ವೈಶಾಕ್ ವಿಜಯ್ ಮದುವೆ ಕಾರ್ಯಕ್ರಮ 
ಕ್ರಿಕೆಟ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ, ಕನ್ನಡಿಗ Vaishak Vijayakumar; ಹುಡುಗಿ ಯಾರು ಗೊತ್ತಾ? Video

ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈಶಾಕ್ ತಮ್ಮ ಬಹುಕಾಲದ ಗೆಳತಿ ಸಾಗರಿಕ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಬೆಂಗಳೂರು: ಟೀಮ್ ಇಂಡಿಯಾ ಹಾಗೂ ಕರ್ನಾಟಕ ತಂಡದ ಪ್ರತಿಭಾನ್ವಿತ ವೇಗದ ಬೌಲರ್ ವೈಶಾಕ್ ವಿಜಯ್‌ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಟ ಕಿಚ್ಚಾ ಸುದೀಪ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

ಹೌದು.. ಖ್ಯಾತ ಕ್ರಿಕೆಟಿಗ ವೈಶಾಕ್ ವಿಜಯ್ ಕುಮಾರ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಅಂದರೆ ಮಾರ್ಚ್ 5 ಗುರುವಾರದಂದು ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈಶಾಕ್ ತಮ್ಮ ಬಹುಕಾಲದ ಗೆಳತಿ ಸಾಗರಿಕ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಬೆಂಗಳೂರಿನ 'ಮೈನ್ ಪ್ಯಾಲೇಸ್​'ನಲ್ಲಿ ನಡೆದ ಈ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಕ್ರಿಕೆಟ್ ಲೋಕದ ಗಣ್ಯರು ಸಾಕ್ಷಿಯಾಗಿದ್ದರು. ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

ಅಂದಹಾಗೆ ಜನವರಿ 31, 1997 ರಂದು ಬೆಂಗಳೂರಿನಲ್ಲಿ ಜನಿಸಿದ ವೈಶಾಕ್ ಅವರ ಕ್ರಿಕೆಟ್ ಜೀವನ ಸ್ಫೂರ್ತಿದಾಯಕವಾಗಿದೆ. ಆರಂಭದಲ್ಲಿ ಬ್ಯಾಟರ್ ಆಗಿ ಕರ್ನಾಟಕದ ಅಂಡರ್-16 ತಂಡವನ್ನು ಮುನ್ನಡೆಸಿದ್ದ ಇವರು, ನಂತರ ವೇಗದ ಬೌಲರ್ ಆಗಿ ರೂಪಾಂತರಗೊಂಡರು.

ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಅವರ ತಂದೆ ತಮ್ಮ ಕೆಲಸವನ್ನೇ ತ್ಯಾಗ ಮಾಡಿದ್ದರು. ತಂದೆಯ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ ವೈಶಾಕ್, ಇಂದು ದೇಶದ ಪ್ರಮುಖ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್ ನಲ್ಲಿ ವೈಶಾಕ್

2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ ವೈಶಾಕ್, ತಮ್ಮ ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದರು. ಆರ್​ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿ ಆರಂಭಿಸಿ, ನಂತರ ಮುಖ್ಯ ತಂಡದಲ್ಲಿ ಸ್ಥಾನ ಪಡೆದ ಇವರ ಶ್ರಮಕ್ಕೆ ದೊಡ್ಡ ಗೌರವ ಸಿಕ್ಕಿದೆ. ಇತ್ತೀಚೆಗೆ ನಡೆದ 2025ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ವೈಶಾಕ್ ಅವರನ್ನು 1.80 ಕೋಟಿ ರೂ. ನೀಡಿ ಖರೀದಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Exit polls: ಪಂಚ ರಾಜ್ಯಗಳ ಚುನಾವಣೆ, ದೀದಿಗೆ ಶಾಕ್: BJP ತೆಕ್ಕೆಗೆ ಬಂಗಾಳ, ಅಸ್ಸಾಂನಲ್ಲೂ ಕಮಲ ಮ್ಯಾಜಿಕ್!

ಬೆಂಗಳೂರಿನಲ್ಲಿ ಘೋರ ದುರಂತ: ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 3 ಮಕ್ಕಳು ಸೇರಿ 8 ಮಂದಿ ಸಾವು!

West Bengal Assembly polls: ದಾಖಲೆ ಬರೆದ ಬಂಗಾಳ, 5 ಗಂಟೆ ವರೆಗೂ ಶೇ.89.99 ರಷ್ಟು ಮತದಾನ

ನಿನ್ನೆ ಟ್ರೈಲರ್, ಇಂದು ಪಿಕ್ಚರ್..: ನಗರಾದ್ಯಂತ ಧಾರಾಕಾರ ಮಳೆ, ತಾಪಮಾನ ಗಣನೀಯ ಇಳಿಕೆ, ವಿಧಾನಸೌಧಕ್ಕೂ ನುಗ್ಗಿದ ನೀರು

ಇರಾನ್ 'ಬೇಗ ಬುದ್ಧಿ ಕಲಿಯಲಿ', ಇಲ್ಲಾಂದ್ರೆ ವಿನಾಶ: ಕೈಯಲ್ಲಿ ಅಸಾಲ್ಟ್ ರೈಫಲ್ ಹಿಡಿದು ಬೆದರಿಕೆ ಹಾಕಿದ ಟ್ರಂಪ್

SCROLL FOR NEXT