ಕ್ರಿಕೆಟ್

T20 ವಿಶ್ವಕಪ್ 2026: 'ನನಗಲ್ಲ.. Player of generation'ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಲ್ಲಬೇಕು; ಸ್ಟಾರ್ ಆಟಗಾರನ ಶ್ಲಾಘಿಸಿದ Sanju Samson!

ಭಾರತದ ಅನುಭವಿ ಬೌಲರ್ ಗಳ ಕರಾರುವಕ್ಕಾದ ಬೌಲಿಂಗ್ ದಾಳಿ ನೆರವಿನಿಂದ ಭಾರತ ಸೋಲಿನಿಂದ ಪಾರಾಯಿತು.

ಮುಂಬೈ: ಇಂಗ್ಲೆಂಡ್ ವಿರುದ್ಧದ 2ನೇ ಸೆಮಿಫೈನಲ್ ನಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮಗಲ್ಲ.. 'player of generation'ಗೆ ಸಲ್ಲಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದರು.

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.

ಭಾರತ ನೀಡಿದ್ದ 254 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ್ದ ಇಂಗ್ಲೆಂಡ್ ತಂಡ ಜೇಕಬ್ ಬೆಥಲ್ ಅವರ ಅಮೋಘ ಶತಕದ ನೆರವಿನಿಂದ ಗೆಲುನಂಚಿಗೆ ಬಂದು ತಲುಪಿತ್ತು. ಆದರೆ ಭಾರತದ ಅನುಭವಿ ಬೌಲರ್ ಗಳ ಕರಾರುವಕ್ಕಾದ ಬೌಲಿಂಗ್ ದಾಳಿ ನೆರವಿನಿಂದ ಭಾರತ ಸೋಲಿನಿಂದ ಪಾರಾಯಿತು.

ಇದೇ ವಿಚಾರವನ್ನು ಪಂದ್ಯ ಮುಕ್ತಾಯಬಳಿಕ ಪ್ರಶಸ್ತಿ ಪ್ರದಾನ ವೇಳೆ ಸಂಜು ಸ್ಯಾಮ್ಸನ್ ಮಾತನಾಡಿದರು. ಪಂದ್ಯಶ್ರೇಷ್ಠ ಪ್ರಶಸ್ತಿಯ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಈ ಪ್ರಶಸ್ತಿ ಬುಮ್ರಾ ಅವರಿಗೆ ಸಲ್ಲಬೇಕಿತ್ತು ಎಂದು ಹೇಳಿದರು.

'ಜಸ್ ಪ್ರೀತ್ ಬುಮ್ರಾ ಅವರು ಕೊನೆ ಓವರ್‌ಗಳಲ್ಲಿ ಅಷ್ಟೊಂದು ಅದ್ಭುತವಾಗಿ ಬೌಲಿಂಗ್ ಮಾಡದಿದ್ದರೆ, ನಾನು ಇಲ್ಲಿ ನಿಲ್ಲುತ್ತಿರಲಿಲ್ಲ. ಈ ಎಲ್ಲಾ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಅವರು ವಿಶ್ವದರ್ಜೆಯ ಬೌಲರ್, ಈ ಪೀಳಿಗೆಯ ಅತ್ಯುತ್ತಮ ಬೌಲರ್... ಇಂದು ಕೂಡ ಅವರು ತಮ್ಮ ಅಮೋಘ ದಾಳಿಯ ಮೂಲಕ ತಂಡಕ್ಕೆ ನರೆವಾದರು. ವಾಸ್ತವವಾಗಿ ಈ ಪ್ರಶಸ್ತಿ ಅವರಿಗೇ ಸಲ್ಲಬೇಕು' ಎಂದು ಸಂಜು ಸ್ಯಾಮ್ಸನ್ ಹೇಳಿದರು.

ಅಂದಹಾಗೆ ಸೂಪರ್–8ರ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಂಜು ಅವರು, ನಿನ್ನೆ (ಗುರುವಾರ) ನಡೆದ ಪಂದ್ಯದಲ್ಲೂ ಸ್ಫೋಟಕ 89 ರನ್ ಗಳಿಸಿ ಸತತ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಗ್ಗಂಟಿಗೆ ಸರ್ವಪಕ್ಷ ಒಗ್ಗಟ್ಟು: 'ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ' ಎಂದ CM ಡಿ.ಕೆ. ಶಿವಕುಮಾರ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!

ಸಕಲೇಶಪುರ: ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ರೈಲು ಸಂಚಾರ ಸಂಪೂರ್ಣ ಸ್ಥಗಿತ; ಕಾನ್ಸ್ಟೇಬಲ್ ಪರೀಕ್ಷಾರ್ಥಿಗಳ ಪರದಾಟ