ಲಂಡನ್: ಭಾರತ ತಂಡದ ಉದಯೋನ್ಮುಖ ಆಟಗಾರರಾದ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರು ಜನಿಕ್ ಸಿನ್ನರ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಟೆನಿಸ್‌ನ ಅತಿದೊಡ್ಡ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇದು ಸೂರ್ಯವಂಶಿಗೆ ಮಹತ್ವದ್ದಾಗಿತ್ತು. ಏಕೆಂದರೆ ಅವರು ಭಾರತದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಜೊತೆಗೆ ಸ್ವಲ್ಪ ಕಾಲ ಕಳೆದಿದ್ದಾರೆ. ಈ ವಿಶೇಷ ಕ್ಷಣದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ.
ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಪ್ರವಾಸ ಒಂದು ಪ್ರಮುಖ ಮೈಲುಗಲ್ಲು ಆಗಿದೆ. ವಿಂಬಲ್ಡನ್‌ನಲ್ಲಿ ಕಾಣಿಸಿಕೊಂಡ ಯುವರಾಜ್ ಸಿಂಗ್ ಅವರಿಂದ ಕಲಿಯುವುದು ಸಾಕಾಷ್ಟಿದೆ ಎಂದಿದ್ದಾರೆ.
ಅವರು ನನ್ನ ಐಡೆಲ್ ಕೂಡಾ, ಮೊದಲ ಬಾರಿಗೆ ಅವರನ್ನು ಭೇಟಿಯಾದಾಗ ನಿಜಕ್ಕೂ ವಿಶೇಷವಾಗಿತ್ತು. ನಾವು ಸಾಕಷ್ಟು ಮಾತುಕತೆ ನಡೆಸಿದೆವು. ಅವರು ನನಗೆ ಅನೇಕ ವಿಷಯಗಳನ್ನು ವಿವರಿಸಿದರು. ಅವರಿಂದ ಬಹಳಷ್ಟು ಕಲಿಯುತ್ತಿದ್ದೇನೆ. ಇದು ನನ್ನ ಭವಿಷ್ಯಕ್ಕೆ ತುಂಬಾ ಸಹಾಯಕವಾಗಲಿದೆ ಎಂದು ಹೇಳಿದರು.
ಯುವರಾಜ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಹಲವು ವರ್ಷಗಳ ಕಾಲ ತರಬೇತಿ ಪಡೆದಿರುವ ಅಭಿಷೇಕ್ ಶರ್ಮಾ, ಸೂರ್ಯವಂಶಿ ಅವರ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.