ಕುಲದೀಪ್ ಯಾದವ್, ರಿಷಭ್ ಪಂತ್ 
ಕ್ರಿಕೆಟ್

IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ವಾಪಸ್; ಲಕ್ನೋ ತಂಡಕ್ಕೆ ಕುಲದೀಪ್ ಯಾದವ್ ಸೇರುವ ಸಾಧ್ಯತೆ!

ಹಾಗೆಯೇ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಕುಲದೀಪ್ ಯಾದವ್, ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನವದೆಹಲಿ: 2027ರ ಐಪಿಎಲ್ ಆವೃತ್ತಿಯ ಮೊದಲ ಹರಾಜಿನ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ತಂಡವನ್ನು ತೊರೆದು ತಮ್ಮ ಮಾತೃ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರುವ ಸಾಧ್ಯತೆಯಿದೆ.

ಹಾಗೆಯೇ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಕುಲದೀಪ್ ಯಾದವ್, ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

2025 ರ ಮೆಗಾ ಹರಾಜಿನಲ್ಲಿ 27 ಕೋಟಿ ರೂ. (US$ 3 ಮಿಲಿಯನ್ ಅಂದಾಜು) ಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ LSG ತಂಡ ಸೇರಿದ್ದ ಪಂತ್, 2027ರ ಆವೃತ್ತಿಯಲ್ಲಿ 15 ಕೋಟಿ ರೂ. (US$ 1.5 ಮಿಲಿಯನ್ ಅಂದಾಜು) ಗೆ ಡೆಲ್ಲಿಗೆ ಹೋಗುತ್ತಾರೆ ಎಂದು ESPNcricinfo ವರದಿ ಮಾಡಿದೆ.

ಎರಡೂ ಫ್ರಾಂಚೈಸಿಗಳು ಇನ್ನೂ ಈ ಒಪ್ಪಂದದ ಮಾತುಕತೆಗಳನ್ನು ಪೂರ್ಣಗೊಳಿಸುತ್ತಿವೆ. ತದನಂತರ ಅದನ್ನು ಬಿಸಿಸಿಐ ಅನುಮೋದಿಸುವವರೆಗೆ ಕಾಯಬೇಕಾಗುತ್ತದೆ.

ರವೀಂದ್ರ ಜಡೇಜಾ ನಂತರ ಪಂತ್ ವೇತನ ಕಡಿತಗೊಳಿಸಲಿರುವ ಎರಡನೇ ದೊಡ್ಡ ಆಟಗಾರನಾಗಲಿದ್ದಾರೆ. ಐಪಿಎಲ್ 2026 ಕ್ಕಿಂತ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಅವರು ಜಡೇಜಾ ಅವರನ್ನು ಬಿಟ್ಟು ಸಂಜು ಸ್ಯಾಮ್ಸನ್‌ ಖರೀದಿಸಿದಾಗ ರಾಜಸ್ಥಾನ ರಾಯಲ್ಸ್ 14 ಕೋಟಿ ರೂ. ಗೆ ರವೀಂದ್ರ ಜಡೇಜಾ ಅವರನ್ನು ಖರೀದಿಸಿತ್ತು.

2022 ರಲ್ಲಿ CSK ಜಡೇಜಾ ಅವರನ್ನು 18 ಕೋಟಿಗೆ ಉಳಿಸಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಎರಡು ತಂಡಗಳು ಪಂತ್ ಅವರನ್ನು ಸಂಪರ್ಕಿಸಿವೆ ಎಂದು ಮೂಲಗಳು ತಿಳಿಸಿವೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ಪರ ಆಡುವ ಕುಲ್‌ದೀಪ್, 2027ರ IPL ನಲ್ಲಿ ಲಕ್ನೋ ಪರ ಆಡಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; DMK ನಾಯಕ ಉದಯನಿಧಿ ಸ್ಟಾಲಿನ್ ಬಂಧನ, ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ..!

Crass, cheap and derogatory': ನಟಿ ತ್ರಿಶಾಗೆ ಅಸಭ್ಯ, ಕೀಳುಮಟ್ಟದಲ್ಲಿ ಅಪಮಾನ, ಉದಯನಿಧಿ ಸ್ಟಾಲಿನ್ ಕ್ಷಮೆಯಾಚನೆಗೆ ಖುಷ್ಬೂ ಸುಂದರ್ ಒತ್ತಾಯ!

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!

West Asia War: ಒಪ್ಪಂದಕ್ಕೆ ಬರ್ತೀರಾ? ಇತಿಹಾಸ ಸೇರ್ತೀರಾ?; ಇರಾನ್‌ಗೆ ಟ್ರಂಪ್ ಲಾಸ್ಟ್ ವಾರ್ನಿಂಗ್..!

"ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ" ಸಂಘಿ ಹೇಳಿಕೆ ಬೆನ್ನಲ್ಲೇ ಕಂಗನಾ ರಣಾವತ್ ಹಳೆಯ VIDEO ವೈರಲ್!