ಪಾಕಿಸ್ತಾನಕ್ಕೆ ಭರ್ಜರಿ ಜಯ 
ಕ್ರಿಕೆಟ್

T20 ವಿಶ್ವಕಪ್ 2026: 'ಮಾಡು ಇಲ್ಲವೇ ಮಡಿ'; ನಮೀಬಿಯಾ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಜಯ, ಸೂಪರ್ 8 ಗೆ ಪ್ರವೇಶ!

ಪಾಕಿಸ್ತಾನ ನೀಡಿದ್ದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನಮೀಬಿಯಾ ತಂಡ 17.3 ಓವರ್ ನಲ್ಲಿ ಕೇವಲ 97 ಆಲೌಟ್ ಆಗುವ ಮೂಲಕ ಬರೊಬ್ಬರಿ 102 ರನ್ ಗಳ ಅಮೋಘ ಜಯ ಕಂಡಿತು.

ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿ ಇಂದಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಪಾಕಿಸ್ತಾನ ದಾಖಲೆಯ ಜಯ ಗಳಿಸಿದ್ದು ಮಾತ್ರವಲ್ಲದೇ ಸೂಪರ್ 8 ಹಂತಕ್ಕೆ ಲಗ್ಗೆ ಇಟ್ಟಿದೆ.

ಕೊಲಂಬೋದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನಮೀಬಿಯಾ ತಂಡ 17.3 ಓವರ್ ನಲ್ಲಿ ಕೇವಲ 97 ಆಲೌಟ್ ಆಗುವ ಮೂಲಕ ಬರೊಬ್ಬರಿ 102 ರನ್ ಗಳ ಅಮೋಘ ಜಯ ಕಂಡಿತು. ಅಂತೆಯೇ ಈ ಜಯದ ಮೂಲಕ ಪಾಕಿಸ್ತಾನ ಸೂಪರ್ 8ಕ್ಕೆ ಲಗ್ಗೆ ಇಟ್ಟಿದೆ.

ಪಾಕಿಸ್ತಾನ ಭರ್ಜರಿ ಬ್ಯಾಟಿಂಗ್

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಸಾಹಿಬ್ಜಾದ ಫರ್ಹಾನ್ ಶತಕ (ಅಜೇಯ 100), ನಾಯಕ ಸಲ್ಮಾನ್ ಅಘಾ (38 ರನ್) ಮತ್ತು ಶದಾಬ್ ಖಾನ್ ಅಜೇಯ 36 ರ ನ್ ಗಳಿಸಿ ನಿಗಧಿತ 20 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 199 ರನ್ ಗಳ ಬೃಹತ್ ಮೊತ್ತ ಪೇರಿಸಿದರು.

200 ರನ್ ಗಳ ಬಹೃತ್ ಮೊತ್ತ ಬೆನ್ನು ಹತ್ತಿದ ನಮೀಬಿಯಾ ಪಾಕ್ ಬೌಲರ್ ಗಳಾದ ಉಸ್ಮಾನ್ ತಾರಿಕ್ (4 ವಿಕೆಟ್) ಮತ್ತು ಆಲ್ರೌಂಡರ್ ಶದಾಬ್ ಖಾನ್ (3 ವಿಕೆಟ್) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು.

ಇನ್ನಿಂಗ್ಸ್ ನ ಯಾವುದೇ ಹಂತದಲ್ಲೂ ಪಾಕಿಸ್ತಾನಕ್ಕೆ ಪ್ರತಿರೋಧ ತೋರದ ನಮೀಬಿಯಾ ಅಂತಿಮವಾಗಿ 17.3 ಓವರ್ ನಲ್ಲಿ ಕೇವಲ 97 ಆಲೌಟ್ ಆಯಿತು. ನಮೀಬಿಯಾ ಪರ ಲಾರೆನ್ ಸ್ಟೀನ್ ಕ್ಯಾಂಪ್ (23) ಮತ್ತು ಅಲೆಕ್ಸಾಂಡರ್ ಗಳಿಸಿದ 20 ರನ್ ಗಳೇ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಉಳಿದ ಎಲ್ಲ ಬ್ಯಾಟರ್ ಗಳೂ ಒಂದಂಕಿಗೇ ನಿರ್ಗಮಿಸಿದರು.

ಪಾಕಿಸ್ತಾನಕ್ಕೆ ದಾಖಲೆಯ ಜಯ

ಇನ್ನು ಇಂದು ಪಾಕಿಸ್ತಾನ ಗಳಿಸಿದ 102 ರನ್ ಗಳ ಜಯ ಇದು ಆ ತಂಡಕ್ಕೆ ಟಿ20 ವಿಶ್ವಕಪ್ ನಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2009ರಲ್ಲಿ ನೆದರ್ಲೆಂಡ್ ವಿರುದ್ಧ 82 ರನ್ ಗಳ ಜಯ ಗಳಿಸಿತ್ತು. ಇದು ಈ ವರೆಗಿನ ಪಾಕಿಸ್ತಾನ ತಂಡದ ಅತೀ ದೊಡ್ಡ ಗೆಲುವಾಗಿತ್ತು. ಇಂದಿನ ಪಂದ್ಯ ಈ ದಾಖಲೆಯನ್ನು ಹಿಂದಿಕ್ಕಿದೆ.

  • Biggest win for PAK in T20 WCs (by runs)

  • 102 vs NAM, Colombo SSC, 2026*

  • 82 vs NED, Lord’s, 2009

  • 72 vs SCO, Sharjah, 2021

  • 55 vs BAN, Kolkata, 2016

ಪಾಕಿಸ್ತಾನ ವಿರುದ್ಧ 3ನೇ ಕನಿಷ್ಠ ಮೊತ್ತ

ಅಂತೆಯೇ ಇಂದು ನಮೀಬಿಯಾ ಕಲೆಹಾಕಿದ 97 ರನ್ ಗಳ ಪಾಕಿಸ್ತಾನ ವಿರುದ್ಧ ದಾಖಲಾದ 3ನೇ ಕನಿಷ್ಠ ಸ್ಕೋರ್ ಆಗಿದೆ. 2022ರಲ್ಲಿ ನೆದರ್ಲೆಂಡ್ 91 ರನ್ ಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿತ್ತು.

Lowest totals against PAK in T20 WCs

  • 91/9 - NED, Perth, 2022

  • 93 - NED, Lord’s, 2009

  • 97 - NAM, Colombo SSC, 2026*

  • 99 - NZ, The Oval, 2009

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು, ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!

IPL 2026: B***s Of Steel" ರವಿಶಾಸ್ತ್ರಿ ಹೇಳಿಕೆ ಕುರಿತು ನೆಟ್ಟಿಗರಿಂದ ತೀವ್ರ ಚರ್ಚೆ!

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

SCROLL FOR NEXT