ಕ್ರೀಡಾಂಗಣದಲ್ಲಿ ವಾಗ್ವಾದ  online desk
ಕ್ರಿಕೆಟ್

T20 world cup 2026: ಅರ್ಶ್‌ದೀಪ್ ಸಿಂಗ್ ಕಡೆಗೆ ಡ್ಯಾರಿಲ್ ಮಿಚೆಲ್ ಆಕ್ರಮಣಕಾರಿ ವರ್ತನೆ; ವಾಗ್ವಾದ! ವಿಡಿಯೋ ವೈರಲ್

ಸಿಂಗ್ ಕ್ರೀಸ್ ನಿಂದ ಹೊರಗೆ ಬರಲು ಯತ್ನಿಸಿದ್ದ ಮಿಚೆಲ್ ಕಡೆಗೆ ಚೆಂಡನ್ನು ಎಸೆದರು, ಇದು ಕಿವೀಸ್ ಬ್ಯಾಟ್ಸ್‌ಮನ್‌ಗೆ ಕೋಪ ತಂದಿತು. ಆಕ್ರೋಶಗೊಂಡ ಮಿಚೆಲ್ ಆರ್ಶ್ ದೀಪ್ ಅವರೆಡೆಗೆ ಕೋಪದಿಂದ ಧ್ವನಿ ಏರಿಸಿದರು.

ಭಾನುವಾರ ಅಹಮದಾಬಾದ್‌ನಲ್ಲಿ ನಡೆದ IND Vs NZ T20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಭಾರತದ ವೇಗಿ ಅರ್ಶ್‌ದೀಪ್ ಸಿಂಗ್ ಮತ್ತು ಡ್ಯಾರಿಲ್ ಮಿಚೆಲ್ ನಡುವೆ ತೀವ್ರ ವಾಗ್ವಾದಕ್ಕೆ ಕ್ರೀಡಾಂಗಣ ಸಾಕ್ಷಿಯಾಯಿತು.

ಸಿಂಗ್ ಕ್ರೀಸ್ ನಿಂದ ಹೊರಗೆ ಬರಲು ಯತ್ನಿಸಿದ್ದ ಮಿಚೆಲ್ ಕಡೆಗೆ ಚೆಂಡನ್ನು ಎಸೆದರು, ಇದು ಕಿವೀಸ್ ಬ್ಯಾಟ್ಸ್‌ಮನ್‌ಗೆ ಕೋಪ ತಂದಿತು. ಆಕ್ರೋಶಗೊಂಡ ಮಿಚೆಲ್ ಆರ್ಶ್ ದೀಪ್ ಅವರೆಡೆಗೆ ಕೋಪದಿಂದ ಧ್ವನಿ ಏರಿಸಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಸೂರ್ಯಕುಮಾರ್ ಯಾದವ್ ವಾಗ್ವಾದವನ್ನು ಶಾಂತಗೊಳಿಸಿದರು, ನಂತರ ಅರ್ಶ್‌ದೀಪ್ ಸಿಂಗ್ ಓವರ್ ನಂತರ ಕ್ಷಮೆಯಾಚಿಸಿದರು ಮತ್ತು ತಮ್ಮ ಎದುರಾಳಿಗಳೊಂದಿಗೆ ಕೈಕುಲುಕಿದರು.

ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ಅರ್ಶ್‌ದೀಪ್ ಬೌಲಿಂಗ್ ಮಾಡಿದ ಪೂರ್ಣ ಎಸೆತವನ್ನು ಕಿವೀಸ್ ಬ್ಯಾಟ್ಸ್‌ಮನ್ ನೇರವಾಗಿ ಬೌಲರ್ ಕಡೆಗೆ ಹೊಡೆದರು. ಮಿಚೆಲ್ ತನ್ನ ಕ್ರೀಸ್‌ನಿಂದ ಹೊರಬರುವ ಸಾಧ್ಯತೆ ಇದೆ ಎಂದು ಗುರುತಿಸಿದ ಸಿಂಗ್ ಅದನ್ನು ವಿಕೆಟ್ ನತ್ತ ಎಸೆದರು. ಆದರೆ ಚೆಂಡು ಮಿಚೆಲ್ ಗೆ ತುಂಬಾ ಹತ್ತಿರದಲ್ಲಿ ಹಾದುಹೋಯಿತು ಮತ್ತು ಇದರಿಂದಾಗಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಕೋಪಗೊಂಡಿದ್ದರು. ಅವರು ಅರ್ಷ್‌ದೀಪ್ ಕಡೆಗೆ ಆಕ್ರಮಣಕಾರಿಯಾಗಿ ನಡೆಯುತ್ತಾ ತಮ್ಮ ಕೈಗಳಿಂದ ಸನ್ನೆಗಳನ್ನು ಮಾಡಿದರು. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪರಿಸ್ಥಿತಿಯನ್ನು ನಿಯಂತ್ರಿಸಲು ಬೇಗನೆ ಮಧ್ಯಪ್ರವೇಶಿಸಿ ನ್ಯೂಜಿಲೆಂಡ್‌ನ ಬ್ಯಾಟ್ಸ್ ಮನ್ ನ್ನು ಶಾಂತಗೊಳಿಸಿದರು.

ಅಂಪೈರ್‌ಗಳು ಅರ್ಷ್‌ದೀಪ್ ಅವರೊಂದಿಗೆ ಮಾತುಕತೆ ನಡೆಸಿದರು. ಓವರ್ ಮುಗಿದ ನಂತರ, ಎಡಗೈ ವೇಗಿ ಮಿಚೆಲ್ ಕಡೆಗೆ ನಡೆದು ತನ್ನ ಅನಗತ್ಯ ಎಸೆತಕ್ಕೆ ಕ್ಷಮೆಯಾಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

Commonwealth Games 2026: ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸಾಕ್ಷಿ, ಪ್ರಿಯಾ

ಪ್ರಧಾನಿ ಮೋದಿಯನ್ನು ನಿಂದಿಸಿದ 15 ವರ್ಷದ ಹುಡುಗಿ ಹಿಂದೆ 'ಆ ಎರಡು ಗುಂಪುಗಳಿವೆ': ಕಂಗನಾ ಹೊಸ ಬಾಂಬ್!