ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ 
ಕ್ರಿಕೆಟ್

ಆಫ್ಘಾನ್ ಮಣಿಸಿದ ಭಾರತಕ್ಕೆ ಆಘಾತ, WTC ಅಂಕ ಪಟ್ಟಿಯಲ್ಲಿ ಬದಲಾವಣೆಯೇ ಇಲ್ಲ..! ಕಾರಣ ಏನು ಗೊತ್ತಾ?

ಶುಭ್‌ಮನ್ ಗಿಲ್ ನೇತೃತ್ವದ ಭಾರತ ತಂಡ ಆರಂಭದಿಂದಲೇ ಸಂಪೂರ್ಣ ಪ್ರಾಬಲ್ಯ ಮೆರೆದು, ಅಫ್ಘನ್ ತಂಡವನ್ನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪುಟಿದೇಳದಂತೆ ಕಟ್ಟಿಹಾಕಿತು.

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 300 ರನ್ ಗಳ ಭರ್ಜರಿ ಗೆಲುವು ಸಾಧಿಸಿದರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ತಂಡದ ಸ್ಥಾನ ಬದಲಾವಣೆಯಾಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಹೌದು.. ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ಆಫ್ಘಾನಿಸ್ತಾನ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಹಾಗೂ 300 ರನ್‌ಗಳ ಭಾರೀ ಅಂತರದಿಂದ ಮಣಿಸಿದೆ.

ಶುಭ್‌ಮನ್ ಗಿಲ್ ನೇತೃತ್ವದ ಭಾರತ ತಂಡ ಆರಂಭದಿಂದಲೇ ಸಂಪೂರ್ಣ ಪ್ರಾಬಲ್ಯ ಮೆರೆದು, ಅಫ್ಘನ್ ತಂಡವನ್ನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪುಟಿದೇಳದಂತೆ ಕಟ್ಟಿಹಾಕಿತು. ಆಫ್ಘನ್ ತಂಡಕ್ಕೆ ಪಂದ್ಯದ ಯಾವುದೇ ಹಂತದಲ್ಲೂ ಅವಕಾಶವನ್ನೇ ನೀಡದ ಭಾರತ ಈ ಪಂದ್ಯದನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ.

ಈ ಪಂದ್ಯದಲ್ಲಿ ಪದಾರ್ಪಣೆ ಪಂದ್ಯವನ್ನಾಡಿದ ಯುವ ಸ್ಪಿನ್ನರ್ ಮಾನವ್ ಸುಥಾರ್ ಅದ್ಭುತ ಪ್ರದರ್ಶನ ನೀಡಿ, ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 564 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು. ಕೆ.ಎಲ್. ರಾಹುಲ್ ಹಾಗೂ ಶುಭ್‌ಮನ್ ಗಿಲ್ ಶತಕ ಸಿಡಿಸಿದರೆ, ಸಾಯಿ ಸುದರ್ಶನ್ ಮತ್ತು ರಿಷಭ್ ಪಂತ್ ತಲಾ ಅರ್ಧಶತಕಗಳ ಅಮೂಲ್ಯ ಕೊಡುಗೆ ನೀಡಿದರು.

ಪ್ರತ್ಯುತ್ತರವಾಗಿ ಅಫ್ಘಾನಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು. ಫಾಲೋಆನ್ ನೀಡಿದ ನಂತರವೂ ಆಫ್ಘನ್ ತಂಡದ ಪರಿಸ್ಥಿತಿ ಬದಲಾಗದೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 112 ರನ್‌ಗಳಿಗೆ ಕುಸಿದು ಬಿದ್ದಿತು. ಇದರೊಂದಿಗೆ ಭಾರತ ಇನ್ನಿಂಗ್ಸ್ ಮತ್ತು 300 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಐತಿಹಾಸಿಕ ಜಯದ ಹೊರತಾಗಿಯೂ ಬದಲಾಗ ಭಾರತದ ಸ್ಥಾನ

ಆದರೆ, ಈ ಭಾರೀ ಗೆಲುವಿನ ಹೊರತಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಭಾರತದ ಸ್ಥಾನದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಭಾರತ ತನ್ನ 6ನೇ ಸ್ಥಾನದಲ್ಲೇ ಮುಂದುವರೆದಿದೆ.

ಕಾರಣವೇನು?

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2025-27) ಟೂರ್ನಿಯಲ್ಲಿ ಕೇವಲ 9 ಪೂರ್ಣ ಸದಸ್ಯ ರಾಷ್ಟ್ರಗಳು ಮಾತ್ರ ಭಾಗವಹಿಸುತ್ತವೆ. ಅವುಗಳೆಂದರೆ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್.

ಅಫ್ಘಾನಿಸ್ತಾನಕ್ಕೆ ಟೆಸ್ಟ್ ಮಾನ್ಯತೆ ಇದ್ದರೂ, ಸೀಮಿತ ಟೆಸ್ಟ್ ವೇಳಾಪಟ್ಟಿಯ ಕಾರಣದಿಂದಾಗಿ ಪ್ರಸ್ತುತ ಡಬ್ಲ್ಯುಟಿಸಿ ಚಕ್ರದಲ್ಲಿ ಆ ತಂಡ ಭಾಗಿಯಾಗಿಲ್ಲ. ಹೀಗಾಗಿ ಆಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯ ಗೆದ್ದರೂ ಭಾರತಕ್ಕೆ ಅದರ ಫಲ ಸಿಕ್ಕಿಲ್ಲ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಈ ಏಕೈಕ ಟೆಸ್ಟ್ ಪಂದ್ಯವು ಡಬ್ಲ್ಯುಟಿಸಿ ವ್ಯಾಪ್ತಿಗೆ ಸೇರದ ದ್ವಿಪಕ್ಷೀಯ ಪಂದ್ಯವಾಗಿರುವುದರಿಂದ, ಫಲಿತಾಂಶ ಏನೇ ಆಗಿದ್ದರೂ ಯಾವುದೇ ಅಂಕಗಳನ್ನು ನೀಡಲಾಗುವುದಿಲ್ಲ. ಹೀಗಾಗಿ ಭಾರತದ ಭರ್ಜರಿ ಜಯವು ಡಬ್ಲ್ಯುಟಿಸಿ ಅಂಕಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಡಬ್ಲ್ಯುಟಿಸಿ ನಿಯಮಾವಳಿಗಳ ಪ್ರಕಾರ, ಈ 9 ರಾಷ್ಟ್ರಗಳ ನಡುವಿನ ನಿಗದಿತ ಸರಣಿಗಳಿಗೆ ಮಾತ್ರ ಅಂಕಗಳನ್ನು ನೀಡಲಾಗುತ್ತದೆ. ಒಂದು ಗೆಲುವಿಗೆ 12 ಅಂಕ, ಡ್ರಾಗೆ 4 ಅಂಕ ಮತ್ತು ಟೈ ಆದರೆ 6 ಅಂಕಗಳನ್ನು ನೀಡಲಾಗುತ್ತದೆ. ನಿಧಾನಗತಿಯ ಓವರ್‌ರೇಟ್‌ಗೆ ಅಂಕ ಕಡಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಪ್ರಸ್ತುತ ಭಾರತ ತಂಡದ ಡಬ್ಲ್ಯುಟಿಸಿ ಪಟ್ಟಿಯಲ್ಲಿ ಒಟ್ಟು 9 ಪಂದ್ಯಗಳನ್ನಾಡಿದ್ದು, ಈ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 4ರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಆಗಿದೆ. ಭಾರತದ ಒಟ್ಟು ಅಂಕಗಳಿಕೆ 52 ಆಗಿದ್ದು, ತಂಡದ ಶೇಕಡಾವಾರು ಗೆಲುವಿನ ಸರಾಸರಿ ಪ್ರಮಾಣ 48.15 ಆಗಿದೆ. ಹೀಗಾಗಿ ಭಾರತ ತಾನು ಹಿಂದೆ ಇದ್ದ 6ನೇ ಸ್ಥಾನದಲ್ಲೇ ಮುಂದುವರೆದಿದೆ.

ಭಾರತದ ಮುಂದಿನ ಟೆಸ್ಟ್ ಸರಣಿ

ಭಾರತದ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳು ಈ ವರ್ಷದ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ವಿದೇಶಿ ಸರಣಿಯಾಗಿವೆ. ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸಲು ಈ ಸರಣಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಶ್ರೀಲಂಕಾ ಪ್ರವಾಸದ ಬಳಿಕ, 2026ರ ನವೆಂಬರ್‌ನಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಈ ಸರಣಿಗಳ ಫಲಿತಾಂಶಗಳು ಭಾರತದ ಪಾಲಿಗೆ ನಿರ್ಣಾಯಕವಾಗಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

INDIA ಸಭೆಯಲ್ಲಿ ಭಾಗವಹಿಸಿರುವ ಮಮತಾಗೆ ಬಿಗ್ ಶಾಕ್; NDAಗೆ ಬೆಂಬಲ ನೀಡಿದ 20 TMC ಸಂಸದರು!

ಸುಕನ್ಯಾ ಅಕ್ರಮ ಸಂಬಂಧ ವೀರಪ್ಪನ್ ಹೇಳಿಕೆ: ನಟಿಗೆ 10 ಲಕ್ಷ ಪರಿಹಾರ ನೀಡುವಂತೆ Sun Tvಗೆ ಹೈಕೋರ್ಟ್ ನಿರ್ದೇಶನ!

ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತಾ?: 3 ಬಾರಿ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಕಣ್ಣೀರಿಟ್ಟ DCM! Video

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ INDIA ಮೈತ್ರಿಕೂಟ ಸಜ್ಜು: ಭಿನ್ನಾಭಿಪ್ರಾಯಗಳ ನಡುವೆಯೂ ಬಲ ತುಂಬುವ ಯತ್ನ, ‘ಒಗ್ಗಟ್ಟೇ ನಮ್ಮ ಶಕ್ತಿ’ ಎಂದ ಮಲ್ಲಿಕಾರ್ಜುನ ಖರ್ಗೆ..!

ಆರ್. ಮಾಧವನ್‌ ಹಿರಿಮೆಗೆ ಮತ್ತೊಂದು ಗರಿ: ಬಹುಮುಖ ಪ್ರತಿಭೆ ನಟ, ಚಿತ್ರಕಥೆಗಾರ, ನಿರ್ದೇಶಕನಿಗೆ Padma Shri ಪ್ರಶಸ್ತಿ

SCROLL FOR NEXT