ಭಾರತ-ಪಾಕಿಸ್ತಾನ ಪಂದ್ಯ 
ಕ್ರಿಕೆಟ್

Women's T20 World Cup 2026: ಭಾರತದ ವಿರುದ್ಧ ಸೋತ ಪಾಕಿಸ್ತಾನಕ್ಕೆ ಬರೆ ಹಾಕಿದ ICC, ಭಾರಿ ದಂಡ!

ಭಾರತದ ವಿರುದ್ಧ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಗ್ರೂಪ್ ‘ಎ’ ಪಂದ್ಯದಲ್ಲಿ ಸ್ಲೋ ಓವರ್‌ರೇಟ್ (ನಿಧಾನಗತಿ ಬೌಲಿಂಗ್) ಕಾಯ್ದುಕೊಂಡ ಕಾರಣಕ್ಕೆ ಪಾಕಿಸ್ತಾನ ತಂಡಕ್ಕೆ ಪಂದ್ಯ ಶುಲ್ಕದ ಐದು ಪ್ರತಿಶತ ದಂಡ ವಿಧಿಸಿದೆ.

ಬರ್ಮಿಂಗ್ ಹ್ಯಾಮ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತು ತೀವ್ರ ಮುಜುಗರಕ್ಕೀಡಾಗಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಕೂಡ ಬರೆ ಹಾಕಿದೆ.

ಹೌದು.. ಭಾರತದ ವಿರುದ್ಧ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಗ್ರೂಪ್ ‘ಎ’ ಪಂದ್ಯದಲ್ಲಿ ಸ್ಲೋ ಓವರ್‌ರೇಟ್ (ನಿಧಾನಗತಿ ಬೌಲಿಂಗ್) ಕಾಯ್ದುಕೊಂಡ ಕಾರಣಕ್ಕೆ ಪಾಕಿಸ್ತಾನ ತಂಡಕ್ಕೆ ಪಂದ್ಯ ಶುಲ್ಕದ ಐದು ಪ್ರತಿಶತ ದಂಡ ವಿಧಿಸಿದೆ.

ಭಾನುವಾರ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಸಮಯದ ವಿನಾಯಿತಿಗಳನ್ನು ಪರಿಗಣಿಸಿದ ಬಳಿಕ ಪಾಕಿಸ್ತಾನ ತಂಡ ನಿಗದಿತ ಓವರ್‌ರೇಟ್‌ಗಿಂತ ಒಂದು ಓವರ್ ಕಡಿಮೆ ಎಸೆದಿದೆ ಎಂದು ಐಸಿಸಿ ಅಧಿಕಾರಿಗಳ ತಂಡ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿ ರೆಫರಿ ಟ್ರೂಡಿ ಆ್ಯಂಡರ್ಸನ್ (Trudy Anderson) ದಂಡ ವಿಧಿಸಿದರು.

ಅಂದಿನ ಪಂದ್ಯದ ಫೀಲ್ಡ್ ಅಂಪೈರ್‌ಗಳಾದ ಕ್ಲೇರ್ ಪೊಲೊಸಾಕ್ (Claire Polosak) ಮತ್ತು ಜಾಕ್ವೆಲಿನ್ ವಿಲಿಯಮ್ಸ್ (Jacquline Williams) ಮೂರನೇ ಅಂಪೈರ್ ಎಲೋಯಿಸ್ ಶೆರಿಡನ್ (Eloise Sheridan) ಹಾಗೂ ನಾಲ್ಕನೇ ಅಂಪೈರ್ ಸ್ಯೂ ರೆಡ್‌ಫರ್ನ್ (Sue Redfern) ಈ ಆರೋಪವನ್ನು ದಾಖಲಿಸಿದ್ದರು. ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ (Fatima Sana) ತಪ್ಪೊಪ್ಪಿಕೊಂಡು ಪ್ರಸ್ತಾಪಿತ ದಂಡವನ್ನು ಸ್ವೀಕರಿಸಿದ್ದರಿಂದ, ಔಪಚಾರಿಕ ವಿಚಾರಣೆಯ ಅಗತ್ಯವೇ ಉಂಟಾಗಲಿಲ್ಲ.

ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗೆ ಸಂಬಂಧಿಸಿದ ಐಸಿಸಿ ನಡವಳಿಕೆ ಸಂಹಿತೆಯ (ICC Code of Conduct) ವಿಧಿ 2.22ರ ಪ್ರಕಾರ, ಕನಿಷ್ಠ ಓವರ್‌ರೇಟ್ ಉಲ್ಲಂಘನೆ ನಡೆದರೆ, ನಿಗದಿತ ಸಮಯದೊಳಗೆ ಎಸೆಯಲು ವಿಫಲವಾದ ಪ್ರತಿಯೊಂದು ಓವರ್‌ಗೆ ಆಟಗಾರರ ಪಂದ್ಯ ಶುಲ್ಕದ ಐದು ಪ್ರತಿಶತ ದಂಡ ವಿಧಿಸಲಾಗುತ್ತದೆ.

ಭಾರತಕ್ಕೆ ಭರ್ಜರಿ ಜಯ

ಇನ್ನು ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 170 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 106 ರನ್‌ಗಳಿಗೆ ಆಲೌಟ್ ಆಗಿ 64 ರನ್‌ಗಳ ಸೋಲು ಅನುಭವಿಸಿತು. ಅಂತೆಯೇ ಪಾಕಿಸ್ತಾನ ತಂಡದ ಮುಂದಿನ ಪಂದ್ಯ ಜೂನ್ 17ರಂದು ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುರಹಂಕಾರ ಬಿಟ್ಟು ಕಾನೂನು ಪಾಲಿಸಿ: ಇಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ಇನ್ನು ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಕೊಡಬಾರ್ದಾ?

ಅಯೋಧ್ಯೆಯ ಶ್ರೀರಾಮನಿಗೆ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಅರ್ಪಿಸಿದ ಭಕ್ತ; ಈ "ಸೂರ್ಯನ ಮೊಟ್ಟೆ" ಬೆಲೆ ಎಷ್ಟು ಗೊತ್ತಾ?

ಮಾವಿನ ಹಣ್ಣು ತಿಂದು ಸಹೋದರಿಯರ ಸಾವು ಕೇಸ್: ಕುಟುಂಬದ ಹೆಣ್ಣು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ ಪ್ರಭು ಚವ್ಹಾಣ್

Fact Check: ಮೋಹನ್ ಭಾಗವತ್ ವಿಡಿಯೋ ನನ್ನ ಪತ್ರಕ್ಕೆ ಉತ್ತರವಲ್ಲ; ಗೃಹ ಸಚಿವರಿಂದಲೇ ಫ್ಯಾಕ್ಟ್ ಚೆಕ್

ರಾಯಚೂರು: ಇಬ್ಬರು ಬಾಲಕಿಯರ ಮೇಲೆ 5 ದಿನ ಲೈಂಗಿಕ ದೌರ್ಜನ್ಯ: ವ್ಯಕ್ತಿ ಬಂಧನ

SCROLL FOR NEXT