ವೈಭವ್ ಸೂರ್ಯವಂಶಿ ತಾಯಿ ಆರತಿ  
ಕ್ರಿಕೆಟ್

ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ತಾಯಿಯ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಿಚ್ಚಿಟ್ಟ ಬಾಲ್ಯದ ಕೋಚ್! Video

18 ವರ್ಷದ ಬಾಲಕ ಕ್ರಿಕೆಟ್ ನಲ್ಲಿ ಅದ್ಬುತ ಯಶಸ್ಸು ಸಾಧಿಸುತ್ತಿರುವಂತೆಯೇ ಜಾಗತಿಕ ಕ್ರಿಕೆಟ್ ನಲ್ಲಿ ಭ್ರಾತೃತ್ವದ ಕಲ್ಪನೆಗೆ ಹೆಚ್ಚಿನ ಮಹತ್ವ ದೊರೆಯುುತ್ತಿದೆ.

ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದು. ತನಗೆ ಎಷ್ಟೇ ಕಷ್ಟ, ನೋವಾದರೂ ತನ್ನ ಮಕ್ಕಳಿಗೆ ಮಾತ್ರ ಏನೇ ತೊಂದರೆಯಾಗದಂತೆ ಸಾಕಿ ಸಲುಹುತ್ತಾರೆ. ತನ್ನ ಮಗನ ಶ್ರೇಯಸ್ಸಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಆತನ ಏಳಿಗೆಯಲ್ಲಿಯೇ ಸಂತಸಪಡುತ್ತಾರೆ. ಈ ಮಾತು ಇದೀಗ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ತಾಯಿಯ ವಿಚಾರದಲ್ಲೂ ಕೇಳಿಬರುತ್ತಿದೆ.18 ವರ್ಷದ ಬಾಲಕ ಕ್ರಿಕೆಟ್ ನಲ್ಲಿ ಅದ್ಬುತ ಯಶಸ್ಸು ಸಾಧಿಸುತ್ತಿರುವಂತೆಯೇ ಜಾಗತಿಕ ಕ್ರಿಕೆಟ್ ನಲ್ಲಿ ಭ್ರಾತೃತ್ವದ ಕಲ್ಪನೆಗೆ ಹೆಚ್ಚಿನ ಮಹತ್ವ ದೊರೆಯುುತ್ತಿದೆ.

ಹೌದು. ಒಂದು ಸಣ್ಣ ಹಳ್ಳಿಯಿಂದ ಬಂದು ಅಚ್ಚರಿ ರೀತಿಯಲ್ಲಿ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿರುವ ವೈಭವ್ ಸೂರ್ಯವಂಶಿ ಹಿಂದೆ ಅವರ ಕುಟುಂಬದ ಅಪಾರ ಪರಿಶ್ರಮ ಮತ್ತು ತ್ಯಾಗದ ಸ್ಪೂರ್ತಿದಾಯಕ ಕಥೆ ಇದೆ. ವೈಭವ್ ಸೂರ್ಯವಂಶಿ ಬಾಲ್ಯದ ತರಬೇತುದಾರ ಮನೀಶ್ ಓಜಾ ಈಗ ಬಾಲಕನ ಆರಂಭಿಕ ಕ್ರೀಡಾ ಪ್ರಯಾಣದ ವಿವರಗಳನ್ನು ಹಂಚಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿಯ ಬೆನ್ನೆಲುಬು ಆಗಿ ನಿಂತು ಅಸಾಧಾರಣವಾಗಿ ಬೆಳೆಸಿದ ಅವರ ತಾಯಿ ಆರತಿಯ ಕೊಡುಗೆಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ಮಗನ ಆಕಾಂಕ್ಷೆಗಳನ್ನು ಈಡೇರಿಸಲು ಪ್ರತಿದಿನ ಹೇಗೆಲ್ಲಾ ಶ್ರಮಪಟ್ಟರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ ಅವರ ತಾಯಿ ಆರತಿ ಬೆಳಿಗ್ಗೆ 2 ಅಥವಾ 2.30 ಕ್ಕೆ ಎದ್ದು ಊಟವನ್ನು ಸಿದ್ಧಪಡಿಸುತ್ತಿದ್ದರು ಎಂದು ಓಜಾ ಸುದ್ದಿಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI)ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ತಂದೆ-ಮಗ ಜೋಡಿ ಬೆಳಿಗ್ಗೆ 5:00 ರ ಸುಮಾರಿಗೆ ಪಾಟ್ನಾದಲ್ಲಿ ತರಬೇತಿಗೆ ಹೊರಡುವ ಮುನ್ನಾ ಅವರ ತಾಯಿ ಬೃಹತ್ ಪ್ರಮಾಣದಲ್ಲಿ ಅಡುಗೆ ಮಾಡುತ್ತಿದ್ದರು. ದೀರ್ಘ ಪ್ರಯಾಣದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ಅವರು ನಿಸ್ವಾರ್ಥದಿಂದ ಅಡುಗೆ ಸಜ್ಜು ಮಾಡುತ್ತಿದ್ದರು. ವೈಭವ್ ಅಥವಾ ಅವರ ತಂದೆ ಅಥವಾ ಡ್ರೈವರ್ ಮಾತ್ರವಲ್ಲ, ಆತನೊಂದಿಗೆ ಬರುವ ಕೆಲವು ಬೌಲರ್ ಗಳಿಗೂ ಊಟ ಮಾಡುತ್ತಿದ್ದರು ಎಂದು ಕೋಚ್ ತಿಳಿಸಿದರು.

ಆಕೆಯ ಅಪಾರ ಔದಾರ್ಯ ಗುಣವನ್ನು ಶ್ಲಾಘಿಸಿದ ಓಟಾ, ಮನೆಯಲ್ಲಿ ಸಾಕಷ್ಟು ಹಣ ಅಥವಾ ಬೆಂಬಲವಿಲ್ಲದ ಹಲವಾರು ಯುವ ಅಕಾಡೆಮಿ ನೆಟ್ ಬೌಲರ್‌ಗಳಿಗೆ ನಿಯಮಿತವಾಗಿ ದೊಡ್ಡ ಬಾಕ್ಸ್ ನಲ್ಲಿ ಊಟವನ್ನು ಒದಗಿಸುತ್ತಿದ್ದರು. ಇದು ದಿನನಿತ್ಯ ನಡೆಯುತಿತ್ತು ಎಂದು ತಿಳಿಸಿದರು. 10-15 ಬೌಲರ್ ಗಳು ನಿಯಮಿತವಾಗಿ ಬರುತ್ತಿದ್ದರು. ಬಾಲ್ಯದಲ್ಲಿ ಅನುಭವಿಸಿದ ಅಪಾರ ಕಷ್ಟಗಳು ಈಗ ಶ್ರಿಮಂತಿಕೆಯ ಪ್ರತಿಫಲ ನೀಡಿವೆ ಎಂದು ಅವರು ಹೇಳಿಕೊಂಡರು.

ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ವೈಭವ್ ಸೂರ್ಯವಂಶಿ ಐಪಿಎಲ್ 2026ರಲ್ಲಿ ಹದಿನಾರು ಪಂದ್ಯಗಳಲ್ಲಿ 776 ರನ್‌ಗಳನ್ನು ಗಳಿಸಿ ಪ್ರತಿಷ್ಠಿತ ಆರೆಂಜ್ ಕ್ಯಾಪ್ ಅನ್ನು ಪಡೆದುಕೊಂಡು ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿವಾದ: 'ಕರ್ನಾಟಕ ಬಂದ್' ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಸಭೆ!

ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ನೋಯ್ಡಾದ ಮಹಿಳೆ ವಿರುದ್ಧ FIR ದಾಖಲು!

ಉಭಯ ಸದನಗಳಲ್ಲಿ ಸಾರ್ವಜನಿಕ ಪರೀಕ್ಷೆ ಅಕ್ರಮ ತಡೆ ಕಾಯ್ದೆಗೆ ಅಂಗೀಕಾರ, ರಾಷ್ಟ್ರಪತಿ ಅನುಮೋದನೆಗಾಗಿ ರವಾನೆ

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

ಪಾಕ್ ಸೇನೆ ಇಸ್ರೇಲ್ ಗಿಂತಲೂ ಕೆಟ್ಟದು: ಮುನೀರ್ ಒಬ್ಬ 'Zalim'; ಕ್ಯಾಮರಾ ಮುಂದೆ ಒಂದೇ ಸಮನೆ ಕಣ್ಣೀರಿಟ್ಟ PoK ವ್ಯಕ್ತಿ! ಮನಕಲಕುವ Video