ಸ್ಮೃತಿ ಮಂದನಾ-ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ 
ಕ್ರಿಕೆಟ್

Women's T20 World Cup 2026: ಸ್ಮೃತಿ ಅರ್ಧಶತಕ; ಹರ್ಮನ್ ಪ್ರೀತ್, ರಿಚಾ ಘೋಷ್ ಸಮಯೋಚಿತ ಬ್ಯಾಟಿಂಗ್; ಪಾಕಿಸ್ತಾನಕ್ಕೆ 171 ರನ್ ಟಾರ್ಗೆಟ್!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು.

ಬರ್ಮಿಂಗ್ ಹ್ಯಾಮ್: ಐಸಿಸಿ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ 171 ರನ್ ಗಳ ಸವಾಲಿನ ಗುರಿ ನೀಡಿದೆ.

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು.

ಭಾರತದ ಪರ ಸ್ಮೃತಿ ಮಂದನಾ (68 ರನ್) ಅರ್ಧಶತಕ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅವರಿಗೆ ನಾಯಕಿ ಹರ್ಮನ್ ಪ್ರೀತ್ ಕೌರ್ (36) ಮತ್ತು ರಿಚಾ ಘೋಷ್ (34) ಉತ್ತಮ ಸಾಥ್ ನೀಡಿದರು. ಅಂತಿಮ ಹಂತದಲ್ಲಿ ದೀಪ್ತಿ ಶರ್ಮಾ ಅಜೇಯ 12 ರನ್ ಗಳಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.

ನಿರಾಶೆ ಮೂಡಿಸಿದ ಅಗ್ರ ಕ್ರಮಾಂಕ

ಉಳಿದಂತೆ ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಭಾರತ ಅಗ್ರ ಕ್ರಮಾಂಕ ನಿರಾಶೆ ಮೂಡಿಸಿತು. ಭಾರತ ಪ್ರಮುಖ ಬ್ಯಾಟರ್ ಗಳಾದ ಶಫಾಲಿ ವರ್ಮಾ 6, ಜೆಮೀಮಾ ರೋಡ್ರಿಗಸ್ 1 ರನ್ ಗಳಿಸಿ ಔಟಾದರೆ, ಭಾರ್ತಿ ಫುಲ್ಮಾಲಿ 1, ಶ್ರೇಯಾಂಕ ಪಾಟೀಲ್ 1 ರನ್ ಗಳಿಸಿದರು.

ಪಾಕಿಸ್ತಾನ ಪರ ಸಾದಿಯಾ ಇಕ್ಬಾಲ್ ಮತ್ತು ಫಾತಿಮಾ ಸನಾ ತಲಾ 2 ವಿಕೆಟ್ ಪಡೆದರೆ, ತಸ್ಮಿಯಾ ರುಬಾಬ್ ಮತ್ತು ರಮೀಮ್ ಶಮೀಮ್ ತಲಾ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಭಾರತ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿ ಪಾಕಿಸ್ತಾನಕ್ಕೆ ಗೆಲ್ಲಲು 171 ರನ್ ಗುರಿ ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿವಾದ: 'ಕರ್ನಾಟಕ ಬಂದ್' ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಸಭೆ!

ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ನೋಯ್ಡಾದ ಮಹಿಳೆ ವಿರುದ್ಧ FIR ದಾಖಲು!

ಉಭಯ ಸದನಗಳಲ್ಲಿ ಸಾರ್ವಜನಿಕ ಪರೀಕ್ಷೆ ಅಕ್ರಮ ತಡೆ ಕಾಯ್ದೆಗೆ ಅಂಗೀಕಾರ, ರಾಷ್ಟ್ರಪತಿ ಅನುಮೋದನೆಗಾಗಿ ರವಾನೆ

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

ಪಾಕ್ ಸೇನೆ ಇಸ್ರೇಲ್ ಗಿಂತಲೂ ಕೆಟ್ಟದು: ಮುನೀರ್ ಒಬ್ಬ 'Zalim'; ಕ್ಯಾಮರಾ ಮುಂದೆ ಒಂದೇ ಸಮನೆ ಕಣ್ಣೀರಿಟ್ಟ PoK ವ್ಯಕ್ತಿ! ಮನಕಲಕುವ Video