ಪಾಕಿಸ್ತಾನದ ಆಟಗಾರರು 
ಕ್ರಿಕೆಟ್

'ಪಾಕಿಸ್ತಾನ ಆದಷ್ಟು ಬೇಗ ಟಿ20 ವಿಶ್ವಕಪ್‌ ಅನ್ನು ಬಹಿಷ್ಕರಿಸಲಿ'; ಐಸ್‌ಲ್ಯಾಂಡ್ ಕ್ರಿಕೆಟ್‌ನ ಪೋಸ್ಟ್ ವೈರಲ್!

ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗಿನ ಸಭೆಯ ನಂತರ ಪಿಸಿಬಿ ಅಧ್ಯಕ್ಷ ನಖ್ವಿ, ಎಲ್ಲ ಆಯ್ಕೆಗಳು ಮೇಜಿನ ಮೇಲಿವೆ. ಶುಕ್ರವಾರ ಅಥವಾ ಮುಂದಿನ ಸೋಮವಾರದೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದರು.

ಫೆಬ್ರುವರಿ 7 ರಿಂದ ಪ್ರಾರಂಭವಾಗಲಿರುವ ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸುವ ಸಾಧ್ಯತೆಯ ಬಗ್ಗೆ ಎದ್ದಿರುವ ಊಹಾಪೋಹಗಳ ನಡುವೆ ಐಸ್‌ಲ್ಯಾಂಡ್ ಕ್ರಿಕೆಟ್ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ಹೊಸ ಟೀಕೆ ಮಾಡಿದೆ. ಈ ಬಗ್ಗೆ ಚರ್ಚಿಸಲು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದು, ಶುಕ್ರವಾರ ಅಥವಾ ಸೋಮವಾರ ಪಾಕಿಸ್ತಾನ ತನ್ನ ನಿಲುವನ್ನು ದೃಢಪಡಿಸುವ ನಿರೀಕ್ಷೆಯಿದೆ. ಕಳೆದ ವಾರ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಾಂಗ್ಲಾದೇಶವನ್ನು ಪಂದ್ಯಾವಳಿಯಿಂದ ತೆಗೆದುಹಾಕಿ, ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿತು. ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ಗಾಗಿ ಭಾರತ ಪ್ರವಾಸ ಮಾಡದಿರುವ ತನ್ನ ನಿಲುವನ್ನು ಪುನರುಚ್ಚರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದೀಗ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಐಸ್‌ಲ್ಯಾಂಡ್ ಬುಧವಾರ, 2009ರ ಚಾಂಪಿಯನ್‌ಗಳು ಈ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದರೆ, ಪಾಕಿಸ್ತಾನದ ಬದಲಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ನಾವು ಸಿದ್ಧರಿದ್ದೇವೆ' ಎಂದು ತಮಾಷೆ ಮಾಡಿದೆ.

'ಪಾಕಿಸ್ತಾನವು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುವುದು ನಮಗೆ ನಿಜವಾಗಿಯೂ ಅಗತ್ಯವಾಗಿದೆ. ಅವರು ಹಿಂದೆ ಸರಿದ ತಕ್ಷಣ ನಾವು ಫೆಬ್ರುವರಿ 2 ರಂದು ಕೊಲಂಬೋಗೆ ತೆರಳಲು ಸಿದ್ಧರಿದ್ದೇವೆ. ಆದರೆ, ಫೆಬ್ರುವರಿ 7 ರಂದು ಕೊಲಂಬೊಗೆ ಸರಿಯಾದ ಸಮಯಕ್ಕೆ ನಮ್ಮನ್ನು ಕರೆದೊಯ್ಯಲು ವಿಮಾನದ ವೇಳಾಪಟ್ಟಿಯನ್ನು ಹೊಂದಿಸುವುದು ತುಂಬಾ ಕಷ್ಟವಾಗಿದೆ. ಇದು ನಮ್ಮ ಆರಂಭಿಕ ಬ್ಯಾಟ್‌ಗೆ ತುಂಬಾ ಸಮಸ್ಯೆ ಮಾಡುತ್ತದೆ!' ಐಸ್‌ಲ್ಯಾಂಡ್ ಕ್ರಿಕೆಟ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದೆ.

ಅಲ್ಲದೆ, ಈ ಪೋಸ್ಟ್ ಜೊತೆಗೆ ಕೆಫ್ಲಾವಿಕ್‌ನಿಂದ ಕೊಲಂಬೊಗೆ ಪ್ರಯಾಣ ಯೋಜನೆಗಳ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದೆ. ಕೊನೆಯ ನಿಮಿಷದ ಕರೆಯ ಲಾಜಿಸ್ಟಿಕ್ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂಬುದನ್ನು ಎತ್ತಿ ತೋರಿಸಿದೆ.

ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗಿನ ಸಭೆಯ ನಂತರ ಪಿಸಿಬಿ ಅಧ್ಯಕ್ಷ ನಖ್ವಿ, ಎಲ್ಲ ಆಯ್ಕೆಗಳು ಮೇಜಿನ ಮೇಲಿವೆ. ಶುಕ್ರವಾರ ಅಥವಾ ಮುಂದಿನ ಸೋಮವಾರದೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದರು.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಮಧ್ಯಂತರ ಸರ್ಕಾರ ಭದ್ರತಾ ಕಾಳಜಿಯ ನೆಪವೊಡ್ಡಿ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ. ನಮ್ಮೆಲ್ಲ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ ನಂತರ, ಪಂದ್ಯಾವಳಿಯಿಂದ ಬಾಂಗ್ಲಾದೇಶವನ್ನು ತೆಗೆದುಹಾಕಿದ ಐಸಿಸಿ ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿತು. ಈ ನಿರ್ಧಾರಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ.

ಈಮಧ್ಯೆ, ಪಾಕಿಸ್ತಾನವು 20 ತಂಡಗಳು ಭಾಗವಹಿಸುವ ಈ ಟೂರ್ನಮೆಂಟ್‌ಗಾಗಿ ತನ್ನ ತಂಡವನ್ನು ಘೋಷಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ajit Pawar: ಇಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ಬಾರಾಮತಿಯಲ್ಲಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ, ಅಮಿತ್ ಶಾ ಭಾಗವಹಿಸುವ ನಿರೀಕ್ಷೆ

'ಅಂಬರೀಷ್ ನ ಕಾಂಗ್ರೆಸ್‌ಗೆ ಕರ್ಕೊಂಡು ಬಂದೆ, ಅವನು ತೊಳೆದುಬಿಟ್ಟು ಹೋದ: ಲೋಕಸಭೆ ಚುನಾವಣೆಯಲ್ಲಿ 36 ಕೋಟಿ ಖರ್ಚು ಮಾಡಿಸಿ HDK ಮೋಸ ಮಾಡಿದ'

ತಮಿಳು ನಾಡು ಚುನಾವಣೆ: ದೆಹಲಿಯಲ್ಲಿ ಕನಿಮೋಳಿ-ರಾಹುಲ್ ಗಾಂಧಿ ಭೇಟಿ, ಒಪ್ಪಂದಕ್ಕೆ ಬಾರದ ಮಾತುಕತೆ, ಕಾಂಗ್ರೆಸ್ ಗೆ ಸಿಗುತ್ತಾ ಹೆಚ್ಚಿನ ಸ್ಥಾನ?

ಅಜಿತ್ ಪವಾರ್ ದುರ್ಮರಣದಲ್ಲಿ 'ಪಿತೂರಿ' ನಡೆದಿದೆಯೇ? ಶರದ್ ಪವಾರ್ ಮೊದಲ ಪ್ರತಿಕ್ರಿಯೆ...

4ನೇ ಟಿ20: ದುಬೆ ಅರ್ಧಶತಕ ವ್ಯರ್ಥ; ನ್ಯೂಜಿಲ್ಯಾಂಡ್ ವಿರುದ್ಧ 50 ರನ್‌ನಿಂದ ಸೋತ ಭಾರತ!

SCROLL FOR NEXT