ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಇಶಾನ್ ಕಿಶಾನ್ ಉಗ್ರಾವತಾರಕ್ಕೆ ಕಿವೀಸ್ ಬೌಲರ್ ಗಳು ದಂಗಾಗಿದ್ದಾರೆ.
ಒಂದೇ ಓವರ್ ನಲ್ಲಿ ಭರ್ಜರಿ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸುವ ಮೂಲಕ 28 ರನ್ ಚಚ್ಚಿದ್ದಾರೆ. ಇಶ್ ಸೋಧಿ ಬೌಲಿಂಗ್ ನಲ್ಲಿ 4, 4, 4, 6, 4, 6 ಚಚ್ಚಿದ ಇಶಾನ್ ಕಿಶಾನ್, 28 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು.
ಅಲ್ಲದೇ ಸ್ವಲ್ಪ ಸಮಯದಲ್ಲೇ, 33 ಎಸೆತಗಳಲ್ಲಿ 75 ರನ್ ಗಳಿಸಿದರು. Murderous Form ಎಂದು ಲೆಜೆಂಡರಿ ಸುನೀಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೊಂದೆಡೆ ಇವರಿಗೆ ಉತ್ತಮ ಸಾಥ್ ನೀಡಿದ ಸೂರ್ಯ ಕುಮಾರ್ ಯಾದವ್ ಕೂಡಾ ನ್ಯೂಜಿಲೆಂಡ್ ಬೌಲರ್ ಗಳನ್ನು ಬೆಂಡತ್ತಿದ್ದು, 30 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿಗಳೊಂದಿಗೆ 63 ರನ್ ಗಳಿಸಿ ಔಟಾಗಿದ್ದಾರೆ.
ಉಳಿದಂತೆ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 30 ರನ್ ಗಳಿಸಿ ಔಟಾದರೆ, ಸಂಜು ಸ್ಯಾಮ್ಸನ್ ಕೇವಲ 6 ರನ್ ಗಳಿಗೆ ಬೆವನ್ ಜಾಕೊಬ್ಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇದಕ್ಕೂ ಮುನ್ನಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸೂರ್ಯ ಕುಮಾರ್ ಯಾದವ್ ಅವರ ನಿರ್ಧಾರ 'ಇಷ್ಟವಾಯಿತು' ಎಂದು ಲೆಜೆಂಡರಿ ಸುನೀಲ್ ಗವಾಸ್ಕರ್ ವೀಕ್ಷಕ ವಿವರಣೆಯಲ್ಲಿಯೇ ನೀಡಿದರು.