ಸಂಜು ಸ್ಯಾಮ್ಸನ್- ಅಭಿಷೇಕ್ ಶರ್ಮಾ ಬ್ಯಾಟಿಂಗ್ 
ಕ್ರಿಕೆಟ್

T20 ವಿಶ್ವಕಪ್ 2026: 2 ಓವರ್ 12 ರನ್, ಬಳಿಕ 4 ಓವರ್ ನಲ್ಲಿ 80 ರನ್; ಪವರ್ ಪ್ಲೇನಲ್ಲಿ ಭಾರತ ವಿಶ್ವ ದಾಖಲೆ!

ಭಾರತ ಬ್ಯಾಟಿಂಗ್ ಆರಂಭಿಸಿದ್ದು, ಭಾರತದ ಪರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್​ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ನ್ಯೂಜಿಲೆಂಡ್ ಬೌಲರ್ ಗಳನ್ನು ಅಟ್ಟಾಡಿಸುತ್ತಿದ್ದು, ವಿಶ್ವದಾಖಲೆ ನಿರ್ಮಿಸಿದೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್-ಭಾರತ ನಡುವಿನ ಟಿ20 ವಿಶ್ವಕಪ್ 2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಅದರಂತೆ ಭಾರತ ಬ್ಯಾಟಿಂಗ್ ಆರಂಭಿಸಿದ್ದು, ಭಾರತದ ಪರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಅಭಿಷೇಕ್ ಶರ್ಮಾ ಅರ್ಧಶತಕ

ಭಾರತದ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಆರಂಭದಿಂದಲೇ ನ್ಯೂಜಿಲೆಂಡ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೇವಲ 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 52 ರನ್ ಪೇರಿಸಿದರು. ಆ ಮೂಲಕ ಫೈನಲ್ ನಲ್ಲಿ ಅಭಿಷೇಕ್ ಶರ್ಮಾರನ್ನು ಆಡಿಸಬಾರದು ಎಂಬ ಟೀಕಾಕಾರರಿಗೆ ತಮ್ಮ ಬ್ಯಾಟ್ ನಿಂದಲೇ ತಿರುಗೇಟು ನೀಡಿದರು.

2 ಓವರ್ ಗೆ 12 ರನ್, ಬಳಿಕ 4 ಓವರ್ ನಲ್ಲಿ 80 ರನ್

ಒಂದೆಡೆ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದರೆ ಮತ್ತೊಂದೆಡೆ ಸಂಜು ಸ್ಯಾಮ್ಸನ್ ಕೂಡ ತಮ್ಮ ಎಂದಿನ ಕರಾರುವಕ್ಕಾದ ಬ್ಯಾಟಿಂಗ್ ನಡೆಸಿ ಸಂಜೂ ಕೂಡ ಅಪಾಯಕಾರಿಯಾದರು. ಈ ಜೋಡಿ ಮೊದಲ ವಿಕೆಟ್ ಗೆ 43 ಎಸೆತಗಳಲ್ಲಿ 98 ರನ್ ಪೇರಿಸಿತು.

ನಿಧಾನವಾಗಿಯೇ ಇನ್ನಿಂಗ್ಸ್ ಭಾರತ ತನ್ನ ಇನ್ನಿಂಗ್ಸ್ ನ ಮೊದಲ 2 ಓವರ್ ನಲ್ಲಿ ಕೇವಲ 12ರನ್ ಮಾತ್ರ ಕಲೆಹಾಕಿತ್ತು. ಆದರೆ ಬಳಿಕ 4 ಓವರ್ ನಲ್ಲಿ ಬರೊಬ್ಬರಿ 80 ರನ್ ಪೇರಿಸಿತು. ಈ ಜೊತೆಯಾಟದಲ್ಲಿ ಅಭಿಷೇಕ್ ಶರ್ಮಾರದ್ದೇ ಸಿಂಹಪಾಲು, ಈ ಜೊತೆಯಾಟದಲ್ಲಿ ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 52 ರನ್ ಚಚ್ಚಿದರು.

ಪವರ್ ಪ್ಲೇ ವಿಶ್ವದಾಖಲೆ

ಈ ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ಟಿ20 ವಿಶ್ವಕಪ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಇಂದಿನ ಪಂದ್ಯದಲ್ಲಿ ಭಾರತ ಪವರ್ ಪ್ಲೇ ನಲ್ಲಿ ಜಂಟಿ ಗರಿಷ್ಠ ಸ್ಕೋರ್ ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದೆ. ಭಾರತ ಇಂದು ಪವರ್ ಪ್ಲೇನಲ್ಲಿ ಅಂದರೆ ತನ್ನ ಮೊದಲ 6 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 92 ರನ್ ಕಲೆಹಾಕಿದೆ. ಈ ಮೂಲಕ ಟಿ20 ವಿಶ್ವಕಪ್ ನಲ್ಲಿ ಪವರ್ ಪ್ಲೇನಲ್ಲಿ ಜಂಟಿ ಗರಿಷ್ಟ ಸ್ಕೋರ್ ಆಗಿದೆ.

ಇದಕ್ಕೂ ಮೊದಲು 2024ರಲ್ಲಿ ಎಡ್ಜ್ ಬ್ಯಾಸ್ಟನ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ 1 ವಿಕೆಟ್ ನಷ್ಟಕ್ಕೆ 92 ರನ್ ಕಲೆಹಾಕಿತ್ತು. ಇದು ಟಿ20 ವಿಶ್ವಕಪ್ ನಲ್ಲಿ ಪವರ್ ಪ್ಲೇ ನಲ್ಲಿ ಹರಿದು ಬಂದ ಗರಿಷ್ಟ ಸ್ಕೋರ್ ಆಗಿತ್ತು. ಇದೀಗ ದಾಖಲೆಯನ್ನು ಭಾರತ ಸರಿಗಟ್ಟಿದೆ.

Highest PP scores in T20 WCs

  • 92/0 - IND vs NZ, Ahmedabad, 2026 Final

  • 92/1 - WI vs AFG, Bridgetown, 2024

  • 91/1 - NED vs IRE, Sylhet, 2014

  • 89/3 - ENG vs SA, Mumbai WS, 2016

  • 86/1 - IND vs NAM, Delhi, 2026

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

Commonwealth Games 2026: ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸಾಕ್ಷಿ, ಪ್ರಿಯಾ

ಪ್ರಧಾನಿ ಮೋದಿಯನ್ನು ನಿಂದಿಸಿದ 15 ವರ್ಷದ ಹುಡುಗಿ ಹಿಂದೆ 'ಆ ಎರಡು ಗುಂಪುಗಳಿವೆ': ಕಂಗನಾ ಹೊಸ ಬಾಂಬ್!