ಭಾರತ ತಂಡ 
ಕ್ರಿಕೆಟ್

U19 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; 4 ವಿಕೆಟ್‌ ಪಡೆದು ಮಿಂಚಿದ ವಿಹಾನ್

ಇಂದು ಶ್ರೀಲಂಕಾದ ಬೊಲೊವಿಯಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಅಂಡರ್ 19 ತಂಡದ ಆರಂಭ ಕಳಪೆಯಾಗಿತ್ತು.

ಕೊಲೊಂಬೋ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ಬಾಂಗ್ಲಾದೇಶದ ವಿರುದ್ಧ ಭಾರತ 18 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಸತತ ಎರಡನೇ ಜಯ ದಾಖಲಿಸಿತು. ಈ ಮೂಲಕ ಭಾರತ ಬಿ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ಇಂದು ಶ್ರೀಲಂಕಾದ ಬೊಲೊವಿಯಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಅಂಡರ್ 19 ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ನಾಯಕ ಆಯುಷ್ ಮಾತ್ರೆ(6), ವೇದಾಂತ್ ತ್ರಿವೇದಿ (0), ವಿಹಾನ್‌ ಮಲೋತ್ರಾ (7) ಬಾಂಗ್ಲಾ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು.

ವೈಭವ್ ಸೂರ್ಯವಂಶಿ(72)ಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 48.4 ಓವರ್‌ಗಳಲ್ಲಿ 238 ರನ್‌ ಸೇರಿಸಿತು. ಬಾಂಗ್ಲಾದೇಶ ತಂಡದ ಪರ ಅಲ್ ಫಹಾದ್ 5 ವಿಕೆಟ್‌ ಕಬಳಿಸಿದರು.

ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ 29 ಓವರ್‌ಗಳಲ್ಲಿ 165 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 28.3 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಹಾನ್ ಮಲ್ಹೋತ್ರಾ ನಾಲ್ಕು ಓವರ್‌ಗಳಲ್ಲಿ 14 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದು ಮಿಂಚಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಅನುಮತಿ

ನೀವು ದ್ವೇಷದಿಂದ ಕುರುಡರಾಗಿದ್ದೀರಿ...: ನಾನು ಮುಸ್ಲಿಂ ಅಂತ ಅವಕಾಶ ಸಿಗುತ್ತಿಲ್ಲ; ರೆಹಮಾನ್ ಹೇಳಿಕೆ ಖಂಡಿಸಿದ ಕಂಗನಾ!

ಡಿಸೆಂಬರ್‌ನಲ್ಲಿ ವಿಮಾನ ಹಾರಾಟದಲ್ಲಿ ಭಾರಿ ಅವ್ಯವಸ್ಥೆ: ಇಂಡಿಗೋಗೆ 22 ಕೋಟಿ ರೂ. ದಂಡ ವಿಧಿಸಿದ DGCA

BBK 12 ವಿನ್ನರ್'ಗೆ ಸಿಕ್ಕ ವೋಟು 37 ಕೋಟಿ; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!

ಯಾವುದೇ ದೇವಸ್ಥಾನ ಕೆಡವಿಲ್ಲ; ಕಾಶಿಗೆ ಕಳಂಕ ತರಲು ಕಾಂಗ್ರೆಸ್ ನಿಂದ AI ಬಳಕೆ: UP ಸಿಎಂ ಯೋಗಿ

SCROLL FOR NEXT