ವೈಭವ್ ಸೂರ್ಯವಂಶಿ - ಸಂಜು ಸ್ಯಾಮ್ಸನ್ 
ಕ್ರಿಕೆಟ್

ಭಾರತದ ಸಂಭಾವ್ಯ ಪ್ಲೇಯಿಂಗ್ XI vs ಇಂಗ್ಲೆಂಡ್: ವೈಭವ್ ಸೂರ್ಯವಂಶಿ ಔಟ್; ಸಂಜು ಸ್ಯಾಮ್ಸನ್‌ಗೆ ಮತ್ತೆ ಅವಕಾಶ!

ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಸತತ ಮೂರು ಸೋಲುಗಳ ನಂತರ, ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯಕ್ಕಾಗಿ ಭಾರತವು ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಮರಳಿ ಕರೆತರುವ ಅನಿವಾರ್ಯತೆಗೆ ಸಿಲುಕಬಹುದು.

ಶನಿವಾರ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಐದನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಸರಣಿ ಸಂಪೂರ್ಣ ವೈಟ್‌ವಾಶ್ ಅನ್ನು ತಡೆಯಲು ಭಾರತಕ್ಕೆ ಕೊನೆಯ ಅವಕಾಶವಿದೆ. ಹಾಲಿ ಚಾಂಪಿಯನ್‌ಗಳು ತಮ್ಮ 3ನೇ ಟಿ20 ವಿಶ್ವಕಪ್ ಅನ್ನು ಎತ್ತಿ ಹಿಡಿದ ನಂತರ ಒಂದೇ ಒಂದು ಟಿ20 ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಮೊದಲು ಐರ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಸರಣಿ ಸೋತ ನಂತರ ತ್ರೀ ಲಯನ್ಸ್ ವಿರುದ್ಧ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಭಾರತ ಟಿ20ಐ ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ತಂಡ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಹೀಗಾಗಿ, ಗೆಲ್ಲಲೇಬೇಕಾದ ಪಂದ್ಯಕ್ಕಾಗಿ ಪ್ಲೇಯಿಂಗ್ XI ನಲ್ಲಿ ಒಂದಕ್ಕಿಂತ ಹೆಚ್ಚು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಈ ಮೂಲಕ ಭಾರತ ತಂಡವು ಯುಕೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ವಿಫಲವಾಗಿದೆ. ತಾಂತ್ರಿಕ ದೋಷಗಳು, ಯುದ್ಧತಂತ್ರದ ತಪ್ಪುಗಳು, ಪರಿಸ್ಥಿತಿಗಳನ್ನು ಸರಿಯಾಗಿ ಓದಲು ಮತ್ತು ಅದಕ್ಕೆ ತಕ್ಕಂತೆ ಆಡುವಲ್ಲಿ ವಿಫಲತೆ ಈ ಸರಣಿಯಲ್ಲಿ ಭಾರತವನ್ನು ಕಂಗೆಡಿಸಿದ್ದು, ಆಸ್ಟ್ರೇಲಿಯಾದಲ್ಲಿ 2028ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಂಡಕ್ಕೆ ಇದು ಪ್ರಮುಖ ಸಮಸ್ಯೆಯಾಗಿ ಉಳಿದಿದೆ. ಆಗಲೂ ತಂಡ ಇದೇ ರೀತಿಯ ಟ್ರ್ಯಾಕ್‌ಗಳು ಮತ್ತು ಪರಿಸ್ಥಿತಿಗಳಲ್ಲಿ ಆಡಲಿದೆ.

ಸತತ ಮೂರು ಸೋಲುಗಳ ನಂತರ, ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯಕ್ಕಾಗಿ ಭಾರತವು ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಮರಳಿ ಕರೆತರುವ ಅನಿವಾರ್ಯತೆಗೆ ಸಿಲುಕಬಹುದು. ಸತತ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ನಂತರ ಅವರನ್ನು ತಂಡದಿಂದ ಕೈಬಿಡಲಾಗಿತ್ತು ಮತ್ತು ಅವರ ಸ್ಥಾನದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಆಡಿಸಲಾಗಿತ್ತು. ಆದರೆ, ಅವರು ನಿರೀಕ್ಷಿತ ಫಲಿತಾಂಶಗಳನ್ನು ನೀಡಲು ವಿಫಲರಾದರು.

ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಎಡಗೈ ಬ್ಯಾಟರ್‌ಗಳೇ ಅಧಿಕವಾಗಿರುವುದರಿಂದ ಭಾರತೀಯ ತಂಡದ ಆಡಳಿತವು ಸಂಜು ಸ್ಯಾಮ್ಸನ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಇದು ತಂಡವು ಅಗ್ರಕ್ರಮಾಂಕದಲ್ಲಿ ಎಡ-ಬಲಗೈ ಬ್ಯಾಲೆನ್ಸ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಹಿಂದೆ ಭಾರತಕ್ಕೆ ಕೆಲಸ ಮಾಡಿದೆ. ಕಳೆದ ಮೂರು ಪಂದ್ಯಗಳಲ್ಲಿ 5, 0 ಮತ್ತು 1 ರನ್ ಗಳಿಸಿರುವ ಸ್ಯಾಮ್ಸನ್, ಆರಂಭಿಕ ಆಟಗಾರನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿ 2026ರ ಏಷ್ಯನ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಂಡುಕೊಳ್ಳಲು ಕೊನೆಯ ಅವಕಾಶವನ್ನು ನೀಡಬಹುದು.

ವೈಭವ್ ಸೂರ್ಯವಂಶಿಯನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಡುವುದು ಅನ್ಯಾಯದ ನಿರ್ಧಾರವಾಗುತ್ತದೆ. ಆದಾಗ್ಯೂ, ಕಳೆದ ಮೂರು ಪಂದ್ಯಗಳು ಒಂದು ವಿಷಯವನ್ನು ಸ್ಪಷ್ಟಪಡಿಸಿವೆ: ಈ 15 ವರ್ಷದ ಆಟಗಾರನು ಇನ್ನಷ್ಟು ಉತ್ತಮಗೊಳ್ಳಲು, ಹಿರಿಯರ ತಂಡದಲ್ಲಿ ಆಡುವ ಹಾಗೂ ಯುಕೆ (UK) ಮೈದಾನಗಳ ಪರಿಸ್ಥಿತಿಗೆ ಹೊಂದಿಕೊಂಡು ಆಡುವ ಹೆಚ್ಚಿನ ಅನುಭವದ ಅಗತ್ಯವಿದೆ. ಕಳೆದ ಮೂರು ಪಂದ್ಯಗಳಲ್ಲಿ ಅವರು ಕ್ರಮವಾಗಿ 14, 13 ಮತ್ತು 15 ರನ್ ಗಳಿಸಿದ್ದಾರೆ. ಇವು ಅವರು ಉತ್ತಮ ಆರಂಭವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತವೆಯಾದರೂ, ಇಂಗ್ಲೆಂಡ್‌ನ ಬೌಲರ್‌ಗಳು – ವಿಶೇಷವಾಗಿ ಜೋಫ್ರಾ ಆರ್ಚರ್ ವೈಭವ್ ಅವರನ್ನು ಸುಲಭವಾಗಿ ಔಟ್ ಮಾಡುವ ತಂತ್ರವನ್ನು ಕಂಡುಕೊಂಡಿರುವಂತೆ ತೋರುತ್ತದೆ.

ತಿಲಕ್ ವರ್ಮಾ ಮೇಲೆ ಒತ್ತಡ

ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಬ್ಯಾಟರ್ ತಿಲಕ್ ವರ್ಮಾ ಅಚಿಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ, ಅವರು ಕೇವಲ 51 ರನ್ ಗಳಿಸಲು ಮಾತ್ರ ಶಕ್ತರಾಗಿದ್ದಾರೆ; ಅವರ ಸ್ಟ್ರೈಕ್ ರೇಟ್ 118.60 ರಷ್ಟು ಕಳಪೆಯಾಗಿದ್ದು, ಸರಾಸರಿ ಕೇವಲ 17 ರಷ್ಟಿದೆ (13, 24*, 3 ಮತ್ತು 11).

ತಿಲಕ್ ಭಾರತೀಯ ತಂಡದ ಉಪನಾಯಕರಾಗಿರುವುದರಿಂದ ಅವರನ್ನು ತಂಡದಿಂದ ಕೈಬಿಡುವುದು ಕಷ್ಟದ ನಿರ್ಧಾರವಾಗುತ್ತದೆ. ಆದರೆ, ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಅವರು ಮತ್ತೆ ಫಾರ್ಮ್‌ಗೆ ಮರಳಲೇಬೇಕಿದೆ. ಇಲ್ಲದಿದ್ದರೆ, ಭವಿಷ್ಯದಲ್ಲಿ ತಂಡದಿಂದ ಹೊರಗುಳಿಯುವ ಅಪಾಯವನ್ನು ಎದುರಿಸಬೇಕಾಗಬಹುದು.

ಭಾರತದ ಸಂಭಾವ್ಯ ಪ್ಲೇಯಿಂಗ್ XI vs ಇಂಗ್ಲೆಂಡ್

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಜ್, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್, ರವಿ ಬಿಷ್ಣೋಯ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಪೋಕ್ಸೋ ಕೇಸ್​ ಆರೋಪಿಯ ಭೀಭತ್ಸ ಕೃತ್ಯ: ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ ಸಂತ್ರಸ್ತೆ ಸೇರಿ 6 ಮಂದಿಯ ಭೀಕರ ಹತ್ಯೆ!