ವಿರಾಟ್ ಕೊಹ್ಲಿ ದಾಖಲೆ ಮುರಿದ ಸಂಜು ಸ್ಯಾಮ್ಸನ್ 
ಕ್ರಿಕೆಟ್

T20 ವಿಶ್ವಕಪ್ 2026: ಕೊನೆಗೂ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆ ಮುರಿದ Sanju Samson

ನಿನ್ನೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ವರ್ಚುವಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 5 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಸೆಮೀಸ್ ಗೆ ದಾಪುಗಾಲಿರಿಸಿದೆ.

ಕೋಲ್ಕತಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತಕ್ಕೆ ಅಮೋಘ ಜಯ ತಂದುಕೊಟ್ಟ ಸಂಜು ಸ್ಯಾಮ್ಸನ್ ಕೊನೆಗೂ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದಾರೆ.

ಹೌದು.. ನಿನ್ನೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ವರ್ಚುವಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 5 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಸೆಮೀಸ್ ಗೆ ದಾಪುಗಾಲಿರಿಸಿದೆ.

ಭಾರತದ ಈ ಗೆಲುವಿನಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ನಿರ್ಣಾಯಕ ಪಾತ್ರವಹಿಸಿದ್ದರು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಪಂದ್ಯದ ಕೊನೆಯ ಹಂತದವರೆಗೂ ಕ್ರೀಸ್ ನಲ್ಲಿದ್ದು ಭಾರತವನ್ನು ಗೆಲುವಿನ ದಡ ಸೇರಿಸಿದರು.

ಕೇವಲ 50 ಎಸೆತಗಳನ್ನು ಎದುರಿಸಿದ ಸಂಜು ಸಾಮ್ಸನ್ 4 ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ ಅಜೇಯ 97 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ವಿರಾಟ್ ಕೊಹ್ಲಿ ದಾಖಲೆ ಪತನ

ಸಂಜು ತಮ್ಮ ಈ ಅಮೋಘ ಬ್ಯಾಟಿಂಗ್ ಮೂಲಕ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದಾರೆ. ವಿಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್‌ನಲ್ಲಿ ಚೇಸಿಂಗ್ ವೇಳೆ ಭಾರತ ಪರ ಒಂದೇ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿತ್ತು. ಕೊಹ್ಲಿ 2016ರ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮತ್ತು 2022ರ ಆವೃತ್ತಿಯಲ್ಲಿ ಮೆಲ್ಬರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 82 ರನ್‌ಗಳಿಸಿದ್ದರು. ಇದು ಒಂದೇ ಪಂದ್ಯದಲ್ಲಿ ಚೇಸಿಂಗ್ ವೇಳೆ ಭಾರತದ ಬ್ಯಾಟರ್ ಗಳಿಸಿದ್ದ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿತ್ತು. ಆದರೆ ಸಂಜು ವಿಂಡೀಸ್ ವಿರುದ್ಧ 97 ರನ್ ಪೇರಿಸಿ ಈ ದಾಖಲೆಯನ್ನು ಮುರಿದಿದ್ದಾರೆ.

ಮತ್ತೊಂದು ದಾಖಲೆ

ಭಾರತ ತಂಡದ ಪರ ಅತ್ಯಧಿಕ 6ನೇ ಅರ್ಧಶತಕ ಸಿಡಿಸುವ ಮೂಲಕ, ಭಾರತದ ಪರ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ವಿಕೆಟ್ ಕೀಪರ್-ಬ್ಯಾಟರ್ ಎಂಬ ದಾಖಲೆಯನ್ನು ಸಂಜು ಸ್ಯಾಮ್ಸನ್ ತಮ್ಮದಾಗಿಸಿಕೊಂಡರು. 5 ಅರ್ಧಶತಕ ಸಿಡಿಸಿರುವ ಇಶಾನ್ ಕಿಶನ್ ನಂತರದ ಸ್ಥಾನದಲ್ಲಿದ್ದಾರೆ. ಕೆ.ಎಲ್. ರಾಹುಲ್ ಅವರು ಟಿ20ಯಲ್ಲಿ ಒಟ್ಟಾರೆ 22 ಅರ್ಧಶತಕ ದಾಖಲಿಸಿದ್ದರೂ, ವಿಕೆಟ್ ಕೀಪರ್ ಆಗಿ ಅವರು 3 ಅರ್ಧಶತಕ ಬಾರಿಸಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ 2ನೇ ಗರಿಷ್ಠ ವೈಯುಕ್ತಿಕ ಸ್ಕೋರ್

ಅಂತೆಯೇ ಸಂಜು ಸ್ಯಾಮ್ಸನ್ ತಮ್ಮ ಈ ಅಮೋಘ ಇನ್ನಿಂಗ್ಸ್ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ 2ನೇ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮೊದಲು 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸುರೇಶ್ ರೈನಾ 101ರನ್ ಕಲೆಹಾಕಿದ್ದರು. ಇದು ಟಿ20 ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಭಾರತದ ಪರ ದಾಖಲಾಗಿರುವ ಆಟಗಾರನೊಬ್ಬನ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿದೆ. ಉಳಿದಂತೆ 2024ರಲ್ಲಿ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 92 ಮತ್ತು 2016ರಲ್ಲಿ ವಿಂಡೀಸ್ ವಿರುದ್ಧ ಕೊಹ್ಲಿ ಅಜೇಯ 89 ರನ್ ಕಲೆಹಾಕಿದ್ದರು.

Highest individual scores for India in T20 World Cups

  • 101 Suresh Raina vs SA Gros Islet 2010

  • 97*Sanju Samson vs WI Eden Gardens 2026

  • 92 Rohit Sharma vs Aus Gros Islet 2024

  • 89*Virat Kohli vs WI Wankhede 2016

  • 84*Suryakumar Yadav vs USA Wankhede 2026

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕುವೈತ್‌ನಲ್ಲಿ ಅಮೆರಿಕದ ಹಲವು ಯುದ್ಧ ವಿಮಾನಗಳು ಪತನ; ರಾಯಭಾರ ಕಚೇರಿ ಆವರಣದಲ್ಲಿ ಬೆಂಕಿ: ಕುವೈತ್‌

ಮಧ್ಯಪ್ರಾಚ್ಯ ಉದ್ವಿಗ್ನ: ಗಗನಕ್ಕೇರಿದ ಕಚ್ಚಾ ತೈಲ ಬೆಲೆ; ಪ್ರತಿ ಬ್ಯಾರೆಲ್‌ಗೆ ದಾಖಲೆಯ 6,596 ರೂ.ಗೆ ಹೆಚ್ಚಳ!

US-Iran war: 4 ಬಾರಿ ಆಂತರಿಕ ವ್ಯವಹಾರದಲ್ಲಿ khameni ಹಸ್ತಕ್ಷೇಪ!; "ಮೌನವಾಗಿರಬೇಡಿ" ಎಂದಿದ್ದ ಇರಾನ್ ಆಗ್ರಹಕ್ಕೆ ಮೌನ ಮುರಿದ PM ಮೋದಿ ಹೇಳಿದ್ದಿಷ್ಟು...

'10 ವರ್ಷಗಳಿಂದ ಆಡುತ್ತಿದ್ದೇನೆ.. ಡಗೌಟ್ ನಲ್ಲಿ ಕುಳಿತೇ ಕೊಹ್ಲಿ-ರೋಹಿತ್ ಶರ್ಮಾ ನೋಡಿ ಕಲಿತಿದ್ದೇನೆ': Sanju samson ಭಾವುಕ

ಭಾರತದಲ್ಲಿ ಹಿಂಸಾಚಾರ ಸಾಧ್ಯತೆ: ದ್ವೇಷಕಾರಿ ಧರ್ಮೋಪದೇಶ ನೀಡುವವರ ಮೇಲೆ ನಿಗಾ ಇರಿಸಿ; ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

SCROLL FOR NEXT