ಉಭಯ ತಂಡಗಳ ಆಟಗಾರರು 
ಕ್ರಿಕೆಟ್

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

ಇಂದು ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತು.

ಪಲ್ಲೆಕೆಲೆ: 2026ರ T20 ವಿಶ್ವಕಪ್‌ನ ಐದನೆ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಮಂಗಳವಾರ ಹ್ಯಾರಿ ಬ್ರೂಕ್ ಅವರ ಭರ್ಜರಿ ಶತಕದ ನೆರವಿನಂದ ಪಾಕಿಸ್ತಾನ ವಿರುದ್ಧ ಎರಡು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

ಇಂದು ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತು.

ಪಾಕಿಸ್ತಾನದ ಆರಂಭಿಕ ಆಟಗಾರ ಸೈಮ್ ಅಯೂಬ್ ಹಾಗೂ ನಾಯಕ ಸಲ್ಮಾನ್ ಅಲಿ ಆಘಾ ತಂಡದ ಮೊತ್ತ 27 ರನ್​ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ತಂಡದ ಸಂಕಷ್ಟಕ್ಕೀಡಾಗಿದ್ದ ವೇಳೆ ಸಾಹಿಬ್​ಜಾದಾ ಫರ್ಹಾನ್ ಜೊತೆಗೂಡಿದ ಬಾಬರ್ ಅಜಮ್ 3ನೇ ವಿಕೆಟ್ ಜೊತೆಯಾಟದಲ್ಲಿ 44 ಎಸೆತಗಳಲ್ಲಿ 47 ರನ್​ ಸೇರಿಸಿದರು.

ನಂತರ ಬಂದ ಫಖರ್ ಜಮಾನ್ 4ನೇ ವಿಕೆಟ್ ಜೊತೆಯಾಟದಲ್ಲಿ 49 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡುವ ಜೊತೆಗೆ ತಂಡದ ಮೊತ್ತವನ್ನ ಹೆಚ್ಚಿಸಿದರು. ಸಾಹಿಬ್‌ಜಾದಾ ಫರ್ಹಾನ್ 44 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 63 ರನ್ ಗಳಿಸಿ ಔಟ್ ಆದರು.

ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 32ಕ್ಕೆ 2, ಜೇಮಿ ಓವರ್ಟನ್ 26ಕ್ಕೆ 2, ಲಿಯಾಮ್ ಡಾಸೆನ್ 24ಕ್ಕೆ 3, ಆದಿಲ್ ರಶೀದ್ 31ಕ್ಕೆ 1 ವಿಕೆಟ್ ಪಡೆದರು.

ಗೆಲುವಿಗೆ 165 ರನ್ ಗಳ ಗುರಿ ಬೆನ್ನತ್ತಿದೆ ಇಂಗ್ಲೆಂಡ್, ಹ್ಯಾರಿ ಬ್ರೂಕ್ ಅವರ ಶತಕದ ನೆರವಿನಿಂದ 19. 1 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು!

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾರಿಂದ ಹೊಸ ಪಕ್ಷ ಸ್ಥಾಪನೆ; ರಾಮನಾಥಪುರಂನಲ್ಲಿ ಧ್ವಜ ಅನಾವರಣ

ಬಿಜೆಪಿ-ಸಿಪಿಐ(ಎಂ) ಹೊಂದಾಣಿಕೆಯಿಂದ ಕೇರಳಕ್ಕೆ ಹೊಸ ಹೆಸರು; ಕೇಂದ್ರ ಬಂಗಾಳವನ್ನು ನಿರ್ಲಕ್ಷಿಸಿದೆ: ಮಮತಾ

SCROLL FOR NEXT