ವಿರಾಟ್ ಕೊಹ್ಲಿ 
ಕ್ರಿಕೆಟ್

'ಬಲವಂತವಾಗಿ ಹೊರದಬ್ಬಲಾಗಿದೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ 'ಇದೇ' ಕಾರಣ!

2011 ರಿಂದ 2019ರ ನಡುವೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅಷ್ಟೇನು ಉತ್ತಮವಾಗಿಲ್ಲದಿದ್ದರೂ, ಆಗ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಮೇಲೆ ವಿಶ್ವಾಸ ಹೊಂದಿದ್ದರು.

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಕೊಹ್ಲಿ ಅವರ ಈ ನಿರ್ಧಾರದ ಹಿಂದಿನ ಕಾರಣ ಏನೆಂಬುದನ್ನು ಭಾರತದ ಮಾಜಿ ಆಟಗಾರ ಮನೋಜ್ ತಿವಾರಿ ಬಹಿರಂಗಪಡಿಸಿದ್ದಾರೆ.

2011 ರಿಂದ 2019ರ ನಡುವೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅಷ್ಟೇನು ಉತ್ತಮವಾಗಿಲ್ಲದಿದ್ದರೂ, ಆಗ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಮೇಲೆ ವಿಶ್ವಾಸ ಹೊಂದಿದ್ದರು. 2024ರ ಟಿ20 ವಿಶ್ವಕಪ್ ಗೆದ್ದ ನಂತರ 2025ರ ಮೇ 12ರಂದು, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು. ನಂತರ, ಭಾರತವು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್‌ವಾಶ್ ಮುಖಭಂಗ ಅನುಭವಿಸಿತು.

ಇನ್‌ಸೈಡ್‌ಸ್ಪೋರ್ಟ್‌ನೊಂದಿಗಿನ ವಿಶೇಷ ಸಂವಾದದಲ್ಲಿ ಮನೋಜ್ ತಿವಾರಿ ಅವರನ್ನು ಏಕದಿನ ಪಂದ್ಯಗಳು ಸುಲಭ ಸ್ವರೂಪ ಎಂದು ಒಪ್ಪುತ್ತೀರಾ ಎಂದು ಕೇಳಲಾಯಿತು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಮಾಜಿ ಆಟಗಾರ ತಿವಾರಿ, ಮಂಜ್ರೇಕರ್ ಅವರ ಮಾತನ್ನು ಒಪ್ಪಲಿಲ್ಲ. ಅಲ್ಲದೆ, ಕೊಹ್ಲಿ ಟೆಸ್ಟ್ ಕ್ರಿಕೆಟ್ ಅನ್ನು ತಾನಾಗಿಯೇ ತೊರೆದರು ಎಂಬುವುದನ್ನು ನಾನು ಒಪ್ಪುವುದಿಲ್ಲ ಎಂದರು.

ಕೊಹ್ಲಿ ಅವರನ್ನು ಬಲವಂತವಾಗಿ ಹೊರದಬ್ಬಲಾಗಿದೆ. ನಿವೃತ್ತಿ ಹೊಂದದೆ ಬೇರೆ ದಾರಿಯಿಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಯಿತು. ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟಂತೆ, ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲಿ ಈ ಅನುಭವಿ ಬ್ಯಾಟ್ಸ್‌ಮನ್‌ರನ್ನು ಕೈಬಿಡಬಹುದು ಎಂದು ವರದಿಗಳು ಸೂಚಿಸಿದ್ದವು. ಆದರೆ, ಹಾಗಾಗುವುದು ಕೊಹ್ಲಿ ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದಲೇ, ಅವರು ಟೆಸ್ಟ್ ಕ್ರಿಕೆಟ್‌ಗೆ ತಾವೇ ನಿವೃತ್ತಿ ಘೋಷಿಸಿದರು ಎಂದರು.

'ನಾನು ಅದನ್ನು (ಏಕದಿನ ಪಂದ್ಯಗಳು ಸುಲಭವಾದ ಸ್ವರೂಪ) ಒಪ್ಪುವುದಿಲ್ಲ . ಅವರನ್ನು (ಕೊಹ್ಲಿ) ಬಲವಂತವಾಗಿ ಹೊರದಬ್ಬಲಾಯಿತು. ನನ್ನ ಅಭಿಪ್ರಾಯದಲ್ಲಿ, ಅವರನ್ನು ಹೊರನಡೆಯುವಂತೆ ಒತ್ತಾಯಿಸಲಾಯಿತು. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎನ್ನುವಂತಹ ವಾತಾವರಣ ಸೃಷ್ಟಿಸಲಾಯಿತು. ಏಕೆಂದರೆ ಅವರು ರೆಡ್-ಬಾಲ್ ಕ್ರಿಕೆಟ್ ಅನ್ನು ಬಿಟ್ಟುಕೊಡುವ ವ್ಯಕ್ತಿಯಲ್ಲ. ಬಳಿಕವೇ ಆ ನಿರ್ಧಾರವನ್ನು ಅವರೇ ತೆಗೆದುಕೊಂಡರು. ಆದರೆ, ತೆರೆಮರೆಯ ಕಥೆ ಎಲ್ಲರಿಗೂ ತಿಳಿದಿದೆ. ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ' ಎಂದು ಮನೋಜ್ ತಿವಾರಿ ಹೇಳಿದರು.

ಇಷ್ಟೆಲ್ಲ ತಿಳಿದಿದ್ದರೂ, ಅವರು ಕಠಿಣ ಸ್ವರೂಪವನ್ನು ಬಿಟ್ಟು ಸುಲಭವಾದ ಸ್ವರೂಪಕ್ಕೆ ಕೇವಲ ರನ್ ಗಳಿಸಲು ಮರಳಿದರು ಎಂದು ಹೇಗೆ ಹೇಳುತ್ತೀರಿ? ನಾನು ಈ ಹೇಳಿಕೆಯನ್ನು ಒಪ್ಪುವುದಿಲ್ಲ' ಎಂದು ತಿಳಿಸಿದರು.

ಕೊಹ್ಲಿ ಅವರ ಏಕದಿನ ವೃತ್ತಿಜೀವನದ ಬಗ್ಗೆ ಮಾತನಾಡಿದ್ದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, 'ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಎತ್ತರವನ್ನು ತಲುಪುತ್ತಿದ್ದಂತೆ, ನನ್ನ ಮನಸ್ಸು ವಿರಾಟ್ ಕೊಹ್ಲಿಯತ್ತ ಸಾಗುತ್ತಿದೆ. ಅವರು ಟೆಸ್ಟ್‌ನಿಂದ ದೂರ ಸರಿದಿದ್ದಾರೆ ಮತ್ತು ನಿವೃತ್ತಿಗೂ ಮುನ್ನ ಅವರು ಟೆಸ್ಟ್‌ನಲ್ಲಿ ಐದು ವರ್ಷ 31ರ ಸರಾಸರಿಯನ್ನು ಏಕೆ ಹೊಂದಿದ್ದಾರೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಸಂಪೂರ್ಣವಾಗಿ ಹಾಕಲಿಲ್ಲ ಎಂಬುದು ದುರದೃಷ್ಟಕರ. ಏನು ಮಾಡಬಹುದಿತ್ತು ಎಂಬುದರ ಬಗ್ಗೆ ಅವರು ಯೋಚಿಸಬೇಕಿತ್ತು. ಆದರೆ, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್‌ರಂತಹ ಜನರು ನಿಜವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಕೊಹ್ಲಿ ಇಲ್ಲದಿರುವುದು ನನಗೆ ಬೇಸರವಾಗಿದೆ' ಎಂದು ಮಂಜ್ರೇಕರ್ ತಿಳಿಸಿದ್ದಾರೆ.

'ಪರವಾಗಿಲ್ಲ, ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಎಲ್ಲ ಸ್ವರೂಪದ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ, ಅವರು ಏಕದಿನ ಕ್ರಿಕೆಟ್ ಆಡಲು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ನನಗೆ ಹೆಚ್ಚು ನಿರಾಶೆಯನ್ನುಂಟುಮಾಡಿದೆ. ಏಕೆಂದರೆ, ಇದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ, ನಾನು ಮೊದಲೇ ಹೇಳಿದಂತೆ ಇದು ಅತ್ಯಂತ ಸುಲಭವಾದ ಸ್ವರೂಪ' ಎಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದಲ್ಲಿ 'ಪ್ರಜಾಪ್ರಭುತ್ವ ಗಡಿಪಾರು'; ಚುನಾವಣೆ ಮುಕ್ತವಾಗಿರುವುದಿಲ್ಲ: ಯೂನಸ್ ವಿರುದ್ಧ ಮಾಜಿ ಪ್ರಧಾನಿ ಹಸೀನಾ ವಾಗ್ದಾಳಿ

IND vs NZ 2nd T20: ಭಾರತಕ್ಕೆ 7 ವಿಕೆಟ್‌ ಗೆಲುವು

ಬ್ಯಾನರ್ ಗಲಾಟೆ ಮಾಸುವ ಮುನ್ನವೇ ಜನಾರ್ದನ ರೆಡ್ಡಿಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ; ಕಾಂಗ್ರೆಸ್ ಕೃತ್ಯ ಎಂದು ಕಿಡಿ!

'ವಿಬಿ ಜಿ ರಾಮ್ ಜಿ' ಕಾಯ್ದೆ ಜಾರಿ ಬಗ್ಗೆ NDA ಮಿತ್ರ ಪಕ್ಷ ಆತಂಕ: ರಾಜಕೀಯವಾಗಿ ಮಹತ್ವದ್ದು ಎಂದ ಸಿದ್ದರಾಮಯ್ಯ!

ಮಹಾರಾಷ್ಟ್ರ ರಾಜಕಾರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್! BMC ಯಲ್ಲಿ ಬದ್ಧವೈರಿಗಳು ಒಂದಾಗುವ ಸಾಧ್ಯತೆ?

SCROLL FOR NEXT