ದೇವದತ್ ಪಡಿಕ್ಕಲ್ - ರಜತ್ ಪಾಟೀದಾರ್ - ವಿರಾಟ್ ಕೊಹ್ಲಿ 
ಕ್ರಿಕೆಟ್

'ಕಳೆದ ವರ್ಷ ನಮಗೆ ನಾವೇ ಒಂದು ಪ್ರಶ್ನೆ ಕೇಳಿಕೊಂಡಿದ್ದೆವು': ಐಪಿಎಲ್ 2026ರ ಗೆಲುವಿನ ನಂತರ ವಿರಾಟ್ ಕೊಹ್ಲಿ ಪೋಸ್ಟ್!

RCB ಭಾನುವಾರ ಅಹಮದಾಬಾದ್‌ನಲ್ಲಿ ನಡೆದ IPL 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿಯನ್ನು ಗೆದ್ದಿದೆ. RCB ತಂಡದ ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿ, ಕಳೆದ ವರ್ಷ ಪ್ರಶಸ್ತಿ ಗೆದ್ದ ನಂತರ ತಂಡವು ಮತ್ತೆ ಈ ಸಾಧನೆ ಮಾಡಬಹುದೇ ಎಂದು ತಮ್ಮನ್ನು ತಾವೇ ಕೇಳಿಕೊಂಡಿದ್ದೆವು ಎಂದು ಹೇಳಿದರು.

ವಿರಾಟ್ ಕೊಹ್ಲಿ ಅವರ 42 ಎಸೆತಗಳಲ್ಲಿ 75* ರನ್‌ಗಳ ಅದ್ಭುತ ಬ್ಯಾಟಿಂಗ್ ನೆರವಿನಿಂದ RCB ಭಾನುವಾರ ಅಹಮದಾಬಾದ್‌ನಲ್ಲಿ ನಡೆದ IPL 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಸತತ ಎರಡು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳ ಪಟ್ಟಿಯಲ್ಲಿ ಸೇರಿಸಿಕೊಂಡಿತು.

'ಕಳೆದ ವರ್ಷ ನಮ್ಮನ್ನು ನಾವೇ ಒಂದು ಪ್ರಶ್ನೆ ಕೇಳಿಕೊಂಡೆವು - ನಾವು ಮತ್ತೆ ಅದನ್ನು ಪುನರಾವರ್ತಿಸಬಹುದೇ? ಎಂದು. ಆದರೆ, ಈಗ ಮತ್ತೆ ಬಂದಿದ್ದೇವೆ' ಎಂದು ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸ್ಟಾರ್ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್, ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ಸತತ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಭಿನಂದಿಸಿದರು.

'ಎಂತಹ ಆಟಗಾರ ಮತ್ತು ಎಂತಹ ನಾಕ್ ವಿರಾಟ್ ಕೊಹ್ಲಿ. ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆಗಳು' ಎಂದು ಕೇನ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದಿದ್ದಾರೆ.

ಕೊಹ್ಲಿ 16 ಇನಿಂಗ್ಸ್‌ಗಳಲ್ಲಿ 56.25 ಸರಾಸರಿ ಮತ್ತು 165.84 ಸ್ಟ್ರೈಕ್ ರೇಟ್‌ನಲ್ಲಿ 675 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಇದರಲ್ಲಿ ಒಂದು ಶತಕ, ಐದು ಅರ್ಧಶತಕಗಳು ಮತ್ತು 105* ಅತ್ಯುತ್ತಮ ಸ್ಕೋರ್ ಸೇರಿದೆ.

ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಟಿ 20 ಓವರ್‌ಗಳಲ್ಲಿ 155/8 ರನ್ ಗಳಿಸಿತು. ರಸಿಕ್ ದಾರ್ ಸಲಾಂ (3/27), ಭುವನೇಶ್ವರ್ ಕುಮಾರ್ (2/29) ಮತ್ತು ಜಾಶ್ ಹೇಜಲ್‌ವುಡ್ (2/37) ನಿಯಮಿತವಾಗಿ ವಿಕೆಟ್ ಪಡೆದರು.

ಈ ಗುರಿ ಬೆನ್ನತ್ತಿದ ಆರ್‌ಸಿಬಿ ಪರವಾಗಿ ವೆಂಕಟೇಶ್ ಅಯ್ಯರ್ (16 ಎಸೆತಗಳಲ್ಲಿ 32, ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ) ಮತ್ತು ವಿರಾಟ್ ಕೊಹ್ಲಿ ನಡುವೆ 62 ರನ್‌ಗಳ ಜೊತೆಯಾಟದೊಂದಿಗೆ ಆರ್‌ಸಿಬಿ ಉತ್ತಮ ಆರಂಭ ಪಡೆಯಿತು.

ಅಂತಿಮವಾಗಿ ಕೊಹ್ಲಿ (42 ಎಸೆತಗಳಲ್ಲಿ 75*, ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ) ಎರಡು ಓವರ್‌ಗಳು ಬಾಕಿ ಇರುವಾಗಲೇ ಆರ್‌ಸಿಬಿಯನ್ನು ಗೆಲುವಿನತ್ತ ಕೊಂಡೊಯ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಹಮದಾಬಾದ್‌ನಲ್ಲಿ IPL ಫೈನಲ್; RCBಗೆ ಮಾತ್ರವಲ್ಲ, ಬೆಂಗಳೂರು, ರಾಜ್ಯದ ಯುವ ಜನತೆಗೆ ಮಾಡಿದ ಅನ್ಯಾಯ: ಡಿಕೆ ಶಿವಕುಮಾರ್- Video

ಪಿಕ್ ಪಾಕೆಟ್ ಬಗ್ಗೆ ಎಚ್ಚರದಿಂದಿರಿ: CBSE ಒಳಗೆ ಕುಳಿತಿದ್ದಾರೆ; ರಾಹುಲ್ ಗಾಂಧಿ ಲೇವಡಿ

IPL 2026: 'ಇಂದಿನ ಕ್ರಿಕೆಟ್‌ನ ಬೇಡಿಕೆ ಹಾಗಾಗಿದೆ'; 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ Virat Kohli ಅಚ್ಚರಿ ಮಾತುಗಳು!

ಬೆಂಗಳೂರಿನಲ್ಲಿ 2 ಪ್ರತ್ಯೇಕ ಅಪಘಾತ: ಇಬ್ಬರ ಸಾವು, ಪೋಷಕರು-ಬೈಕ್ ಮಾಲೀಕರ ವಿರುದ್ಧ ಪೊಲೀಸ್ ಕೇಸ್!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ದರ ಏಷ್ಟಿದೆ?

SCROLL FOR NEXT