತ್ತು ವಿಶ್ವದ ಅತ್ಯಂತ ದುಬಾರಿ ಪಂದ್ಯ ಎಂದು ಹೇಳಲಾಗಿದೆ. ಈ ಒಂದು ಪಂದ್ಯವೊಂದರ ಮೌಲ್ಯ 4000 ಕೋಟಿ ರೂಗಿಂತ ಹೆಚ್ಚು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ: ದೇವರ ಹೆಸರಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಪ್ರಮಾಣವಚನ ಸ್ವೀಕಾರ..!

'Lack Of Knowledge': ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಡಚ್ ಪ್ರಧಾನಿ ಹೇಳಿಕೆ ತಿರಸ್ಕರಿಸಿದ ಭಾರತ!

COVID ಬಳಿಕ ವಿಶ್ವಕ್ಕೆ ಮತ್ತೊಂದು ಹೆಮ್ಮಾರಿ ಕಂಟಕ: ಕೆನಡಾದಲ್ಲಿ ಮಾರಣಾಂತಿಕ 'Hantavirus' ಮತ್ತೊಂದು ಸೋಂಕು ದೃಢ, ಹೆಚ್ಚಿದ ಆತಂಕ..!

ಅಧಿಕಾರ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್: CM ಗಾದಿ ಕನಸು ಜೀವಂತ..!

94ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಕೇವಲ 1 ರೂ.ಗೆ ಭೋಜನ ವ್ಯವಸ್ಥೆ..!

SCROLL FOR NEXT