ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತ ಮತ್ತೆ 250+ ಸ್ಕೋರ್ ಮಾಡಿ ಹಲವು ದಾಖಲೆಗಳನ್ನು ನಿರ್ಮಿಸಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್-ಭಾರತ ನಡುವಿನ ಟಿ20 ವಿಶ್ವಕಪ್ 2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಪೇರಿಸಿ ನ್ಯೂಜಿಲೆಂಡ್ ಗೆ ಗೆಲ್ಲಲು 256 ರನ್ ಗಳ ಬೃಹತ್ ಗುರಿ ನೀಡಿದೆ.
ಭಾರತದ ಪರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 89 ರನ್ ಪೇರಿಸಿದರೆ, ಅವರಿಗೆ ಅದ್ಭುತ ಸಾಥ್ ನೀಡಿದ ಅಭಿಷೇಕ್ ಶರ್ಮಾ ಕೂಡ 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 52 ರನ್ ಕಲೆಹಾಕಿದರು.
ಬಳಿಕ ಇಶಾನ್ ಕಿಶನ್ ಕೂಡ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮಾಡಿ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 54 ರನ್ ಕಲೆಹಾಕಿದರೆ, ಹಾರ್ದಿಕ್ ಪಾಂಡ್ಯಾ 18 ರನ್ ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಕ್ರೀಸ್ ಗೆ ಬಂದ ಶಿವಂದುಬೆ 8 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 26ರನ್ ಪೇರಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.
ಹಲವು ದಾಖಲೆಗಳ ನಿರ್ಮಾಣ, ಹೆಚ್ಚು ಬಾರಿ 250-plus ಸ್ಕೋರ್
ಇನ್ನು ಈ ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ಹಲವು ದಾಖಲೆಗಳ ನಿರ್ಮಾಣ ಮಾಡಿದ್ದು, ಟಿ20 ಮಾದರಿಯಲ್ಲಿ ಅತೀ ಹೆಚ್ಚು ಬಾರಿ 250+ ಸ್ಕೋರ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಇಂದಿನ ಪಂದ್ಯವೂ ಸೇರಿದಂತೆ ಭಾರತ ಈ ವರೆಗೂ 7 ಬಾರಿ 250+ ಸ್ಕೋರ್ ಮಾಡಿದ್ದು, ಭಾರತ ಹೊರತು ಪಡಿಸಿದರೆ ಸನ್ ರೈಸರ್ಸ್ ಹೈದರಾಬಾದ್ ತಂಡ 5 ಬಾರಿ 250+ ಸ್ಕೋರ್ ಮಾಡಿದೆ. ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ಸೆರ್ರೆ ತಂಡಗಳು 3 ಬಾರಿ 250+ ಸ್ಕೋರ್ ಮಾಡಿವೆ.
ಅಂತೆಯೇ ಭಾರತ ಒಂದೇ ಟೂರ್ನಿಯಲ್ಲಿ 2 ಬಾರಿ 250+ ಸ್ಕೋರ್ ಮಾಡಿದ ತಂಡ ಎಂಬ ಕೀರ್ತಿಗೂ ಭಾಜನವಾಗಿದ್ದು, 2024ರ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೂಡ ಈ ಸಾಧನೆ ಮಾಡಿತ್ತು.
Most 250-plus totals in Men’s T20s
7 - India
5 - SRH
3 - West Indies
3 - Zimbabwe
3 - Surrey
India is the second team to register three 250-plus scores in a T20 competition, alongside SRH in IPL 2024.
ಟಿ20 ವಿಶ್ವಕಪ್ ನಲ್ಲಿ 3ನೇ ಗರಿಷ್ಟ ಸ್ಕೋರ್
ಇನ್ನು ಇಂದು ಭಾರತ ಸಿಡಿಸಿದ 255 ರನ್ ಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಂದ 3ನೇ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮೊದಲು 2007ರಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 260ರನ್ ಕಲೆಹಾಕಿತ್ತು.
ಇದು ಟಿ20 ವಿಶ್ವಕಪ್ ನಲ್ಲಿ ದಾಖಲಾದ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಇದರ ನಂತರದ ಸ್ಥಾನದಲ್ಲಿ ಭಾರತ ಇದ್ದು ಇದೇ ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜಿಂಬಾಬ್ವೆ ವಿರುದ್ಧ 256 ರನ್ ಕಲೆಹಾಕಿತ್ತು. ಇದರ ನಂತರ ಇಂದಿನ ಪಂದ್ಯ ಇದೆ. ಅಂತೆಯೇ ಇಂಗ್ಲೆಂಡ್ ವಿರುದ್ಧ ಭಾರತ ಗಳಿಸಿದ್ದ 253 ರನ್ ಕೂಡ ಈ ಪಟ್ಟಿಯಲ್ಲಿ ಇದೆ.
Highest team totals in T20 WC
260/6 - SL vs KEN, Johannesburg, 2007
256/4 - IND vs ZIM, Chennai, 2026
255/5 - IND vs NZ, Ahmedabad, 2025 Final
254/6 - WI vs ZIM, Mumbai WS, 2026
253/7 - IND vs ENG, Mumbai WS, 2026 SF
246/7 - ENG vs IND, Mumbai WS, 2026 SF
ಟಿ20 ವಿಶ್ವಕಪ್ ಪಂದ್ಯದ ಇನ್ನಿಂಗ್ಸ್ ವೊಂದರಲ್ಲಿ ಅತೀ ಹೆಚ್ಚು ಬೌಂಡರಿ ಗಳಿಸಿದ 2ನೇ ತಂಡ
ಅಂತೆಯೇ ಈ ಪಂದ್ಯದಲ್ಲಿ ಭಾರತ ಒಟ್ಟು 37 ಬೌಂಡರಿಗಳನ್ನು ಭಾರಿಸಿದ್ದು ಆ ಮೂಲಕ ಟಿ20 ವಿಶ್ವಕಪ್ ಪಂದ್ಯದ ಇನ್ನಿಂಗ್ಸ್ ವೊಂದರಲ್ಲಿ ಅತೀ ಹೆಚ್ಚು ಬೌಂಡರಿ ಗಳಿಸಿದ 2ನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಇದಕ್ಕೂ ಮೊದಲು ಭಾರತ ಇದೇ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧವೂ 37 ಬೌಂಡರಿ ಭಾರಿಸಿತ್ತು. ಅದೇ ಪಂದ್ಯದಲ್ಲಿ ಇಂಗ್ಲೆಂಡ್ ಕೂಡ ಭಾರತದ ವಿರುದ್ಧ ಚೇಸಿಂಗ್ ವೇಳೆ 36 ಬೌಂಡರಿ ಭಾರಿಸಿತ್ತು.
Highest boundary count in a team innings in T20 WC
41 - SL vs KEN, Johannesburg, 2007
37 - IND vs ENG, Mumbai WS, 2026 SF
37 - IND vs NZ, Ahmedabad, 2026 Final
36 - ENG vs IND, Mumbai WS, 2026 SF
ಟಿ20 ವಿಶ್ವಕಪ್ ಪಂದ್ಯದ ಇನ್ನಿಂಗ್ಸ್ ವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್, 2ನೇ ತಂಡ
ಇದೇ ವೇಳೆ ಭಾರತ ಇಂದಿನ ತನ್ನ ಇನ್ನಿಂಗ್ಸ್ ನಲ್ಲಿ ಒಟ್ಟು 18 ಸಿಕ್ಸರ್ ಗಳನ್ನು ಸಿಡಿಸಿದ್ದು, ಆ ಮೂಲಕ ಟಿ20 ವಿಶ್ವಕಪ್ ಪಂದ್ಯದ ಇನ್ನಿಂಗ್ಸ್ ವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಗಳಿಸಿದ 2ನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಇದಕ್ಕೂ ಮೊದಲು 2014ರಲ್ಲಿ ನೆದರ್ಲೆಂಡ್ ಐರ್ಲೆಂಡ್ ವಿರುದ್ಧ 19 ಸಿಕ್ಸರ್ ಸಿಡಿಸಿದ್ದರೆ, ಹಾಲಿ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಕೂಡ ಜಿಂಬಾಬ್ವೆ ವಿರುದ್ಧ 19 ಸಿಕ್ಸರ್ ಸಿಡಿಸಿದೆ. ಭಾರತ ಕೂಡ ಹಾಲಿ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 19 ಸಿಕ್ಸರ್ ಸಿಡಿಸಿತ್ತು.
Most sixes in a T20 WC innings
19 - NED vs IRE, Sylhet, 2014
19 - WI vs ZIM, Mumbai WS, 2026
19 - IND vs ENG, Mumbai WS, 2026 SF
18 - IND vs NZ, Ahmedabad, 2026 Final
17 - IND vs ZIM, Chennai, 2026
16 - AUS vs IND, Bridgetown, 2010