ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ 
ಕ್ರಿಕೆಟ್

ಶ್ರೀಲಂಕಾ ಪ್ರವಾಸಕ್ಕೆ ಅಂಡರ್-19 ಭಾರತ ತಂಡ ಪ್ರಕಟ: Rahul Dravid ಪುತ್ರ ಅನ್ವಯ್ ಗೆ ಸ್ಥಾನ!

17 ವರ್ಷದ ಅನ್ವಯ್, 2025ರ ಬಿಸಿಸಿಐ ಅಂಡರ್-19 ಏಕದಿನ ಚಾಲೆಂಜರ್ ಟ್ರೋಫಿಗಾಗಿ ಆಯ್ಕೆಯಾದ ನಾಲ್ಕು ತಂಡಗಳಲ್ಲಿ ಒಂದರ ಭಾಗವಾಗಿದ್ದರು.

ಮುಂಬೈ: ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ಪ್ರವಾಸಕ್ಕಾಗಿ ಆಯ್ಕೆಯಾದ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಪ್ರಕಟಿಸಲಾದ ಭಾರತ ಅಂಡರ್-19 ಏಕದಿನ ತಂಡದಲ್ಲಿ ಅನ್ವಯ್‌ಗೆ ಅವಕಾಶ ನೀಡಲಾಗಿದೆ. ತಂಡದಲ್ಲಿ ರಜತ್ ಬಘೇಲ್ ಜೊತೆಗೆ ವಿಕೆಟ್‌ಕೀಪರ್-ಬ್ಯಾಟರ್ ಆಗಿ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತ ‘ಎ’, ಭಾರತ ‘ಬಿ’ ಹಾಗೂ ಅಫ್ಘಾನಿಸ್ತಾನ ಅಂಡರ್-19 ತಂಡಗಳ ನಡುವೆ ನಡೆದ ತ್ರಿಕೋನ ಸರಣಿಯಲ್ಲಿ ಅನ್ವಯ್ ಭಾರತ ಅಂಡರ್-19 ‘ಬಿ’ ತಂಡವನ್ನು ಪ್ರತಿನಿಧಿಸಿದ್ದರು.

17 ವರ್ಷದ ಅನ್ವಯ್, 2025ರ ಬಿಸಿಸಿಐ ಅಂಡರ್-19 ಏಕದಿನ ಚಾಲೆಂಜರ್ ಟ್ರೋಫಿಗಾಗಿ ಆಯ್ಕೆಯಾದ ನಾಲ್ಕು ತಂಡಗಳಲ್ಲಿ ಒಂದರ ಭಾಗವಾಗಿದ್ದರು. ಅಗ್ರ ಕ್ರಮಾಂಕದ ಬ್ಯಾಟರ್ ಹಾಗೂ ವಿಕೆಟ್‌ಕೀಪರ್ ಆಗಿರುವ ಅವರು, ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ವೇದಿಕೆಯಾಗಿರುವ ಈ ವಾರ್ಷಿಕ ಟೂರ್ನಿಯಲ್ಲಿ ಟೀಮ್ ಸಿ ಪರ ಆಡಿದ್ದರು.

ಅಂದಹಾಗೆ ಭಾರತ ಅಂಡರ್-19 ಏಕದಿನ ತಂಡವನ್ನು ಯಶಬರ್ಧನ್ ಸಿಂಗ್ ಚೌಹಾಣ್ ಮುನ್ನಡೆಸಲಿದ್ದು, ಲಕ್ಷ್ಯ ರೈಚಂದಾನಿ ಉಪನಾಯಕರಾಗಿರುತ್ತಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ಎರಡು ಬಹುದಿನಗಳ ಪಂದ್ಯಗಳಲ್ಲಿಯೂ ಯಶಬರ್ಧನ್ ತಂಡದ ನಾಯಕರಾಗಿರುತ್ತಾರೆ. ಆ ತಂಡದಲ್ಲಿ ಮಾನವ್ ಕೃಷ್ಣ ಹಾಗೂ ಆರ್ಯನ್ ಸಂದೇಶ್ ಸಕ್ಪಾಲ್ ವಿಕೆಟ್‌ಕೀಪರ್‌ಗಳಾಗಿ ಆಯ್ಕೆಯಾಗಿದ್ದಾರೆ.

ಭಾರತ ಪುರುಷರ ಅಂಡರ್-19 ಏಕದಿನ ತಂಡ

ಯಶಬರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರೈಚಂದಾನಿ (ಉಪನಾಯಕ), ಸಾಗರ್ ವಿರ್ಕ್, ವಿನೀತ್ ವಿ.ಕೆ., ಅರ್ಜುನ್ ರಾಜ್‌ಪುತ್, ಕುಶಾಗ್ರ ಓಜಾ, ರಜತ್ ಬಘೇಲ್ (ವಿಕೆಟ್‌ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್‌ಕೀಪರ್), ಅನ್ಮೋಲ್‌ಜೀತ್ ಸಿಂಗ್, ವುಟ್ಕುರಿ ಯಶ್ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶಾವಿನ್ ವಿ., ಕಾವ್ಯ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್.

ಭಾರತ ಪುರುಷರ ಅಂಡರ್-19 ಬಹುದಿನಗಳ ತಂಡ

ಯಶಬರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರೈಚಂದಾನಿ (ಉಪನಾಯಕ), ಸಾಗರ್ ವಿರ್ಕ್, ಪಟೇಲ್ ಕುಶ್, ಮನಾಲ್ ಚೌಹಾಣ್, ಕುಶಾಗ್ರ ಓಜಾ, ಮಾನವ್ ಕೃಷ್ಣ (ವಿಕೆಟ್‌ಕೀಪರ್), ಆರ್ಯನ್ ಸಂದೇಶ್ ಸಕ್ಪಾಲ್ (ವಿಕೆಟ್‌ಕೀಪರ್), ಹೇಮಚುದೇಶನ್ ಜೆ., ಬಿ.ಕೆ. ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯ ಪರೇಶ್ ಪಟೇಲ್, ಪ್ರಿಯಾಂಶು ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪಾಟಿ ವೆಂಕಟ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜನರ ಭಾವನೆ ಮೇಲೆ ರಾಜಕಾರಣ ಮಾಡಲ್ಲ: ಸುಮ್ಮನೆ ಘೋಷಣೆ ಮಾಡಿ ಮರೆಯುವ ಜಾಯಮಾನ ನಮ್ಮದಲ್ಲ- ಸಿಎಂ ಡಿಕೆ ಶಿವಕುಮಾರ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಪಂಚಾಯ್ತಿ ಚುನಾವಣೆ ನಡೆಸಲು ಸಚಿವ ಸಂಪುಟದ ನಿರ್ಧಾರ: EVM ಬದಲು ಮತಪೆಟ್ಟಿಗೆ ಬಳಕೆ

ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! video

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!