ಭಾರತ ಆಫ್ಘಾನಿಸ್ತಾನ ಟೆಸ್ಟ್ ಪಂದ್ಯ 
ಕ್ರಿಕೆಟ್

India vs Afghanistan, Day 2: ಭಾರತ ಮೊದಲ ಇನ್ನಿಂಗ್ಸ್ 564 ರನ್ ಗೆ ಡಿಕ್ಲೇರ್; ಆಫ್ಘಾನಿಸ್ತಾನ 113/5; ಸಂಕಷ್ಟದಲ್ಲಿ ಶಾಹಿದಿ ಪಡೆ!

ಭಾರತದ ಪರ ಕೆಎಲ್ ರಾಹುಲ್ (100), ನಾಯಕ ಶುಭ್ ಮನ್ ಗಿಲ್ (126) ಶತಕ ಸಿಡಿಸಿದರೆ, ರಿಷಬ್ ಪಂತ್ (81), ವಾಷಿಂಗ್ಟನ್ ಸುಂದರ್ (ಅಜೇಯ 52) ಅರ್ಧಶತಕ ಸಿಡಿಸಿದರು.

ನ್ಯೂ ಚಂಡಿಗಢ: ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ 451 ರನ್ ಗಳ ಹಿನ್ನಡೆಯೊಂದಿಗೆ ಆಫ್ಘಾನಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ.

ನ್ಯೂ ಚಂಡೀಗಢದ ಮುಲ್ಲಾನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ ಬರೊಬ್ಬರಿ 564 ರನ್ ಪೇರಿಸಿತು.

ಭಾರತದ ಪರ ಕೆಎಲ್ ರಾಹುಲ್ (100), ನಾಯಕ ಶುಭ್ ಮನ್ ಗಿಲ್ (126) ಶತಕ ಸಿಡಿಸಿದರೆ, ರಿಷಬ್ ಪಂತ್ (81), ವಾಷಿಂಗ್ಟನ್ ಸುಂದರ್ (ಅಜೇಯ 52) ಅರ್ಧಶತಕ ಸಿಡಿಸಿದರು.

ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಲೇ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಫ್ಘಾನಿಸ್ತಾನ ಭಾರತದ ಉದಯೋನ್ಮುಖ ಬೌಲರ್ ಮಾನವ್ ಸುತರ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿತು. ಕೇವಲ 62 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆರಂಭಿಕರಾದ ಅಬ್ದುಲ್ ಮಲಿಕ್ (16), ಸೆದಿಕುಲ್ಲಾ ಅಟಲ್ (17) ಬೇಗನೆ ವಿಕೆಟ್ ಒಪ್ಪಿಸಿದರು. ಅನುಭವಿ ರೆಹಮನುಲ್ಲಾ ಗುರ್ಬಾಜ್ ಕೂಡ ಕೇವಲ 12 ರನ್ ಗಳಿಸಿ ಔಟಾದರೆ, ನಾಯಕ ಹಷ್ಮತುಲ್ಲಾ ಶಾಹಿದಿ 20 ರನ್ ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಅಫ್ಸರ್ ಝಝಾಯ್ 3 ರನ್ ಗಳಿಸಿ ಮಾನವ ಸುತರ್ ಗೆ ವಿಕೆಟ್ ಒಪ್ಪಿಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ಮತ್ತೊಂದೆಡೆ ಮಧ್ಯಮ ಕ್ರಮಾಂಕದಲ್ಲಿ ರೆಹಮತ್ ಶಾ ಅಜೇಯ 43 ರನ್ ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇತ್ತ ಭಾರತದ ಪರ ಮಾನವ್ ಸುತರ್ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

Nepal floods: 4 ಅಂತಸ್ತಿನ ಕಟ್ಟಡದ ಮೇಲೆ ಪ್ರವಾಹದ ರುದ್ರನರ್ತನ, ಸಾವಿನ ಸಂಖ್ಯೆ 1,365ಕ್ಕೆ ಏರಿಕೆ, 5,326 ಮಂದಿ ಇನ್ನೂ ನಾಪತ್ತೆ, ಹೊಸ Video ವೈರಲ್!

ಭಾರತದಲ್ಲೆಲ್ಲೂ ಕಾಣದ ಒರಾಂಗುಟನ್‌ಗಳು ಒಡಿಶಾದ ಅರಣ್ಯದಲ್ಲಿ ಪತ್ತೆ; 5 ಮರಿಗಳ ರಕ್ಷಣೆ, ಕಳ್ಳಸಾಗಣೆ ಶಂಕೆ!

ಯಲ್ಲಾಪುರದಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಭಾರೀ ಪ್ರಮಾಣದ ವನ್ಯಜೀವಿ ವಸ್ತುಗಳ ವಶ, ಇಬ್ಬರ ಬಂಧನ! Video

ಸೌದಿ ಮೇಲೆ ಕ್ಷಿಪಣಿ ದಾಳಿ; Houthi ಉಗ್ರರ ವಿರುದ್ಧ ಸಿಡಿದೆದ್ದ ಭಾರತ, 'ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ದಾಳಿ ಒಪ್ಪಲ್ಲ' ಎಂದು ಗುಡುಗು