ಭಾರತದ 14 ವರ್ಷದ ಬಾಲಕ ವೈಭವ್ ಸೂರ್ಯವಂಶಿ, ಶನಿವಾರ ಬಾಂಗ್ಲಾದೇಶ ವಿರುದ್ಧದ U19 ವಿಶ್ವಕಪ್ 2026ರ ಪಂದ್ಯದಲ್ಲಿ ಮತ್ತೊಂದು ಪ್ರಮುಖ ಸಾಧನೆ ಮಾಡಿದ್ದಾರೆ. ಸೂರ್ಯವಂಶಿ ಕೇವಲ 67 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಂತೆ 72 ರನ್ ಗಳಿಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕವೇ ಪಂದ್ಯವನ್ನು ಪ್ರಾರಂಭಿಸಿದ ಅವರು ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 14 ವರ್ಷ ಮತ್ತು 296 ದಿನಗಳಲ್ಲಿ, ಪುರುಷರ U19 ವಿಶ್ವಕಪ್ ಪಂದ್ಯದಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದಕ್ಕೂ ಮೊದಲು, ಈ ದಾಖಲೆಯು ಅಫ್ಗಾನಿಸ್ತಾನದ ಶಾಹಿದುಲ್ಲಾ ಕಮಲ್ ಅವರದ್ದಾಗಿತ್ತು. ಅವರು 15 ವರ್ಷ ಮತ್ತು 19 ದಿನಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಗಳಿಸಿದ್ದರು. 2010 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಗಳಿಸಿದ್ದ ಪಾಕಿಸ್ತಾನದ ಬಾಬರ್ ಅಜಮ್ ಕೂಡ ಈಗ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಪುರುಷರ U19 ವಿಶ್ವಕಪ್‌ನಲ್ಲಿ 50+ ಸ್ಕೋರ್ ದಾಖಲಿಸಿದ ಅತ್ಯಂತ ಕಿರಿಯ ಆಟಗಾರರು
14 ವರ್ಷ, 296 ದಿನ - ವೈಭವ್ ಸೂರ್ಯವಂಶಿ (ಭಾರತU19) vs ಬಾಂಗ್ಲಾದೇಶ U19, ಬುಲವಾಯೊ, 2026
15 ವರ್ಷ, 19 ದಿನ - ಶಾಹಿದುಲ್ಲಾ ಕಮಾಲ್ (ಅಫ್ಗಾನಿಸ್ತಾನ U19) vs ವೆಸ್ಟ್ ಇಂಡೀಸ್ U19, ದುಬೈ (ICCA 2), 2014
15 ವರ್ಷ, 92 ದಿನಗಳು - ಬಾಬರ್ ಅಜಮ್ (ಪಾಕಿಸ್ತಾನ U19) vs ವೆಸ್ಟ್ ಇಂಡೀಸ್ U19, ಪಾಲ್ಮರ್‌ಸ್ಟನ್ ನಾರ್ತ್, 2010
15 ವರ್ಷ, 125 ದಿನ - ಪರ್ವೇಜ್ ಮಲಿಕ್‌ಜೈ (ಅಫ್ಗಾನಿಸ್ತಾನ U19) vs ಫಿಜಿ U19, ಕಾಕ್ಸ್ ಬಜಾರ್, 2016
15 ವರ್ಷ, 132 ದಿನ - ಶರದ್ ವೆಸಾವ್ಕರ್ (ನೇಪಾಳ U19) vs ಇಂಗ್ಲೆಂಡ್ U19, ಚಟ್ಟೋಗ್ರಾಮ್, 2004
ಯೂತ್ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸೂರ್ಯವಂಶಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. 20 ಯೂತ್ ಏಕದಿನ ಪಂದ್ಯಗಳಲ್ಲಿ ವೈಭವ್ 1,047 ರನ್ ಗಳಿಸಿದ್ದರೆ, ಕೊಹ್ಲಿ 28 ಪಂದ್ಯಗಳಲ್ಲಿ 978 ರನ್ ಗಳಿಸಿದ್ದಾರೆ.
ಭಾರತ ಪರ ವಿಜಯ್ ಜೋಲ್ 36 ಪಂದ್ಯಗಳಲ್ಲಿ 1,404 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ, ಬಾಂಗ್ಲಾದೇಶದ ನಜ್ಮುಲ್ ಹೊಸೈನ್ ಶಾಂಟೊ 1,820 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.