ಶಾಹಿದ್ ಅಫ್ರಿದಿ 
ಕ್ರಿಕೆಟ್

T20 World Cup 2026: ಅಳಿಯ ಶಾಹೀನ್ ಶಾ ಅಫ್ರಿದಿ, ಬಾಬರ್ ಅಜಮ್, ಶಾದಾಬ್ ಖಾನ್‌ರನ್ನು ವಜಾಗೊಳಿಸಿ; ಶಾಹಿದ್ ಅಫ್ರಿದಿ ಒತ್ತಾಯ

ಶಾಹೀನ್ ಶಾ ಅಫ್ರಿದಿ ಅವರು ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅವರನ್ನು ವಿವಾಹವಾಗಿದ್ದಾರೆ.

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದು, ಪಾಕಿಸ್ತಾನದ ಕ್ರಿಕೆಟ್ ಐಕಾನ್ ಶಾಹಿದ್ ಅಫ್ರಿದಿ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಆರಾಮದಾಯಕ ಗೆಲುವು ಸಾಧಿಸಿತು ಮತ್ತು ಈ ಮೂಲಕ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಿತು. ಪಾಕಿಸ್ತಾನ ಸೂಪರ್ 8ಗೆ ಅರ್ಹತೆ ಪಡೆಯಲು ನಮೀಬಿಯಾ ವಿರುದ್ಧ ಗೆಲ್ಲಲೇಬೇಕಾಗಿದೆ ಅಥವಾ ಯಾವುದೇ ಫಲಿತಾಂಶವಿಲ್ಲದೆ ಪಂದ್ಯ ರದ್ದಾಗಬೇಕಿದೆ. ಶಾಹಿದ್ ಅಫ್ರಿದಿ ಇದೀಗ ತಂಡದ ಆಡಳಿತ ಮಂಡಳಿಯು ಬಾಬರ್ ಅಜಮ್, ಶಾದಾಬ್ ಖಾನ್ ಮತ್ತು ಶಾಹೀನ್ ಶಾ ಆಫ್ರಿದಿಯಂತಹವರನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಸಾಮಾ ಟಿವಿಯಲ್ಲಿ ಮಾತನಾಡಿದ ಅಫ್ರಿದಿ, ಬಾಬರ್, ಶಾದಾಬ್ ಮತ್ತು ಶಾಹೀನ್ ಅವರಂತಹ ಹಿರಿಯ ಆಟಗಾರರು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಹಲವು ಅವಕಾಶಗಳನ್ನು ಹೊಂದಿದ್ದರೂ, ವಿಫಲರಾಗಿದ್ದಾರೆ. ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಆದ್ದರಿಂದ, ಪಾಕಿಸ್ತಾನವು ಯುವಕರನ್ನು ಉತ್ತೇಜಿಸಲು ಮತ್ತು ನಮೀಬಿಯಾ ವಿರುದ್ಧ ಅವರಿಗೆ ಅವಕಾಶ ನೀಡಲು ಇದು ಒಳ್ಳೆಯ ಸಮಯವಾಗಿದೆ ಎಂದರು.

'ಶಾಹೀನ್, ಶಾದಾಬ್ ಮತ್ತು ಬಾಬರ್ ಅವರನ್ನು ತಂಡದಿಂದ ಕೈಬಿಡಿ. ನಮೀಬಿಯಾ ವಿರುದ್ಧ ತಾಜಾ ಮುಖಗಳನ್ನು ಪ್ರಯತ್ನಿಸಿ ಮತ್ತು ಹೊಸ ಆಟಗಾರರಿಗೆ ಆತ್ಮವಿಶ್ವಾಸ ಮೂಡಿಸಲು ಅವಕಾಶ ನೀಡಿ. ಅವರು ಬಹಳ ಸಮಯದಿಂದ ಆಡುತ್ತಿದ್ದಾರೆ. ನಾವು ನಿರೀಕ್ಷಿಸಿದಾಗಲೆಲ್ಲ ಅವರು ಉತ್ತಮ ಪ್ರದರ್ಶನ ನೀಡುವುದಿಲ್ಲ. ಈ ಹಿರಿಯ ಆಟಗಾರರು ನಮಗೆ ಅಪೇಕ್ಷಿತ ಪ್ರದರ್ಶನವನ್ನು ನೀಡದಿದ್ದರೆ, ಬೆಂಚ್‌ನಲ್ಲಿ ಕುಳಿತಿರುವ ಜೂನಿಯರ್‌ಗಳನ್ನು ಆಟವಾಡಿಸಿ. ಇದರಲ್ಲಿ ವ್ಯತ್ಯಾಸವೇನು?' ಎಂದು ಲೈವ್ ಶೋನಲ್ಲಿ ಅಫ್ರಿದಿ ಹೇಳಿದರು.

ಶಾಹೀನ್ ಶಾ ಅಫ್ರಿದಿ ಅವರು ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅವರನ್ನು ವಿವಾಹವಾಗಿದ್ದಾರೆ.

ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಇಶಾನ್ ಕಿಶನ್ ಅವರ 77 ರನ್‌ಗಳ ನೆರವಿನಿಂದ 175 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. 176 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ 18 ಓವರ್‌ಗಳಲ್ಲಿಯೇ ಕೇವಲ 114 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

'ನಾವು ನಮ್ಮ ಸ್ಪಿನ್ನರ್‌ಗಳನ್ನು ನಂಬಿದ್ದೆವು ಮತ್ತು ಆದರೆ, ಅವರಿಂದ ಇಂದು ಉತ್ತಮ ಪ್ರದರ್ಶ ಮೂಡಿ ಬರಲಿಲ್ಲ. ನಾವು ಸ್ಪಷ್ಟವಾಗಿ ನಮ್ಮ ಸ್ಪಿನ್ನರ್‌ಗಳನ್ನು ಯಾವಾಗಲೂ ನಂಬುತ್ತೇವೆ, ಏಕೆಂದರೆ ಅವರು ಕಳೆದ ಆರು ತಿಂಗಳಲ್ಲಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬ್ಯಾಟಿಂಗ್‌ನೊಂದಿಗೆ ನಾವು ಉತ್ತಮವಾಗಿ ಪ್ರಾರಂಭಿಸಲಿಲ್ಲ ಮತ್ತು ಟಿ20 ಪಂದ್ಯಗಳಲ್ಲಿ ಪವರ್‌ಪ್ಲೇ ಸಮಯದಲ್ಲೇ ನಾವು 3 ಅಥವಾ 4 ವಿಕೆಟ್ ಕಳೆದುಕೊಂಡರೆ, ಚೇಸ್ ವೇಳೆಯಲ್ಲಿ ತುಂಬಾ ಕಷ್ಟವಾಗುತ್ತದೆ' ಎಂದು ಅಘಾ ತಿಳಿಸಿದರು.

'ನನ್ನ ಪ್ರಕಾರ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮೊದಲ ಇನಿಂಗ್ಸ್‌ನಂತೆ ಇದು ಸ್ವಲ್ಪ ಟ್ಯಾಕಿ ಆಗಿತ್ತು. ಬಾಲ್ ಕೂಡ ಹಿಡಿತದಲ್ಲಿತ್ತು. ಆದರೆ, ಬೌಲಿಂಗ್‌ಗೆ ಬಂದಾಗ ಎಕ್ಸಿಕ್ಯೂಶನ್ ಸಂಪೂರ್ಣ ವಿಫಲವಾಯಿತು. ನನ್ನ ಪ್ರಕಾರ, ಪಿಚ್ ಮೊದಲ ಇನ್ನಿಂಗ್ಸ್‌ಗಿಂತ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಯಿತು ಎಂದು ನಾನು ಭಾವಿಸುತ್ತೇನೆ. ಆದರೆ, ನಾವು ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡಲಿಲ್ಲ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊಪ್ಪಳ: ಇಸ್ರೇಲಿ ಮಹಿಳೆ ಅತ್ಯಾಚಾರ, ವಿದೇಶಿಗನ ಕೊಲೆ ಪ್ರಕರಣ; 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ, 9 ತಿಂಗಳಲ್ಲೇ ಐತಿಹಾಸಿಕ ತೀರ್ಪು!

ಹಂಪಿ ಉತ್ಸವ: ನಟಿ ರಚಿತಾ ರಾಮ್ ಕಾರು ಚಾಲಕನಿಂದ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ?

ದ. ಕನ್ನಡದಲ್ಲಿ ಕೋಮುವಾದದ ಕಾರಣ ಹೂಡಿಕೆಗೆ ಅಡ್ಡಿ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ದಿನೇಶ್ ಗುಂಡೂರಾವ್ ಸಮರ್ಥನೆ

ರಾಜಸ್ಥಾನ: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಏಳು ಮಂದಿ ಸಜೀವ ದಹನ

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ಲೀಕ್; ಮದುವೆ, ರಿಸಪ್ಶನ್ ಯಾವಾಗ ಗೊತ್ತಾ?

SCROLL FOR NEXT