ಭಾರತ-ಪಾಕ್ ಪಂದ್ಯ 
ಕ್ರಿಕೆಟ್

T20 ವಿಶ್ವಕಪ್ 2026: ಭಾರತ ವಿರುದ್ಧ 2ನೇ ಹೀನಾಯ ಸೋಲು; ಇತಿಹಾಸದಲ್ಲೇ ಗರಿಷ್ಟ ಮೊತ್ತ..; ದಾಖಲೆಗಳ ಪಟ್ಟಿ!

ಭಾರತ ನೀಡಿದ್ದ 176 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 18 ಓವರ್ ನಲ್ಲಿ ಕೇವಲ 114ರನ್ ಗೆ ಆಲೌಟ್ ಆಯಿತು.

ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿದ್ದು, ಇದೊಂದು ಜಯ ಹಲವು ದಾಖಲೆಗಳ ಸೃಷ್ಟಿಗೆ ಕಾರಣವಾಗಿದೆ.

ನಿನ್ನೆ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 61 ರನ್ ಗಳ ಹೀನಾಯ ಸೋಲು ಕಂಡಿತು. ಭಾರತ ನೀಡಿದ್ದ 176 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 18 ಓವರ್ ನಲ್ಲಿ ಕೇವಲ 114ರನ್ ಗೆ ಆಲೌಟ್ ಆಯಿತು.

ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪ್ರಾಬಲ್ಯ ಮೆರೆದು ಏಕಪಕ್ಷೀಯವಾಗಿ ಪಂದ್ಯ ಗೆದ್ದು ಬೀಗಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಇಶಾನ್ ಕಿಶನ್ (77 ರನ್), ನಾಯಕ ಸೂರ್ಯ ಕುಮಾರ್ ಯಾದವ್ (32 ರನ್), ತಿಲಕ್ ವರ್ಮಾ (25 ರನ್) ಮತ್ತು ಶಿವಂದುಬೆ (27 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಪೇರಿಸಿ ಪಾಕಿಸ್ತಾನಕ್ಕೆ ಗೆಲ್ಲಲು 176 ರನ್ ಗುರಿ ನೀಡಿತ್ತು.

ಈ ಸವಾಲಿನ ಗುರಿ ಬೆನ್ನು ಹತ್ತಿದ ಪಾಕಿಸ್ತಾನ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪಂದ್ಯದ ಯಾವುದೇ ಹಂತದಲ್ಲೂ ಪಾಕಿಸ್ತಾನ ಭಾರತಕ್ಕೆ ಸವಾಲಾಗಲೇ ಇಲ್ಲ. ಅಂತಿಮವಾಗಿ 18 ಓವರ್ ಗೇ 114 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 61 ರನ್ ಅಂತರದಲ್ಲಿ ಭಾರತದ ಎದುರು ಶರಣಾಯಿತು.

ಹಲವು ದಾಖಲೆಗಳ ಸೃಷ್ಟಿ

ಭಾರತ ತಂಡ ಸಾಧಿಸಿದ ಈ ಆಮೋಘ ಗೆಲುವಿನ ಬಳಿಕ ಹಲವು ದಾಖಲೆಗಳು ಸಷ್ಟಿಯಾಗಿವೆ. ಈ ಎಲ್ಲ ದಾಖಲೆಗಳ ಪಟ್ಟಿ ಇಂತಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಗರಿಷ್ಠ ಸ್ಕೋರ್

ನಿನ್ನೆ ಭಾರತ ತಂಡ ಕಲೆಹಾಕಿದ್ದ 175 ರನ್ ಗಳು ಟಿ20 ವಿಶ್ವಕಪ್ ಇತಿಹಾಸದಲ್ಲೇ ಪಾಕಿಸ್ತಾನ ವಿರುದ್ಧ ಬಂದ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2022ರಲ್ಲಿ ಭಾರತ 160ರನ್ ಪೇರಿಸಿತ್ತು. ಇದ ಭಾರತ ತಂಡ ಪಾಕಿಸ್ತಾನ ವಿರುದ್ಧ ಕಲೆಹಾಕಿದ್ದ ಗರಿಷ್ಟ ಸ್ಕೋರ್ ಆಗಿತ್ತು. ಆದರೆ ನಿನ್ನೆ ಈ ದಾಖಲೆಯನ್ನೂ ಹಿಂದಿಕ್ಕಲಾಗಿದೆ.

ಪಾಕ್ ಗೆ 2ನೇ ಅತೀ ದೊಡ್ಡ ಸೋಲು

ನಿನ್ನೆಯ ಪಂದ್ಯದಲ್ಲಿ ಭಾರತ 61 ರನ್ ಗಳ ಜಯ ಸಾಧಿಸಿದ್ದು. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಸಿಕ್ಕ 2ನೇ ಅತೀ ದೊಡ್ಡ ಸೋಲಾಗಿದೆ. ಈ ಹಿಂದೆ 2014ರಲ್ಲಿ ಮೀರ್ಪುರದಲ್ಲಿ ವಿಂಡೀಸ್ ತಂಡ ಪಾಕ್ ವಿರುದ್ಧ 84 ರನ್ ಗಳ ಜಯಭೇರಿ ಭಾರಿಸಿತ್ತು. ಇದು ಅಗ್ರಸ್ಥಾನದಲ್ಲಿದ್ದು 2009ರಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ್ದ 48 ರನ್ ಗಳ ಸೋಲು ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ.

Biggest defeats for Pakistan in T20 World Cups

  • 84 runs vs WI Mirpur 2014

  • 61 runs vs Ind Colombo RPS 2026 *

  • 48 runs vs Eng The Oval 2009

ಪಾಕಿಸ್ತಾನದ 3ನೇ ಕನಿಷ್ಠ ಮೊತ್ತ

ಅಂತೆಯೇ ಇದು ಪಾಕಿಸ್ತಾನ ತಂಡದ 3ನೇ ಕನಿಷ್ಠ ಮೊತ್ತವಾಗಿದ್ದು, ಈ ಹಿಂದೆ 2014ರಲ್ಲಿ ಮೀರ್ ಪುರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 82ರನ್ ಗೆ ಆಲೌಟ್ ಆಗಿತ್ತು. ಇದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಪಾಕಿಸ್ತಾನ ಭಾರತದ ವಿರುದ್ಧ 113ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಇದು 2ನೇ ಸ್ಥಾನದಲ್ಲಿದೆ.

Lowest totals for Pakistan in T20 World Cups

  • 82 vs WI Mirpur 2014

  • 113/7 vs Ind New York 2024

  • 114 vs Ind Colombo RPS 2026 *

  • 123/7 vs SL Colombo RPS 2012

ಪಾಕ್ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಸತತ 8ನೇ ಜಯ

ಅಂತೆಯೇ ಈ ಗೆಲುವಿನ ಮೂಲಕ ಭಾರತ ಪಾಕಿಸ್ತಾನದ ವಿರುದ್ಧ ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಇದು ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ಸತತ 8ನೇ ಗೆಲುವಾಗಿದೆ. ಟಿ20 ವಿಶ್ವಕಪ್ ನಲ್ಲಿ ಒಂದು ತಂಡದ ವಿರುದ್ಧ ಮತ್ತೊಂದು ತಂಡ ಸತತ ಅತೀ ಹೆಚ್ಚು ಜಯಗಳಿಸಿದ ದಾಖಲೆ ಇದಾಗಿದೆ. ಇದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ 6 ಬಾರಿ ಸತತವಾಗಿ ಗೆದ್ದು ಈ ಸಾಧನೆ ಮಾಡಿತ್ತು.

Most wins vs an opposition in T20 World Cups

  • 8* Ind vs Pak (one Super Over win)

  • 6 Aus vs Ban

  • 6 Pak vs Ban

  • 6 SL vs WI

  • 6 WI vs Eng

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊಪ್ಪಳ: ಇಸ್ರೇಲಿ ಮಹಿಳೆ ಅತ್ಯಾಚಾರ, ವಿದೇಶಿಗನ ಕೊಲೆ ಪ್ರಕರಣ; 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ, 9 ತಿಂಗಳಲ್ಲೇ ಐತಿಹಾಸಿಕ ತೀರ್ಪು!

ದ. ಕನ್ನಡದಲ್ಲಿ ಕೋಮುವಾದದ ಕಾರಣ ಹೂಡಿಕೆಗೆ ಅಡ್ಡಿ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ದಿನೇಶ್ ಗುಂಡೂರಾವ್ ಸಮರ್ಥನೆ

ರಾಜಸ್ಥಾನ: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಏಳು ಮಂದಿ ಸಜೀವ ದಹನ

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ಲೀಕ್; ಮದುವೆ, ರಿಸಪ್ಶನ್ ಯಾವಾಗ ಗೊತ್ತಾ?

ಕಾಂಗ್ರೆಸ್ ಗೆ ಬಿಗ್ ಶಾಕ್: ಬಾಗೆಪಲ್ಲಿ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು- ಹೈಕೋರ್ಟ್ ಆದೇಶ

SCROLL FOR NEXT