ರವಿಶಾಸ್ತ್ರಿ  
ಕ್ರಿಕೆಟ್

T20 World Cup 2026: ಈ 'ಎಂಟರ್ ಟೈನ್ ಮೆಂಟ್' ಬೇಕಾ? ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ತೀವ್ರ ಕಿಡಿ!

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದ ಡ್ರಿಂಕ್ಸ್ ಬ್ರೇಕ್‌ ವೇಳೆ ಲೇಸರ್ ಶೋನ ಅಗತ್ಯವನ್ನು ಪ್ರಶ್ನಿಸಿದ್ದಾರೆ.

ಕೋಲ್ಕತ್ತಾ: ಟಿ-20 ವಿಶ್ವಕಪ್ ವ್ಯವಸ್ಥೆ ಬಗ್ಗೆ ಭಾರತದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಕಿಡಿಕಾರಿದ್ದಾರೆ.

ಹೌದು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದ ಡ್ರಿಂಕ್ಸ್ ಬ್ರೇಕ್‌ ವೇಳೆ ಲೇಸರ್ ಶೋನ ಅಗತ್ಯವನ್ನು ಪ್ರಶ್ನಿಸಿದ್ದಾರೆ.

ವೆಸ್ಟ್ ಇಂಡೀಸ್ ನೀಡಿದ 196 ರನ್ ಗಳ ಟಾರ್ಗೆಟ್ ನೀಡಿದ ಭಾರತ ಪವರ್‌ಪ್ಲೇ ಮುಗಿದು ನಿಗದಿತ ವಿರಾಮ ತೆಗೆದುಕೊಂಡಾಗ ಎರಡು ವಿಕೆಟ್‌ಗಳಿಗೆ 53 ರನ್ ಗಳಿಸಿತ್ತು. ಆ ಮೂರು ನಿಮಿಷಗಳ ಮಧ್ಯಂತರದಲ್ಲಿ ಕ್ರೀಡಾಂಗಣದ ದೀಪಗಳನ್ನು ಮಂದಗೊಳಿಸಲಾಯಿತು ಮತ್ತು ಲೇಸರ್ ಶೋ ನಡೆಸಲಾಯಿತು.

ಸ್ವಲ್ಪ ಸಮಯದವರೆಗೆ ಕ್ರೀಡಾಂಗಣದಲ್ಲಿ ಕತ್ತಲು ಆವರಿಸಿದಂತೆ ಭಾಸವಾಯಿತು. ಲೈಟಿಂಗ್ ಪರಿಸ್ಥಿತಿಯ ಹಠಾತ್ ಬದಲಾವಣೆಯು ಬ್ಯಾಟರ್‌ಗಳ ಗಮನ ಮತ್ತು ದೃಷ್ಟಿಗೆ ಅಡ್ಡಿಪಡಿಸಬಹುದು ಎಂದು ಗವಾಸ್ಕರ್ ಮತ್ತು ಶಾಸ್ತ್ರಿ ಇಬ್ಬರೂ ಕಳವಳ ವ್ಯಕ್ತಪಡಿಸಿದರು.

ಪಾನೀಯ ವಿರಾಮದ ಎರಡೂವರೆ ಅಥವಾ ಮೂರು ನಿಮಿಷಗಳ ಸಮಯದಲ್ಲಿ ಲೇಸರ್ ಶೋ ನಡೆಸುವುದು ಬ್ಯಾಟರ್‌ಗಳು ಅಥವಾ ಬೇರೆ ಆಟಗಾರರಿಗೂ ಅಡ್ಡಿಯಾಗಬಹುದು ಎಂದು ಗವಾಸ್ಕರ್ ತಮ್ಮ ಕಾಮೆಂಟರಿಯಲ್ಲಿ ಹೇಳಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂತಹ ಚಮತ್ಕಾರಗಳು ಅನಗತ್ಯ ಎಂದು ಗವಾಸ್ಕರ್ ಹೇಳಿದ್ದಾರೆ.

" ಲೇಸರ್ ಪ್ರದರ್ಶನ ನಡೆಯುತ್ತಿದೆ. ಇದು ವಿಶ್ವಕಪ್. ಎರಡೂವರೆ ನಿಮಿಷಗಳ ಕಾಲ, ನಿಮಗೆ ಈ ರೀತಿಯ ಮನರಂಜನೆ ಬೇಕೇ? ಐಪಿಎಲ್ ಮಧ್ಯದಲ್ಲಿ ಇದು ಉತ್ತಮವಾಗಿದೆ. ಆದರೆ ನೌಕೌಟ್ ನಲ್ಲಿ ಅಲ್ಲ. ಆದರೆ ಇಲ್ಲಿ ವಿಶ್ವಕಪ್‌ನಲ್ಲಿ ಪಾನೀಯ ವಿರಾಮದ ಸಂದರ್ಭದಲ್ಲಿ ನಮಗೆ ಈ ಲೇಸರ್ ಶೋಗಳು ಬೇಕೇ? ಆಟಗಾರರ ಏಕಾಗ್ರತೆಯ ಮೇಲೆ ಇದು ಪ್ರಭಾವ ಬೀರುವುದಿಲ್ಲವೇ ಎಂದು ಗವಾಸ್ಕರ್ ಕಿಡಿಕಾರಿದರು.

ಇನ್ನೂ ವೆಸ್ಟ್ ಇಂಡೀಸ್ ಮಣಿಸಿಕ ಭಾರತ, ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲೆ ದಾಳಿ: ಹಿಜ್ಬುಲ್ಲಾ ರಾಕೆಟ್ ದಾಳಿ ಬಳಿಕ ಬೈರುತ್ ಮೇಲೆ ಬಾಂಬ್ ಹಾಕಿದ ಇಸ್ರೇಲ್!

IRGC ಪ್ರಧಾನ ಕಚೇರಿ ಧ್ವಂಸ! ಹಾವಿನ ತಲೆಯನ್ನು ಕತ್ತರಿಸಿದ್ದೇವೆ: ಅಮೆರಿಕ

ThinkEdu 2026: ಚೆನ್ನೈನಲ್ಲಿಂದು ಸಮಾವೇಶ ಆರಂಭ, 'ಆತ್ಮನಿರ್ಭರ ಭಾರತದ ಕನಸಿಗೆ ಶಿಕ್ಷಣವೇ ದಿಕ್ಕು' ಕುರಿತು ಗಂಭೀರ ಚರ್ಚೆ

ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; 2 ಲಕ್ಷ ರೂ. ಆಗುತ್ತಾ 10 ಗ್ರಾಂ ಚಿನ್ನದ ರೇಟ್?

Iran-Israel war: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ, ಭದ್ರತೆ-ವಿದೇಶದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕುರಿತು ಚರ್ಚೆ

SCROLL FOR NEXT