ಕೆಎಸ್ ಭರತ್ 
ಕ್ರಿಕೆಟ್

32ನೇ ವಯಸ್ಸಿಗೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ RCB ಆಟಗಾರ KS Bharat

ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿರುವ ಕೆಎಸ್ ಭರತ್, ಬಿಸಿಸಿಐಗೆ ಧನ್ಯವಾದ ಹೇಳಿದ್ದಾರೆ.

ವಿಶಾಖಪಟ್ಟಣಂ: ಆಫ್ಘಾನಿಸ್ತಾನ ಸರಣಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಸ್. ಭರತ್ ತಮ್ಮ 32ನೇ ವಯಸ್ಸಿನಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಟೀಂ ಇಂಡಿಯಾ (Team India) ಪರ ಟೆಸ್ಟ್ ಪಂದ್ಯವನ್ನಾಡಿದ ಆಂಧ್ರಪ್ರದೇಶ ಮೂಲದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಶ್ರೀಕರ್ ಭರತ್ (KS Bharat) ಕೇವಲ 32 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.

2014 ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಭರತ್​ಗೆ, ಅಂದಿನಿಂದ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.

ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿರುವ ಕೆಎಸ್ ಭರತ್, ಬಿಸಿಸಿಐಗೆ ಧನ್ಯವಾದ ಹೇಳಿದ್ದಾರೆ.

'ಭಾರತದ ಇಬ್ಬರು ಶ್ರೇಷ್ಠ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಇಬ್ಬರು ದಂತಕಥೆಗಳ ನಾಯಕತ್ವದಲ್ಲಿ ಆಡುವುದು ಮತ್ತು ಅವರಿಂದ ಕಲಿಯುವುದು ನನ್ನ ವೃತ್ತಿಜೀವನದ ಅತ್ಯುತ್ತಮ ಅನುಭವವಾಗಿತ್ತು. ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಹಿರಿಯ ಆಟಗಾರರಿಂದ ಪಡೆದ ಬೆಂಬಲ ಮತ್ತು ಮಾರ್ಗದರ್ಶನ ಯಾವಾಗಲೂ ಸ್ಮರಣೀಯವಾಗಿರುತ್ತದೆ' ಎಂದು ಹೇಳಿದ್ದಾರೆ.

ಅಂತೆಯೇ 'ನಾನು ಹೆಮ್ಮೆಯಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತೇನೆ. ನನ್ನ ದೇಶಕ್ಕಾಗಿ ಆಡುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ. ಈ ಪ್ರಯಾಣಕ್ಕೆ ಅಪಾರ ತಾಳ್ಮೆ ಮತ್ತು ಶಕ್ತಿಯ ಅಗತ್ಯವಿತ್ತು, ಆದರೆ ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವುದು ಮತ್ತಷ್ಟು ವಿಶಿಷ್ಟವಾಗಿದೆ.

ಬಿಸಿಸಿಐ, ಮತ್ತು ನನ್ನ ವೃತ್ತಿಜೀವನದುದ್ದಕ್ಕೂ ನನಗೆ ತರಬೇತಿ ನೀಡಿದ ಎಲ್ಲಾ ತರಬೇತುದಾರರು ಮತ್ತು ಆಡಳಿತ ಮಂಡಳಿಗೆ ಧನ್ಯವಾದಗಳು, ಇವರೆಲ್ಲರು ನನ್ನನ್ನು ಬೇಷರತ್ತಾಗಿ ಬೆಂಬಲಿಸಿದರು. ನನ್ನ ಎಲ್ಲಾ ತಂಡದ ಸದಸ್ಯರಿಗೆ, ನಾವು ಒಟ್ಟಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳು ಮತ್ತು ಸಾಧನೆಗಳಿಗಾಗಿ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ನೀವೆಲ್ಲರೂ ಇಲ್ಲದೆ, ನನ್ನ ಕನಸನ್ನು ನನಸಾಗಿಸಲು ಮತ್ತು ಇಷ್ಟು ವರ್ಷಗಳ ಕಾಲ ಈ ಆಟವನ್ನು ಆಡಲು ನನಗೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ವೃತ್ತಿ ಜೀವನ

ಶ್ರೀಕರ್ ಭರತ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಟೀಂ ಇಂಡಿಯಾ ಪರ ಒಟ್ಟು 7 ಪಂದ್ಯಗಳನ್ನು ಆಡಿದ್ದು, ಅವರು 20.09 ಸರಾಸರಿಯಲ್ಲಿ 221 ರನ್ ಗಳಿಸಿದ್ದಾರೆ. ಅವರಿಗೆ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಅವಕಾಶವೂ ಸಿಕ್ಕಿತ್ತು.

ಆರ್ ಸಿಬಿ ಪರವೂ ಆಡಿದ್ದ ಭರತ್

ಇನ್ನು ಭರತ್ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (2021), ದೆಹಲಿ ಕ್ಯಾಪಿಟಲ್ಸ್ (2022), ಗುಜರಾತ್ ಟೈಟಾನ್ಸ್ (2023), ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2024) ಪರವೂ ಆಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳಕ್ಕೆ ಅಪ್ಪಳಿಸಿದ ನೈಋತ್ಯ ಮಾನ್ಸೂನ್: ಕರ್ನಾಟಕದಲ್ಲಿ ಮುಂದಿನ 6 ದಿನ ಭಾರಿ ಮಳೆ ಸಾಧ್ಯತೆ: IMD

ಖಾತೆಗಾಗಿ ಫೈಟ್: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಾಮಲಿಂಗಾರೆಡ್ಡಿ!

Vijay ಬೆಂಬಲಿಸಿದ್ದು ಕಾಂಗ್ರೆಸ್‌ಗೆ ದುಬಾರಿಯಾಗಿ ಪರಿಣಮಿಸಿತು; INDIA ಮೈತ್ರಿಕೂಟ ಸಭೆಯಿಂದ ಹಿಂದೆ ಸರಿದ DMK!

ಪುಣೆ: TCS ಬಳಿಕ ಈಗ Wipro ಕಚೇರಿಯಲ್ಲಿ ಮತಾಂತರ ಮತ್ತು ಕಿರುಕುಳ ಆರೋಪ, Hindu ಟೆಕ್ಕಿ ರಾಜಿನಾಮೆ!

ರಾಜ್ಯಸಭೆ ಚುನಾವಣೆ: 11 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ; ಪಕ್ಷ ನಿಷ್ಠರಿಗೆ ಸ್ಥಾನ

SCROLL FOR NEXT