ವೈಭವ್ ಸೂರ್ಯವಂಶಿ 
ಕ್ರಿಕೆಟ್

ವೈಭವ್ ಸೂರ್ಯವಂಶಿ ವಿಶ್ವದಾಖಲೆ: ಸತತ ಮೂರು ಸರಣಿ ಸೋಲಿನ ಬಳಿಕ ಜಿಂಬಾಬ್ವೆ ವಿರುದ್ಧದ T20 ಪಂದ್ಯ ಗೆದ್ದ ಭಾರತ!

ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತ ಆತಿಥೇಯರ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಜಿಂಬಾಬ್ವೆ ನೀಡಿದ 126 ರನ್ ಗಳ ಗುರಿ ಬೆನ್ನಟ್ಟಿ ಟೀಂ ಇಂಡಿಯಾ 40 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.

ಹರಾರೆ: ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತ ಆತಿಥೇಯರ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಜಿಂಬಾಬ್ವೆ ನೀಡಿದ 126 ರನ್ ಗಳ ಗುರಿ ಬೆನ್ನಟ್ಟಿ ಟೀಂ ಇಂಡಿಯಾ 40 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್ ಗಳ ಅಲ್ಪ ಮೊತ್ತ ಪೇರಿಸಿತು. ಜಿಂಬಾಬ್ವೆ ಪರ ರಯಾನ್ ಬರ್ಲ್ 26, ವೆಸ್ಲಿ ಮಾಧೆವೆರೆ 39 ಹಾಗೂ ತಡಿವಾನಾಶೆ ಮರುಮಣಿ ಅಜೇಯ 27 ರನ್ ಗಳಿಸಿದರು. ಭಾರತ ಪರ ಬೌಲಿಂಗ್ ನಲ್ಲಿ ಮಾಯಾಂಕ್ ಯಾದವ್, ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರೇ ಶಿವಂ ದುಬೇ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.

ಟೀಂ ಇಂಡಿಯಾ ಪರ ವೈಭವ್ ಸೂರ್ಯವಂಶಿ 18 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ವಿಶ್ವದಾಖಲೆ ಬರೆದರು. ಅಭಿಷೇಕ್ ಶರ್ಮಾ 1 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 35 ರನ್ ಗಳಿಸಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ಶ್ರೇಯಸ್ ಅಜೇಯ 28 ಮತ್ತು ತಿಲಕ್ ವರ್ಮಾ ಅಜೇಯ 6 ರನ್ ಗಳಿಸಿದರು.

ಭಾರತ, ಐರ್ಲೆಂಡ್ ಟಿ20 ಸರಣಿಯನ್ನು 0–2 ಅಂತರದಿಂದ, ಇಂಗ್ಲೆಂಡ್ ಟಿ20ಐ ಸರಣಿಯನ್ನು 0–4 ಅಂತರದಿಂದ ಮತ್ತು ಇಂಗ್ಲೆಂಡ್ ಏಕದಿನ ಸರಣಿಯನ್ನು 1–2 ಅಂತರದಿಂದ ಸೋತಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧರ್ಮೇಂದ್ರ ಪ್ರಧಾನ್ ರನ್ನು ವಜಾ ಮಾಡಿ; ಇಲ್ಲದಿದ್ದರೆ ನಿಮ್ಮ ರಾಜೀನಾಮೆಯನ್ನೂ ಕೇಳುತ್ತೇವೆ': ಪ್ರಧಾನಿ ಮೋದಿಗೆ CJP ಮುಖ್ಯಸ್ಥ Abhijeet Dipke ಒತ್ತಾಯ

KPSC ಪರೀಕ್ಷೆ ಅಕ್ರಮ: 80 ಲಕ್ಷಕ್ಕೆ ಸರ್ಕಾರಿ ಉದ್ಯೋಗ ಫಿಕ್ಸ್; ಎಚ್ಚೆತ್ತ ಕರ್ನಾಟಕ ಗೃಹ ಇಲಾಖೆ!

'ನೀಟ್‌ ಪರೀಕ್ಷಾ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳ ಆತಂಕ ನಿಜವಾದದ್ದು; ಲಾಠಿ ಚಾರ್ಜ್‌ ನೋವು ತಂದಿದೆ': Murli Manohar Joshi

'ಪ್ರಜಾಪ್ರಭುತ್ವ ಉಳಿಸಿ': CJP Protest ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರು! Video

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಕಣ್ಣೀರಿಟ್ಟ ರಾಖಿ ಸಾವಂತ್, ಪ್ರಧಾನಿಗೆ ತರಾಟೆ! Video, 6 ಮಿಲಿಯನ್ ಗೂ ಅಧಿಕ ವೀಕ್ಷಣೆ!