ರೋಹಿತ್ ಶರ್ಮಾ 
ಕ್ರಿಕೆಟ್

T20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆಲುವಿನ ತಂಡದ ರೂವಾರಿ ರೋಹಿತ್ ಶರ್ಮಾಗೆ ಜೂನ್ 23ಕ್ಕೆ 'ಪದ್ಮಶ್ರೀ' ಪ್ರಶಸ್ತಿ ಪ್ರದಾನ!

ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ಜೂನ್ 23ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರೋಹಿತ್ ಶರ್ಮಾ ವೈಟ್-ಬಾಲ್ ಕ್ರಿಕೆಟ್‌ನಲ್ಲಿ (ಏಕದಿನ ಮತ್ತು ಟಿ20 ಸ್ವರೂಪಗಳು) ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು...

ನವದೆಹಲಿ: ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ಜೂನ್ 23ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರೋಹಿತ್ ಶರ್ಮಾ ವೈಟ್-ಬಾಲ್ ಕ್ರಿಕೆಟ್‌ನಲ್ಲಿ (ಏಕದಿನ ಮತ್ತು ಟಿ20 ಸ್ವರೂಪಗಳು) ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ರೋಹಿತ್ ಶರ್ಮಾ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲುವಿನ ಭಾರತೀಯ ತಂಡವನ್ನು ಮುನ್ನಡೆಸಿದ್ದರು. ಮಹೇಂದ್ರ ಸಿಂಗ್ ಧೋನಿ ನಂತರ ಎರಡನೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.

2022ರ ಟಿ20 ವಿಶ್ವಕಪ್‌ನಲ್ಲೂ ರೋಹಿತ್ ನಾಯಕತ್ವ ವಹಿಸಿದ್ದರು. ಆದರೆ ಭಾರತ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ್ತಿತ್ತು. ಒಂದು ವರ್ಷದ ನಂತರ 50 ಓವರ್‌ಗಳ ವಿಶ್ವಕಪ್‌ನಲ್ಲಿ, ರೋಹಿತ್ ನೇತೃತ್ವದ ಭಾರತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು. ರೋಹಿತ್ ಟಿ20 ಕ್ರಿಕೆಟ್‌ನಲ್ಲಿ 159 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐದು ಶತಕಗಳು ಮತ್ತು 32 ಅರ್ಧಶತಕಗಳು ಸೇರಿದಂತೆ 4,231 ರನ್ ಗಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 282 ಪಂದ್ಯಗಳನ್ನು ಆಡಿದ್ದು 48 ಸರಾಸರಿಯಲ್ಲಿ 11,577 ರನ್ ಗಳಿಸಿದ್ದಾರೆ. ಇದರಲ್ಲಿ 33 ಶತಕಗಳು ಮತ್ತು 51 ಅರ್ಧಶತಕಗಳು ಸೇರಿವೆ. ಏಕದಿನ ಕ್ರಿಕೆಟ್ ನಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಗಳ ಸಿಡಿಸಿ ವೈಯಕ್ತಿಕ ದಾಖಲೆಯನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಅಳಿವಿನಂಚಿನ ‘ಗೋಡಾವಣ’ಕ್ಕೆ ಮರುಜೀವ: ಜೈಸಲ್ಮೇರ್‌ನಲ್ಲಿ 2 Great Indian Bustards ಪಕ್ಷಿಗಳ ಬಿಡುಗಡೆ-Video

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ